ಭಾರತೀಯ ಚಿತ್ರರಂಗಕ್ಕೆ ಅಪೂರ್ವವಾದ ಕೊಡುಗೆ ನೀಡಿದ ಡಾ.ಪುನೀತ್‌ರಾಜ್‌ಕುಮಾರ್ ಅವರನ್ನು ಮರೆಯಲಾಗದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ಮಂಡ್ಯ ನಗರದಲ್ಲಿರುವ ಎಸ್.ಬಿ.ಸಮುದಾಯ ಭವನದಲ್ಲಿ ಡಾ.ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗ, ಜಿಲ್ಲಾ ರಕ್ತನಿಧಿಕೇಂದ್ರ ಮಿಮ್ಸ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಆಯೋಜಿಸಿದ್ದ ಚಲನಚಿತ್ರ ನಾಯಕನಟ ಡಾ.ಪುನೀತ್ ರಾಜ್‌ಕುಮಾರ್ ಅವರ 2ನೇ ವರ್ಷದ ಸ್ಮರಣಾರ್ಥ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕವಯಸ್ಸಿಗೆ ಚಿತ್ರರಂಗ ಪ್ರವೇಶ ಮಾಡಿ, ಬಾಲನಟರಾಗಿ ರಾಷ್ಟç ಪ್ರಶಸ್ತಿಯನ್ನು ಪಡೆದ ಕೀರ್ತಿವಂತರು, ತಂದೆಯ ಹಾದಿಯಲ್ಲಿ ನಡೆದು ಚಿತ್ರರಂಗದೊಂದಿಗೆ ಅಪಾರ ಸಮಾಜಮುಖಿ ಸೇವೆಗಳನ್ನು ಮಾಡಿ ಕಣ್ಮೆರೆಯಾದ ಮಹಾಚೇತನ ಪುನೀತ್ ಅವರನ್ನು ಸ್ಮರಿಸುತ್ತಿರುವುದು ಶ್ಲಾಘನೀಯ ಎಂದು ನುಡಿದರು.
ಡಾ.ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಬಳಗವು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಜಿಲ್ಲಾ ರಕ್ತನಿಧಿ ಕೇಂದ್ರ ಮಿಮ್ಸ್ ಸಹಕಾರದೊಂದಿಗೆ ರಕ್ತದಾನ ಮಾಡುತ್ತಿರುವುದು ಸ್ಮರಣೀಯ ಸೇವಾಕಾರ್ಯವಾಗಿದೆ, ಎಲ್ಲರ ಸಹಕಾರ ದೊರಕುತ್ತಿರುವುದು ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೀವಧಾರೆ ಟ್ರಸ್ಟ್ ನಟರಾಜ್ ಮತ್ತು ತಂಡವು ಯಾವುದೇ ಪ್ರಚಾರವಿಲ್ಲದೆ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದ ಮಂಡ್ಯ ಜಿಲ್ಲೆಗೆ ರಾಜ್ಯಮಟ್ಟದಲ್ಲಿ ಉತ್ತಮ ಹೆಸರು ತಂದುಕೊಡಲು ಪ್ರಯತ್ನಪಡುತ್ತಿದ್ದಾರೆ, ಜೀವ ಉಳಿಸುವ ನಿಟ್ಟಿನಲ್ಲಿ ಶ್ರಮಪಡುತ್ತಿದ್ದಾರೆ ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ, ವಿಶ್ವದಲ್ಲಿ ರಕ್ತಕ್ಕೆ ಪರ್ಯಾಯವಾದ ಜೀವಾದ್ರವ್ಯ ಸಂಶೋಧನೆಯಾಗಿಲ್ಲ, ರಕ್ತಕ್ಕೆ ರಕ್ತವೇ ಔಷಧವಾಗಿದೆ, ರಕ್ತದಾನಿಗಳಿಂದ ಮಾತ್ರ ರಕ್ತಸಂಗ್ರಹಿಸಲು ಸಾಧ್ಯ ಎಂದು ನುಡಿದರು.
ಎಷ್ಟು ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತೇವೆಯೋ ಅಷ್ಟು ಜೀವಗಳನ್ನು ಉಳಿಸಲು ಆಶ್ರಯವಾಗುತ್ತದೆ, ರಕ್ತದಾನದ ಶಿಬಿರ ಅವಶ್ಯಕವಾದುದ್ದು, ಯುವಕರು ಎಷ್ಟು ಮಾನವೀಯತೆ ಮೆರೆದು ರಕ್ತದಾನ ಮಡುತ್ತಾರೋ ಅಷ್ಟು ಜೀವ ಉಳಿಸಬಹುದಾಗಿದೆ ಎಂದರು.
ಡಾ.ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಬಳಗದ ಬಿ.ಪಿ.ರಾಜು ಮಾತನಾಡಿ, ಅಪ್ಪು ಅವರ 2ನೇ ವರ್ಷದ ನೆನಪಿಗಾಗಿ ರಕ್ತದಾನ ಶಿಬಿರ ನಡೆಸಲು ತೀರ್ಮಾನಿಸಿ, ಸುಮಾರು 300 ಮಂದಿ ಸ್ವಯಂ ಪ್ರೇರಿತ ರಕ್ತದಾನಿಗಳು ನೋಂದಣೆ ಮಾಡಿಸಿಕೊಂಡಿದ್ದಾರೆ, ಈಗಾಲೇ 50 ಯುನಿಟ್ ರಕ್ತ ಸಂಗ್ರಹ ನಡೆದಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಡಾ.ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಬಳಗದ ಪದಾಧಿಕಾರಿಗಳು ಮತ್ತು ರಕ್ತದಾನಿಗಳು ನೀಡಿದ ಸುಮಾರು 200 ಯುನಿಟ್ ರಕ್ತವನ್ನು ಜಿಲ್ಲಾಸ್ಪತ್ರೆಯ ರಕ್ತನಿಧಿಕೇಂದ್ರದ ಸಿಬ್ಬಂದಿಗಳು ಸಂಗ್ರಹಿಸಿದರು.
ಕಾರ್ಯಕ್ರಮದಲ್ಲಿ ಡಾ.ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಬಳಗದ ಪದಾಧಿಕಾರಿಗಳಾದ ಹೇಮಂತ್, ಸಿದ್ದರಾಜ, ಆಕರ್ಶ್, ಸಚಿನ್, ಮಹೇಶ್, ಕಾರ್ತೀಕ್, ಅಭಿಷೇಕ್, ಜೀವಧಾರೆ ಟ್ರಸ್ಟ್ ನಟರಾಜ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕ ಕೆ.ಟಿ.ಹನುಮಂತು, ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯರು, ಸಿಬ್ಬಂದಿಗಳು ಹಾಜರಿದ್ದರು.




