Friday, November 20, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ದೇವಾಲಯ ವಿವಾದಕ್ಕೂ ಶಾಸಕರಿಗೂ ಸಂಬಂಧವಿಲ್ಲ: ಮಲ್ಲಣ್ಣ

ಮಳವಳ್ಳಿ ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗವಿರುವ ಆಂಜನೇಯಸ್ವಾಮಿ ದೇವಸ್ಥಾನವು ಎಲ್ಲ ಸಮುದಾಯಕ್ಕೆ ಸೇರಿದ್ದಾಗಿದ್ದು, ಸಾರ್ವಜನಿಕರ ಸ್ವತ್ತು ಆಗಿದೆ, ಕೆಲವರು ಅಕ್ರಮವಾಗಿ ದೇವಸ್ಥಾನದ ಆಸ್ತಿಯನ್ನು ಟ್ರಸ್ಟ್ ಹೆಸರಿಗೆ ಮಾಡಿಸಿಕೊಂಡು ಸ್ವಾರ್ಥಕ್ಕಾಗಿ ವಾಣಿಜ್ಯ ಮಳಿಗೆಗಳನ್ನು ಕಟ್ಟಲು ಮುಂದಾಗುತ್ತಿದ್ದಾರೆ, ದೇವಸ್ಥಾನದ ಆಸ್ತಿ ರಕ್ಷಣೆಗಾಗಿ ಎಲ್ಲಾ ಪಕ್ಷದ ಮುಖಂಡರು ಹಾಗೂ ಸಮುದಾಯದವರು ಕಾನೂನು ಹೋರಾಟ ಮಾಡುತ್ತಿದ್ದೇವೆಯೇ ಹೊರತು ಶಾಸಕ ಪಿ.ಎಂ ನರೇಂದ್ರಸ್ವಾಮಿಗೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಮುಖಂಡ ಮಲ್ಲಣ್ಣ ಸ್ಪಷ್ಟಪಡಿಸಿದರು.

ಮಳವಳ್ಳಿ ಪಟ್ಟಣದ ಕೋಟೆ ರಾಮಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕೋಟೆ ಮುಖಂಡ ಚಿಕ್ಕಮೊಗಣ್ಣ ಎಂಬುವವರು ದೇವಸ್ಥಾನದ ವಿಚಾರದಲ್ಲಿ ಶಾಸಕ ಪಿ.ಎಂ ನರೇಂದ್ರಸ್ವಾಮಿಯವರ ಹೆಸರನ್ನು ಬಳಸುತ್ತಿರುವುದು ಖಂಡನೀಯ, ದೇವಸ್ಥಾನದ ಅಭಿವೃದ್ದಿಗಾಗಿ ನರೇಂದ್ರಸ್ವಾಮಿ ಅವರು ಅನುದಾನ ಕೊಟ್ಟಿದ್ದಾರೆ, ದೇವಸ್ಥಾನದ ಜಾಗದಲ್ಲಿ ಅಂಗಡಿ ಮಳಿಗೆ ನಿರ್ಮಾಣ ಮಾಡದಂತೆ ಸಾರ್ವಜನಿಕರೆಲ್ಲ ವಿರೋಧಿಸುತ್ತಿದ್ದಾರೆಯೇ ಹೊರತು, ಇದರಲ್ಲಿ ನರೇಂದ್ರಸ್ವಾಮಿ ಅವರ ಪಾತ್ರವಿಲ್ಲ ಎಂದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜರಾಗಿದ್ದ ಅವಧಿ, ಅಂದರೆ 1901ರಲ್ಲಿಯೇ ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿಸಿದ್ದು, ಅಂಜನೇಯಸ್ವಾಮಿ ದೇವಸ್ಥಾನದ ಆಸ್ತಿಯನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು.

nudikarnataka.com

ಬಿಜೆಪಿ ಹಿರಿಯ ಮುಖಂಡ ಅಪ್ಪಾಜಿಗೌಡ ಮಾತನಾಡಿ, ಟ್ರಸ್ಟ್ ಸ್ಥಾಪಿಸಿಕೊಂಡು ಒಂದು ಸಾವಿರ ಹಾಗೂ ಐದು ಲಕ್ಷ ಅಡ್ವಾನ್ಸ್ ಪಡೆದಿರುವುದು ಯಾವ ಉದ್ದೇಶಕ್ಕಾಗಿ ? ಅಂಗಡಿ ಮಳಿಗೆ ಕಾಮಗಾರಿಯನ್ನು ಮುಂದುವರೆಸದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆಇದ್ದರೂ ಕೂಡ, ರಜೆ ಇದ್ದ ಸಂದರ್ಭದಲ್ಲಿ ಕೆಲಸ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಖಂಡಿಸಿದರು.

ಯುವ ಮುಖಂಡ ನಂದೀಶ್ ಮಾತನಾಡಿ, ಹಿಂದೆ ಅಧಿಕಾರದಲ್ಲಿದ್ದ ಅನ್ನದಾನಿ ಅವರು ಅಕ್ರಮ ಅಂಗಡಿ ಮಳಿಗೆ ನಿರ್ಮಾಣಕ್ಕೆ ಕಡಿವಾಣ ಹಾಕಿದ್ದರೇ ಇಂದು ಒಕ್ಕಲಿಗರು ಎರಡು ಭಾಗ ಆಗುತ್ತಿರಲ್ಲಿಲ್ಲ, ಆಂಜನೇಯ ದೇವಸ್ಥಾನದ ಆವರಣ ಶ್ರೀಶೈಲದಿಂದ ಬರುವ ಪರ್ವತಗುಡ್ಡರನ್ನು ಪೂಜೆ ಮಾಡಿದ ಸ್ಥಳವಾಗಿರುವುದರಿಂದ ಸಾರ್ವಜನಿಕರು ಒಂದೆಡೆ ಸೇರಲು ಜಾಗ ಬೇಕಿರುವುದರಿಂದ ಅಕ್ರಮವಾಗಿ ಕಟ್ಟಿರುವ ಅಂಗಡಿ ಮಳಿಗೆಗಳನ್ನು ತೆರೆವುಗೊಳಿಸಬೇಕು, ಹಿಂದೆ ಇದ್ದ ಭಾವಿಯನ್ನು ಪುನರ್ ತೆರೆಯಬೇಕು, ವಿಗ್ರಹಗಳನ್ನು ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಲಿಂಗಪ್ಪ, ಬೊಕ್ಕಳೇಗೌಡ, ಶಿವರಾಜು, ಲೋಕೇಶ್, ಮಾದಯ್ಯಣ್ಣ,  ಅಪ್ಪಾಜಿಗೌಡ, ರಾಜಕುಮಾರ್, ಸತೀಶ್ ಹಾಗೂ ಮಹದೇವಸ್ವಾಮಿ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ