Wednesday, November 18, 2026

ಪ್ರಾಯೋಗಿಕ ಆವೃತ್ತಿ

ಹೆಣ್ಣುಭ್ರೂಣ ಹತ್ಯೆ ತಡೆಯುವಲ್ಲಿ ಆರೋಗ್ಯ ಇಲಾಖೆ ವಿಫಲ: ಭಾರತಿ ಶೆಟ್ಟಿ

ಮಂಡ್ಯ ತಾಲ್ಲೂಕಿನ ಹಾಡ್ಯ – ಹುಳ್ಳೆನಹಳ್ಳಿ ಪ್ರದೇಶದ ಆಲೆಮನೆಯಲ್ಲಿ ಹೆಣ್ಣುಭ್ರೂಣ ಪತ್ತೆ ದಂಧೆ ನಡೆದಿರುವುದು ಆರೋಗ್ಯ ಇಲಾಖೆಯ ವೈಫಲ್ಯತೆಯನ್ನು ಎತ್ತಿ ತೋರಿಸಿದೆ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದರು.

ಮಂಡ್ಯನಗರಕ್ಕೆ ಆಗಮಿಸಿದ ಅವರು ಜಿಲ್ಲಾಧಿಕಾರಿ ಡಾ ಕುಮಾರ ಅವರನ್ನು ಭೇಟಿಯಾಗಿ ಹೆಣ್ಣುಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಜಾಲದ ಕುರಿತು ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಪ್ರಕರಣದಲ್ಲಿ ಇಲಾಖಾ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ, ಹೆಣ್ಣುಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಮಾಡುವುದು ಕಾನೂನು ಬಾಹಿರವಾಗಿದ್ದರೂ ವ್ಯಾಪಕ ಜಾಲದ ಮೂಲಕ ದಂಧೆ ನಡೆದಿದೆ, ಈ ಬಗ್ಗೆ ಸದನದಲ್ಲಿ ದನಿ ಎತ್ತುವುದಾಗಿ ತಿಳಿಸಿದರು.

ಗ್ರಾಮೀಣ ಪ್ರದೇಶದ ಆಲೆಮನೆ ಮತ್ತು ಪರವಾನಿಗೆ ರಹಿತ ಆಸ್ಪತ್ರೆಯಲ್ಲಿ ಅಕ್ರಮ ದಂಧೆ ನಡೆದಿದೆ ಎಂದರೆ ಇದರಲ್ಲಿ ಅಧಿಕಾರಿಗಳು ಸೇರಿ ಹಲವರ ಕೈವಾಡ ಇದ್ದೇ ಇರುತ್ತದೆ, ಕರಾಳ ದಂಧೆಯ ಮುಖವಾಡವನ್ನ ಮಾಧ್ಯಮಗಳು ಬಯಲು ಮಾಡಿದ್ದು, ದಂಧೆಯ ಕರಾಳ ಮುಖ ಹೊರ ಬೀಳುತ್ತಿದ್ದಂತೆ, ವೈದ್ಯರು ಮತ್ತು ಅಧಿಕಾರಿಯ ಆತ್ಮಹತ್ಯೆ ಪ್ರಕರಣಗಳು ನಡೆದಿರುವುದು ಇದರ ಕ್ರೂರತೆಯನ್ನು ತೋರಿಸಿದೆ. ಬಹಳ ದೊಡ್ಡ ಮಟ್ಟದ ಜಾಲ ಇದರಲ್ಲಿ ಭಾಗಿಯಾಗಿದ್ದು, ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದೆ ಅನುಮಾನ ವ್ಯಕ್ತಪಡಿಸಿದರು.

ಪ್ರಕರಣ ಕುರಿತು ಸಿಓಡಿ ತನಿಖೆ ನಡೆಯುತ್ತಿದ್ದು, ತನಿಖೆ ಪಾರದರ್ಶಕ ವಾಗಿ ನಡೆದು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಯಾರದೋ ಪ್ರಭಾವಕ್ಕೆ ಒಳಗಾಗಿ ತನಿಖೆ ನಿಷ್ಕ್ರಿಯಗೊಳ್ಳಬಾರದು, ಕರಾಳ ದಂಧೆ ಕೋರರಿಗೆ ಶಿಕ್ಷೆ ಶಿಕ್ಷೆಯಾಗಲಿ. ಹೆಣ್ಣುಭ್ರೂಣಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ವಿರುದ್ಧ ಜನಜಾಗೃತಿಗಾಗಿ ಜಿಲ್ಲಾಡಳಿತ ಜಾಗೃತ ದಳ ರಚಿಸಿರುವುದು ಒಳ್ಳೆಯ ಬೆಳವಣಿಗೆ, ಸಾರ್ವಜನಿಕರು ಸಹ ಎಚ್ಚೆತ್ತುಕೊಂಡು ತಮ್ಮ ಸುತ್ತ ಮುತ್ತಲ ಪ್ರದೇಶದಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ಗಮನಹರಿಸಬೇಕು, ಅದೇ ರೀತಿ ಭ್ರೂಣ ಹತ್ಯೆ ತಡೆಗೆ ಸಹಕರಿಸಬೇಕೆಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಯಶೋಧ, ರೂಪ, ರಂಜಿತ, ಪೂರ್ಣಿಮಾ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ