ರೈತ ನಾಯಕ ಕೆ.ಎಸ್ ಪುಟ್ಟಣ್ಣಯ್ಯ ಕರ್ನಾಟಕ ರೈತ ಸಂಘ ಕಂಡಂತಹ ಧೀಮಂತ ಹೋರಾಟಗಾರ
ರಾಗಿದ್ದರು, ರಾಜಕಾರಣಿಯಾಗಿದ್ದರೂ ಸರಳ ಜೀವಿಯಾಗಿ ಬದುಕನ್ನು ಸವೆಸಿದವರು ಎಂದು ರೈತ ಸಂಘದ ಮಹಿಳಾ ಮುಖಂಡರಾದ ಲತಾ ಶಂಕರ್ ಹೇಳಿದರು
ಮಂಡ್ಯದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯರವರ ಕಚೇರಿಯಲ್ಲಿ ರೈತ ದಿನಾಚರಣೆ ಹಾಗೂ ನಿತ್ಯ ಶಾಸಕ ಕೆ.ಎಸ್.ಪುಟ್ಟಣ್ಣನವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರ ಅಭಿವೃದ್ಧಿಗೆ ಶ್ರಮಿಸಿದ್ದ ದಿ.ಪುಟ್ಟಣ್ಣಯ್ಯನವರೂ ರೈತ ನಾಯಕರಾಗಿ ಹೋರಾಡುವುದರ ಜೊತೆಗೆ ಶಾಸಕರಾಗಿ ಸದನದಲ್ಲಿ ರೈತರ, ಕೃಷಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದರು. ಇಂತಹ ಇಬ್ಬರು ಮಹಾನ್ ನಾಯಕರ ಸ್ಮರಣೆ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರೊ.ಹುಲುಕೆರೆ ಮಹದೇವು, ರೈತ ಸಂಘದ ಶಿವಳ್ಳಿ ಚಂದ್ರಶೇಖರ್, ಕೀಲಾರ ಸೋಮಶೇಖರ್, ಇಂಡುವಾಳು ಸಿದ್ದೇಗೌಡ, ಸುಚೇಂದ್ರ, ರಮೇಶ್ ಕಾರ್ಯಕ್ರಮದಲ್ಲಿ ಹಾಜರಿದರು.




