2023-24 ನೇ ಸಾಲಿನ ಮುಂಗಾರು ಖುತುವಿನಲ್ಲಿ ರೈತರು ಬೆಳೆದ ಭತ್ತವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನವೆಂಬರ್ 15 ರಿಂದ ನೋಂದಣಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2023-24 ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಟಾಸ್ಕ್ ಪೋಸ್೯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ-6, ಮದ್ದೂರು-6, ಮಳವಳ್ಳಿ-4, ಕೆ.ಆರ್.ಪೇಟೆ-6, ಪಾಂಡವಪುರ-4, ಶ್ರೀರಂಗಪಟ್ಟಣ- 4 ಹಾಗೂ ನಾಗಮಂಗಲ- 2 ಸೇರಿದಂತೆ ಒಟ್ಟು 32 ನೊಂದಣಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದರು.
ನೊಂದಣಿ ಕೇಂದ್ರಗಳನ್ನು ನಿಗದಿತ ಸಮಯಕ್ಕೆ ತೆರೆಯಿರಿ. ಕೇಂದ್ರದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ವ್ಯವಸ್ಥೆಗಳು ಕ್ರಮಬದ್ಧವಾಗಿ ಆಗಬೇಕು. ನೊಂದಣಿ ಕೇಂದ್ರಕ್ಕೆ ಬರುವ ರೈತರೊಂದಿಗೆ ಸೌಜನ್ಯವಾಗಿ ವರ್ತಿಸಿ ಎಂದರು.
ರೈತರು ನೊಂದಣಿ ಕೇಂದ್ರಕ್ಕೆ ಫ್ರೂಟ್ ಐ.ಡಿ, ಆಧಾರ್ ಕಾಡ್೯ ಜೋಡಣೆ ಮಾಡಿದ ಮತ್ತು ಎನ್.ಪಿ.ಸಿ ಐ ಯಾಕ್ಟಿವ್ ಇರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ಆಧಾರ್ ಕಾಡ್೯ ಪ್ರತಿ ಹಾಜರು ಪಡಿಸಿ ಹೆಸರು ನೊಂದಾಯಿಸಿಕೊಳ್ಳುವುದು ಎಂದರು.

ಡಿ.1ರಿಂದ ಭತ್ತ ಖರೀದಿ
ನೊಂದಣಿ ಮಾಡಿಕೊಂಡ ರೈತರಿಂದ ಡಿಸೆಂಬರ್ 1 ರಿಂದ ಮಾಚ್೯ 31 ರವರೆಗೆ ಭತ್ತ- ಸಾಮಾನ್ಯ ಪ್ರತಿ ಕ್ವಿಂಟಲ್ ಗೆ ರೂ. 2183, ಭತ್ತ ಗ್ರೇಡ್ ಎ ಗೆ ಕ್ವಿಂಟಲ್ ಗೆ ರೂ. 2203 ರಂತೆ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ನೀಡಿ ಖರೀದಿಸಲಾಗುವುದು. ಪ್ರತಿ ಎಕರೆಗೆ ಕನಿಷ್ಠ 25 ಕ್ವಿಂಟಾಲ್, ಗರಿಷ್ಠ 40 ಕ್ವಿಂಟಾಲ್ ಖರೀದಿಸಲಾಗುವುದು ಎಂದರು.
ಭತ್ತದ ಗುಣಮಟ್ಟವನ್ನು ಪರಿಶೀಲಿಸಲು ಅಗತ್ಯ ಗ್ರೇಡರ್ ಗಳನ್ನು ನೇಮಕ ಮಾಡಿ ಅವರಿಗೆ ತರಬೇತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಆಹಾರ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಕುಮಾರ್ ಮಾತನಾಡಿ, ಕಳೆದ ಸಾಲಿನಲ್ಲಿ 17,642 ರೈತರು ಹೆಸರು ನೋಂದಣಿ ಮಾಡಿಕೊಂಡು, 3,068 ರೈತರು 80,617 ಕ್ವಿಂಟಾಲ್ ಭತ್ತ ಖರೀದಿಯಾಗಿರುತ್ತದೆ. ಜಿಲ್ಲೆಯಲ್ಲಿ 7 ಲಕ್ಷದ 45 ಸಾವಿರ ಕ್ವಿಂಟಾಲ್ ದಾಸ್ತಾನು ಸಂಗ್ರಹಿಸುವ ಸಾಮಥ್ಯ೯ ದ ಗೋಡೌನ್ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಅಶೋಕ, ಎ.ಪಿ.ಎಂ.ಸಿ ಉಪನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.




