Friday, November 20, 2026

ಪ್ರಾಯೋಗಿಕ ಆವೃತ್ತಿ

ದೇಶದ ಒಟ್ಟಾರೆ ಆರ್ಥಿಕತೆ ರೈತನ ಮೇಲೆ ಅವಲಂಬಿತ: ಶಂಕರಯ್ಯ

ಭಾರತವು ಪ್ರಾಚೀನ ಕಾಲದಿಂದಲೂ ಕೃಷಿ ಪ್ರಧಾನವಾದ ರಾಷ್ಟ್ರವಾಗಿದೆ, ಆದ್ದರಿಂದ ದೇಶದ ಒಟ್ಟಾರೆ ಆರ್ಥಿಕತೆಯು ರೈತನ ಮೇಲೆ ಅವಲಂಬಿತವಾಗಿದೆ ಮತ್ತು ರೈತನನ್ನು ವಿಶ್ವದ ಅತ್ಯಂತ ಶ್ರಮಜೀವಿ ಎಂದು ಪರಿಗಣಿಸಲಾಗಿದೆ ಎಂದು ನಿವೃತ್ತ ಕೃಷಿ ಪ್ರಾಧ್ಯಾಪಕ ಶಂಕರಯ್ಯ ಅಭಿಪ್ರಾಯ ಭಟ್ಟರು.

ಮಳವಳ್ಳಿ ತಾಲೂಕಿನ ಅಂಚೆದೊಡ್ಡಿ ಮತ್ತು ಕಂದೇಗಾಲ ಗ್ರಾಮದಲ್ಲಿ ನಡೆದ ಕೃಷಿ ವಿಶ್ವವಿದ್ಯಾಲಯ
ಬೆಂಗಳೂರು, ಕೃಷಿ ಮಹಾವಿದ್ಯಾಲಯ ವಿ.ಸಿ ಫಾರಂ ಮಂಡ್ಯ. ಸ್ಟೂಡೆಂಟ್ ರೆಡಿ ಯೋಜನೆ ಅಡಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ, ಬೆಳೆ ಪ್ರಾತ್ಯಕ್ಷತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಲ ರೈತರಿಗೆ ಕೃಷಿ ತಂತ್ರಜ್ಞಾನದ ಬಳಕೆ ಗೊತ್ತಿಲ್ಲ, ಬರೀ ಸಾಂಪ್ರದಾಯಿಕ ವಿಧಾನಗಳಿಂದ ಆಹಾರ ಧಾನ್ಯಗಳನ್ನು ಉತ್ಪಾದಿಸುತ್ತಾರೆ. ಸಮಾಜದ ಹಾಗೂ ದೇಶದ ಅಭಿವೃದ್ಧಿಗೆ ಜೀವನ ಸವೆಸುತ್ತಾ ಬದುಕುತ್ತಿದ್ದಾನೆ. ಎಲ್ಲರಿಗೂ ಅನ್ನ ನೀಡುವ ರೈತ ಹಸಿವಿನಿಂದ ಬಳಲುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತರು ಕಷ್ಟಪಟ್ಟು ದುಡಿದ ಆಹಾರ ಧಾನ್ಯಗಳಿಗೆ ಯೋಗ್ಯವಾದ ಬೆಲೆ ದೊರೆಯದೇ, ಬಹಳ ಅಗ್ಗದ ಬೆಲೆ ನಿಗದಿಪಡಿಸುವುದು ಮತ್ತು ರೈತರಿಗೆ ವರ್ತಕರು ಇಲ್ಲಸಲ್ಲದ ಮಾಹಿತಿ ನೀಡಿ ಅವರನ್ನು ದಾರಿ ತಪ್ಪಿಸುವುದಾಗಿದೆ. ಇತರ ದೇಶಗಳಿಗೆ ಹೋಲಿಸಿದಾಗ ಭಾರತೀಯ ರೈತರು ಸಾಂಪ್ರದಾಯಿಕ ಕೃಷಿಯಲ್ಲಿ ಹೆಕ್ಟೆರ್‌ ಗೆ ಕಡಿಮೆ ಇಳುವರಿ ಬರುತ್ತಿದೆ, ಹಾಗಾಗಿ ಆಧುನಿಕ ವೈಜ್ಞಾನಿಕ ಯುಗದಲ್ಲಿ ಹೊಸ ಆವಿಷ್ಕಾರಗಳು ಕೃಷಿ ಕ್ಷೇತ್ರದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸುತ್ತಿದ್ದು, ಕೃಷಿ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡಿ ಹೊಸ ಹೊಸ ಆವಿಷ್ಕಾರಗಳನ್ನು ಪದ್ಧತಿಗಳನ್ನು ಬಳಸುವಂತೆ ರೈತರಿಗೆ ಮನವೊಲಿಸಬೇಕು ಎಂದು ತಿಳಿಸಿದರು.

ಕೃಷಿ ವಿಸ್ತರಣಾಧಿಕಾರಿ ಡಾ. ರಂಗನಾಥ್ ಮಾತನಾಡಿ, ರೈತರ ಬದುಕನ್ನು ಹಸನಗೊಳಿಸುವಂತಹ ಹಲವಾರು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೈಗೊಂಡಿದ್ದು, ರೈತರನ್ನು ಮುನ್ನೆಲೆಗೆ ತರುವಂತಹ  ಕೃಷಿಯಲ್ಲಿ ಯುವಕರನ್ನು ಭಾಗಿಯಾಗಿಸುವಂತಹ ಅವಕಾಶಗಳನ್ನು ನೀಡುತ್ತಿದೆ, ಮಾರುಕಟ್ಟೆಯ ವೆಚ್ಚವನ್ನು ತಗ್ಗಿಸಿ ರೈತರ ಆದಾಯವನ್ನು ಹೆಚ್ಚಿಸಬೇಕು, ಕೃಷಿಯಲ್ಲಿ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ರೈತರಿಗೆ ಸರ್ಕಾರ ಹಲವಾರು ಯೋಜನೆಗಳ ಮೂಲಕ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆನ್ನಿಗರಾಮ, ಸದಸ್ಯರಾದ ರಾಧಾ, ಅನು ಕುಮಾರ್, ಪ್ರಾಧ್ಯಾಪಕರಾದ ಡಾ. ಶಿವಕುಮಾರ್, ಡಾ. ಪೂಜಾಪಾಟೀಲ್, ಡಾ.ರಾಘವೇಂದ್ರ, ಡಾ.ಕೃಪಾ ಶೆಟ್ಟಿ,
ಗ್ರಾಮಸ್ಥರಾದ ಹೇಮಾವತಿ, ನಾಗೇಶ್, ನಂಜುಂಡೇಗೌಡ, ದೊಡ್ಡೇಗೌಡ, ನಾಗೇಗೌಡ ಹಾಗೂ ನಿಂಗರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ