ಬರಗಾಲ ಎದುರಿಸುವ ಆತ್ಮಸ್ಥೈರ್ಯ ತುಂಬಿದಾಗ ರೈತರ ದಿನೋತ್ಸವಕ್ಕೆ ಮಹತ್ವ ಬರುತ್ತದೆ ಎಂದು ಮದ್ದೂರು ಪುರಸಭಾ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು ಅಭಿಪ್ರಾಯಪಟ್ಟರು.
ರೈತ ದಿನಾಚರಣೆ ಅಂಗವಾಗಿ ರೈತ ನಾಯಕ ಪ್ರೊ: ಎಂ.ಡಿ.ನಂಜುಡಸ್ವಾಮಿ ಪುತ್ಥಳಿ ಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಎಂ.ಸಿ.ಬಸವರಾಜು, ರೈತರು ಸಾಲಗಾರರಲ್ಲ ಸರ್ಕಾರವೇ ಬಾಕಿದಾರ ” ಎಂದು ಪ್ರೊಫೆಸರ್. ಎಂ. ಡಿ.. ನಂಜುಂಡಸ್ವಾಮಿ ನಮಗೆ ತಿಳಿಸಿದವರು. ರೈತರಿಗೆ ಅಗತ್ಯವಾದ ಬೀಜ, ಗೊಬ್ಬರ , ಸಂಸ್ಕರಣಾ ಘಟಕಗಳು ಮುಕ್ತ ಮಾರುಕಟ್ಟೆ, ವೈಜ್ಞಾನಿಕವಾದ ಬೆಳೆಗೆ ತಕ್ಕ ಬೆಲೆ, ಹಾಗೂ ಪರಿಸರದಲ್ಲಿ ಆಗುವ ಪ್ರಕೃತಿ ವಿಕೋಪಗಳನ್ನು , ನಿಭಾಯಿಸಲು ಉನ್ನತ ಕೆರೆ ಕಟ್ಟೆಗಳ ಸುಸ್ಥಿರ ಅಭಿವೃದ್ಧಿ, ಸಕಾಲದಲ್ಲಿ ಸಹಕಾರ ಸಂಘದ ಮೂಲಕ ಹಣಕಾಸಿನ ನೆರವು ಕಲ್ಪಿಸುವ ಮೂಲಕ , ಅಗತ್ಯಕ್ಕೆ ತಕ್ಕಂತೆ ಜಾಗೃತಿ ಮೂಡಿಸಿ , ಧವಸ , ಧಾನ್ಯ ಹಣ್ಣು ತರಕಾರಿ ತೋಟದ ಬೆಳೆಗಳ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಕೃಷಿ ಇಲಾಖೆ ಮೂಲಕ ಕ್ರಮವಹಿಸಬೇಕು ಎಂದರು.
ತಕ್ಷಣ ಈ ಸಾಲಿನಲ್ಲಿ ಬರಗಾಲ ಇರುವುದರಿಂದ ರೈತರ ಕೃಷಿ ಮತ್ತು ಅದರ ಸಂಬಂಧಿತ ಸಹಕಾರ ಸಂಘ, ವಾಣಿಜ್ಯ , ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಮಾಡಿರುವ ಒಡವೆ , ಜಮೀನು ಅಥವಾ ಇನ್ನಿತರ ಸಾಲಗಳನ್ನು ಒಮ್ಮೆ ಮನ್ನಾ ಮಾಡುವುದು, ಮತ್ತು ನೀರಿನ ಸದ್ಬಳಕೆ ಬಗೆಗೆ ಜಾಗೃತಿ ಮೂಡಿಸಬೇಕೆಂದರು.
ವಿಶ್ವ ರೈತ ದಿನಾಚರಣೆಯ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಅಹಿಂದ ಸಂಘಟನೆಯ ಮುಖಂಡರಾದ, ಅಧ್ಯಕ್ಷ ಅತಗೂರು ನಿಂಗಯ್ಯ, ಉಪಾಧ್ಯಕ್ಷ ಕೆ.ಟಿ.ಶಿವಕುಮಾರ,ಇನಿಯಾತ್ ಉಲ್ಲಾ ಖಾನ್, ಪ್ರದಾನ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ, ಕಾರ್ಯಾಧ್ಯಕ್ಷ, ಶಶಿ ಕುಮಾರ್ ಮಾರ್ಗದರ್ಶಕರು, ಮಹದೇವಪ್ಪ, ಎಂ. ಮಂಚಶೆಟ್ಟಿ, ಕಡಿಲುವಾಗಿಲು. .ಡಿ.ಸಿ.ಮಹೇಂದ್ರ. ಬಿ.ಪಿ.ಗೀರೀಶ್.ದೇವರಾಜ್.ಹುಚ್ಚಮರಿ ಹಾಗೂ ಇತರರು ಇದ್ದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.




