ತಾಯಿಯನ್ನು ಗೌರವಿಸುವ ರೀತಿಯಲ್ಲಿ ನಮ್ಮ ಮಾತೃಭಾಷೆಯನ್ನು ಗೌರವಿಸಿ ಎಂದು ಶಾಸಕ ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ನಡೆದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ರಾಜ್ಯದಲ್ಲಿ ಸಾಕಷ್ಟು ಕನ್ನಡಿಗರು ಹುಟ್ಟಿ ಬೆಳೆದ ನಾಡಿನ ಕನ್ನಡ ಭಾಷೆ ಉಳಿಸಬೇಕಾಗಿದೆ ಮತ್ತು ಕನ್ನಡ ಭಾಷೆ ಮತ್ತು ಸಂಸ್ಕೃತಿ ಹಾಗೂ ಇಲ್ಲಿನ ಸಾಹಿತ್ಯ ಮತ್ತು ಪರಂಪರೆಯ ಬಗ್ಗೆ ನಾವು ಅಭಿಮಾನ ಪಡುತ್ತಾ, ಕನ್ನಡದ ಏಕೀಕರಣ ಮತ್ತು ನಾಡು-ನುಡಿಗಾಗಿ ಹೋರಾಟ ಮಾಡಿದ ಮತ್ತು ಶ್ರಮಿಸಿದ ಮಹಾನ್ ವ್ಯಕ್ತಿಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ತಹಸೀಲ್ದಾರ್ ಲೋಕೇಶ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸೋಣ ಎಂದು ಸಂದೇಶ ಸಾರಿದರು. ಕಳೆದ ಸಾಲಿನಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು.
ಈ ವೇಳೆ ತಾ.ಪಂ ಇಒ ಮಮತಾ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್, ಡಿವೈಎಸ್ಪಿ ಕೃಷ್ಣಪ್ಪ, ಆರೋಗ್ಯ ವೈದ್ಯಾಧಿಕಾರಿ ಸಂಜಯ್, ಡಾ.ವೀರಭದ್ರಪ್ಪ, ಪುರಸಭೆ ಸದಸ್ಯ ರಾಜಶೇಖರ ಶಿವಸ್ವಾಮಿ, ಕೃಷ್ಣ, ಪ್ರಮೀಳಾ, ಕೃಷ್ಣ, ನಂದಕುಮಾರ್, ಪುಟ್ಟಸ್ವಾಮಿ, ಮುಖಂಡರಾದ ದೇವರಾಜು ಹಾಗೂ ದೊಡ್ಡಯ್ಯ ಸೇರಿದಂತೆ ಹಲವರು ಇದ್ದರು.




