ಈ ಹಿಂದೆ ಆರ್.ಎಸ್.ಎಸ್ ಸಂಘಟನೆಯೆಂದು ಜರಿದು ಅದೊಂದು ವಿಚ್ಛಿದ್ರಕಾರಿ ಸಂಘಟನೆಯೆಂದು ವಾಚಾಮಗೋಚಾರವಾಗಿ ಹೆಚ್.ಡಿ.ಕುಮಾರಸ್ವಾಮಿ ಕ್ಲಾಸ್ ತೆಗೆದುಕೊಂಡಿದ್ದ ವಿಡಿಯೋ ಸದ್ಯ ವೈರಲ್ ಆಗಿದ್ದು, ಈ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್ ಪಕ್ಷವು, ಕುಮಾರಸ್ವಾಮಿಯವರೇ ಆಗಿನ ಪ್ರಜ್ಞೆ ಈಗ ಎಲ್ಲಿ ಹೋಗಿದೆ ಎಂದು ಪ್ರಶ್ನೆ ಮಾಡಿದೆ.
ಮಾನ್ಯ @hd_kumaraswamy ಅವರೇ, ಕೆಲವೇ ದಿನಗಳ ಹಿಂದೆ, ನಿಮ್ಮದೇ ಬಾಯಲ್ಲಿ ಆಡಿದಂತಹ ಮಾತುಗಳಿವು.
RSS ಎಂಬ ವಿಚ್ಛಿದ್ರಕಾರಿ ಸಂಘಟನೆಯನ್ನು ವಿರೋಧಿಸಿ ಬಹಳ ಸೊಗಸಾಗಿ ಮಾತಾಡಿದ್ದೀರಿ, ಈಗ ಆ ನಿಮ್ಮ ಪ್ರಜ್ಞೆ ಎಲ್ಲಿ ಹೋಯ್ತು?
ಮೊನ್ನೆ ಮೊನ್ನೆಯಷ್ಟೇ ಕಲ್ಲಡ್ಕದಲ್ಲಿ ನಿಮ್ಮ ಪ್ರಜ್ಞೆಯನ್ನು RSSನ ಪದತಲದಲ್ಲಿಟ್ಟು ಬರುವಾಗ ನಿಮ್ಮ ಪ್ರಜ್ಞೆ… pic.twitter.com/X69wZOw642
— Karnataka Congress (@INCKarnataka) December 23, 2023
“>
ಮಾನ್ಯ ಹೆಚ್.ಡಿ.ಕುಮಾರಸ್ವಾಮಿ ಅವರೇ ಕೆಲವೇ ದಿನಗಳ ಹಿಂದೆ, ನಿಮ್ಮದೇ ಬಾಯಲ್ಲಿ ಆಡಿದಂತಹ ಮಾತುಗಳಿವು. RSS ಎಂಬ ವಿಚ್ಛಿದ್ರಕಾರಿ ಸಂಘಟನೆಯನ್ನು ವಿರೋಧಿಸಿ ಬಹಳ ಸೊಗಸಾಗಿ ಮಾತಾಡಿದ್ದೀರಿ, ಈಗ ಆ ನಿಮ್ಮ ಪ್ರಜ್ಞೆ ಎಲ್ಲಿ ಹೋಯ್ತು? ಮೊನ್ನೆ ಮೊನ್ನೆಯಷ್ಟೇ ಕಲ್ಲಡ್ಕದಲ್ಲಿ ನಿಮ್ಮ ಪ್ರಜ್ಞೆಯನ್ನು RSSನ ಪದತಲದಲ್ಲಿಟ್ಟು ಬರುವಾಗ ನಿಮ್ಮ ಪ್ರಜ್ಞೆ ಎಲ್ಲಿ ಕಳೆದುಹೋಗಿತ್ತು? ಅಂದಹಾಗೆ ಮೊನ್ನೆ ಮೋದಿಯವರನ್ನು ಭೇಟಿಯಾದಾಗ RSSನ ದೇಶವಿರೋಧಿ ನಿಲುವುಗಳ ಬಗ್ಗೆ ಮೋದಿಯವರಿಗೆ ತಿಳಿಸಿದಿರಾ? ಎಂದು ಕಾಂಗ್ರೆಸ್ ಕೆಣಕಿದೆ.




