✍️ ಮೂಲ: ಖುಷ್ಬೂ ವತ್ನಾನಿ
(ಕನ್ನಡಕ್ಕೆ: ಮಂಜುಳ ಕಿರುಗಾವಲು)
ಚಳಿಗಾಲದ ಒಂದು ರಾತ್ರಿ,
ಶ್ರೀಮಂತನೊಬ್ಬ ಹೊರಗೆ ಕುಳಿತಿದ್ದ
ಒಬ್ಬ ಬಡ ಮುದುಕನನ್ನು ಕಂಡು ಹತ್ತಿರ ಹೋಗಿ ಕೇಳುತ್ತಾನೆ..
ಚಳಿ ಆಗುವುದಿಲ್ಲವೆ ನಿಮಗೆ ಚಳಿಯಲ್ಲಿ ಕುಳಿತುಕೊಂಡಿದ್ದೀರಿ ಜೊತೆಗೆ ಸ್ವೇಟರ್ ಕೂಡ ಹಾಕಿಲ್ಲವಲ್ಲ ಎಂದು…
ಮುದುಕ ಹೇಳುತ್ತಾನೆ ನನ್ನ ಹತ್ತಿರ ಸ್ವೇಟರ್ ಇಲ್ಲ. ಅಲ್ಲದೆ ಚಳಿ ನನಗೆ ಅಭ್ಯಾಸವಾಗಿದೆ.
ಶ್ರೀಮಂತ ಹೇಳುತ್ತಾನೆ ಸ್ವಲ್ಪ ಹೊತ್ತು ಇರು ನಾನು ಮನೆಗೆ ಹೋಗಿ ನಿನಗೆ ಸ್ವೇಟರ್ ತರುತ್ತೇನೆ ಎಂದು
ಆ ಬಡ ಮುದುಕನಿಗೆ ಖುಷಿಯಾಗುತ್ತೆ.
ಸರಿ ಬನ್ನಿ ಕಾಯುತ್ತೇನೆ ಎಂದು ಹೇಳುತ್ತಾನಲ್ಲದೆ ಶ್ರೀಮಂತನಿಗಾಗಿ ಕಾಯುತ್ತಾ ಅಲ್ಲೆ ಕೂರುತ್ತಾನೆ.
ಮನೆಗೆ ಹೋದ ಶ್ರೀಮಂತ ಮುದುಕನಿಗೆ ಹೇಳಿದ್ದ ಮಾತು ಮರೆತು.. ತನ್ನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾನೆ.
ಶ್ರೀಮಂತನಿಗೆ ಮುಂಜಾನೆ ಎದ್ದಾಗ ಆ ಬಡ ಮುದುಕ ಮತ್ತು ಅವನಿಗೆ ಕೊಟ್ಟ ಮಾತು ನೆನಪಾಗಿ ಕೂಡಲೆ ಮುದುಕನಿದ್ದಲ್ಲಿಗೆ ಹೋಗುತ್ತಾನೆ. ಆದರೆ ಮುದುಕ ಚಳಿ ತಾಳಲಾರದೆ ಸತ್ತು ಹೋಗಿರುತ್ತಾನೆ.
ಆದರೆ, ಸತ್ತ ಆ ಮುದುಕನ ಕೈಯಲ್ಲೊಂದು ಪತ್ರವನ್ನು ಕಂಡು ಶ್ರೀಮಂತ ವ್ಯಕ್ತಿ ಆ ಪತ್ರ ತೆರೆದು ಓದುತ್ತಾನೆ.
ಚಳಿ ತಡೆಯಲು ನನ್ನ ಬಳಿ ಬೆಚ್ಚನೆಯ ಬಟ್ಟೆಯಿಲ್ಲದಿದ್ದಾಗ, ನಾನು ಚಳಿಯನ್ನು ಸಹಿಸುವ ದೃಢವಾದ ಮಾನಸಿಕ ಶಕ್ತಿಯನ್ನು ಹೊಂದಿದ್ದೆ.. ಆದರೆ, ನೀವು ನನಗೆ ಚಳಿ ತಡೆಯಲು ಸ್ವೇಟರ್ ನೀಡುತ್ತೇನೆ ಎಂದಾಗ ಚಳಿ ತಡೆಯಲು ಸ್ವೇಟರ್ ದೊರಕುತ್ತದೆ ಎಂಬ ಆಸೆಯೂ ನನ್ನಲ್ಲಿದ್ದ ಮಾನಸಿಕ ಶಕ್ತಿಯನ್ನು ಕಸಿದುಕೊಂಡಿತು. ನೀವು ನೀಡಿದ ಭರವಸೆಯನ್ನು ನಿಮ್ಮಿಂದ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದಾದರೆ ಭರವಸೆಯನ್ನಾದರೂ ಯಾಕೆ ನೀಡಬೇಕು.
ನೀವು ನೀಡಿದ ಭರವಸೆ ನಿಮಗೆ ಅಷ್ಟು ಮುಖ್ಯವಲ್ಲದಿರಬಹುದು. ಆದರೆ, ಅದನ್ನು ನಂಬಿದ ನನ್ನಂತವರಿಗೆ ತುಂಬಾ ಮುಖ್ಯವಾಗಿರುತ್ತದೆ.




