ಗಂಡು ಹೆಣ್ಣು ಎಂಬ ಬೇಧ ಭಾವ ಬಿಡಬೇಕು ಮಗು ಯಾವುದಾದರೂ ಸ್ವೀಕರಿಸುವದನ್ನು ಪ್ರತಿ ದಂಪತಿ ಮೈಗೂಡಿಸಿಕೊಳ್ಳಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ್ ಹೇಳಿದರು.
ಅವರು ಶ್ರೀರಂಗಪಟ್ಟಣ ತಾಲ್ಲೂಕಿನ ಹುಲಿಕೆರೆ ಗ್ರಾಮದ ಎಂ ಎನ್ ಪಿ ಎಂ ಕಾಲೋನಿಯ ಅರಳಿಕಟ್ಟೆ ಹತ್ತಿರ
ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಬೆಳಗೊಳ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವತಿಯಿಂದ ಆಯೋಜಿಸಿದ್ದ “ಹೆಣ್ಣು ಭ್ರೂಣ ಹತ್ಯೆತಡೆ ಕುರಿತು”ಅರಿವು ಮೂಡಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಭ್ರೂಣ ಲಿಂಗ ಪತ್ತೆ ಕಾನೂನಿಗೆ ವಿರುದ್ಧ ಹಾಗೂ ಶಿಕ್ಷಾರ್ಹ ಅಪರಾಧವಾಗಿದ್ದು ಹೆಣ್ಣು ಭಗವಂತನ ಸೃಷ್ಟಿಯ ಹೂ ಅದನ್ನು ಮೊಗ್ಗಲ್ಲೆ ಚಿವುಟದಿರಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ,ಎಲ್ಲಾ ರಂಗದಲ್ಲಿ ಮುಂದೆ ಇದ್ದು ಹೆಣ್ಣು ಭ್ರೂಣ ಹತ್ಯೆ ಮಹಾಪಾಪ ಭ್ರೂಣ ಹತ್ಯೆಯಿಂದ ಸ್ತ್ರೀ ಪುರುಷರ ಸಂಖ್ಯೆಯಲ್ಲಿ ವ್ಯತ್ಯಾಸವಾಗುತ್ತದೆ ಇದು ಸಮಾಜಕ್ಕೆ ಮಾರಕ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಅಣ್ಣಯ್ಯ, ವೆಂಕಟೇಶ, ನಾಶೀರ, ಅಪ್ಪಾಜಿ ಶೆಟ್ಟಿ,ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜ್ಯೋತಿ, ಅಂಗನವಾಡಿ ಕಾರ್ಯಕರ್ತೆ ಶೋಭಾ, ಅಶಾ ಕಾರ್ಯಕರ್ತೆ ಅನಸುಯಾ ಹಾಗೂ ಮಕ್ಕಳ ತಾಯಂದಿರು, ಇತರರು ಹಾಜರಿದ್ದರು.




