Saturday, November 21, 2026

ಪ್ರಾಯೋಗಿಕ ಆವೃತ್ತಿ

ಕೆ.ಎಂ ಕೃಷ್ಣಗೆ ಪಿ.ಹೆಚ್.ಡಿ ಪದವಿ

ಮಳವಳ್ಳಿ ತಾಲ್ಲೂಕಿನ ಕಂದೇಗಾಲದ ಕೆ.ಎಂ.ಕೃಷ್ಣ ಅವರಿಗೆ ಮೈಸೂರು ವಿಶ್ವವಿದ್ಯಾಲಯವು ಪಿ.ಎಚ್. ಡಿ ಪದವಿ ನೀಡಿ ಗೌರವಿಸಿದೆ.

ಕನ್ನಡ ನಾಡಿನ ಹೆಸರಾಂತ ಅರ್ಥಶಾಸ್ತ್ರ ಲೇಖಕರಾದ ಡಾ.ಹೆಚ್.ಆರ್ ಕೃಷ್ಣಯ್ಯಗೌಡ ಅವರ ಸಲಹೆಯಂತೆ ಡಾ.ಎಸ್.ಟಿ. ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ”ಸೆಲ್ಪ್ ಹೆಲ್ಫ್ ಗ್ರೂಪ್ಸ್ ಅಂಡ್ ಎಂಪವರ್ ಮೆಂಟ್ ಆಫ್ ದ ಶೆಡ್ಯೂಲ್ ಟ್ರೈಬ್ ವುಮೆನ್ ಇನ್ ಕರ್ನಾಟಕ ಸ್ಟೇಟ್” (Self Help Groups and Empowerment of the Schedule Tribe Women in Karnataka State) ಎಂಬ ಸಂಶೋಧನಾ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾನಿಲಯ ಪಿ.ಹೆಚ್.ಡಿ ಪದವಿಗೆ ಅಂಗೀಕರಿಸಿದೆ.

ಕೆ.ಎಂ.ಕೃಷ್ಣ ಅವರು ಪ್ರಸ್ತುತ ಬನ್ನೂರಿನ ವಿವೇಕಾನಂದ ಪಿಯು ಕಾಲೇಜಿನಲ್ಲಿ ಹಿರಿಯ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜಿನ ಸಂಸ್ಥಾಪಕರು ಮತ್ತು ಸಿಬ್ಬಂದಿಗಳು ಹಾಗೂ ನಿವೃತ್ತ ಯೋಧ ರಾಜೇಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ