Friday, November 20, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಸಮರ್ಪಕ ವಿದ್ಯುತ್ ಪೂರೈಕೆಗೆ ಕೆ.ಆರ್.ಎಸ್ ಪಕ್ಷದ ಒತ್ತಾಯ

ಮಳವಳ್ಳಿ ತಾಲ್ಲೂಕಿ ಕಿರುಗಾವಲು ಚೆಸ್ಕಾಂ ಕಚೇರಿಗೆ ಭೇಟಿ ನೀಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ಸಮರ್ಪಕ ವಿದ್ಯುತ್ ನೀಡುವಂತೆ ಅಧಿಕಾರಿಗಣನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ಮಳವಳ್ಳಿ ತಾಲ್ಲೂಕು ಮಹಾದೇವಸ್ವಾಮಿ ಮಾತನಾಡಿ, ರೈತರ ಪಂಪ್ ಸೆಟ್ ಗಳಿಗೆ ಸರ್ಕಾರದ ಆದೇಶದಂತೆ ದಿನಕ್ಕೆ 7 ತಾಸು ವಿದ್ಯುತ್ ನೀಡಬೇಕಾಗಿದೆ, ಅದರಂತೆ ಬೆಳಿಗ್ಗೆ ಸಮಯ 4 ತಾಸು ಮತ್ತು ರಾತ್ರಿ ಸಮಯ 3 ತಾಸು ವಿದ್ಯುತ್ ನೀಡಲಾಗುತ್ತಿದೆ, ಆದರೆ ಬೆಳಿಗ್ಗೆ ಸಮಯವಾಗಲಿ‌ ಅಥವಾ ರಾತ್ರಿ ಸಮಯದಲ್ಲಿ ಆಗಲಿ ವಿದ್ಯುತ್ ಟ್ರೀಪ್ ಆದರೆ ಮತ್ತೆ ವಿದ್ಯುತ್ ನೀಡುತ್ತಿಲ್ಲ, ವಾರದಲ್ಲಿ 3-4 ದಿನ ಇಂತಹ ಸಮಸ್ಯೆ ಉಂಟಾಗುತ್ತದೆ ಆದ್ದರಿಂದ ಈ ಸಮಸ್ಯೆ ಬಗೆ ಹರಿಸಬೇಕೆಂದು ಒತ್ತಾಯಿಸಿದರು.

ಮಳವಳ್ಳಿ ತಾಲ್ಲೂಕು ಕಚೇರಿಯಲ್ಲಿಯಲ್ಲಿಯೂ ಸಾರ್ವಜನಿಕರ ಕೆಲವವನ್ನು ಸಮರ್ಪಕವಾಗಿ ಮಾಡಿಕೊಡುವಂತೆ ಒತ್ತಾಯಿಸಿ ಅಭಿಯಾನ ನಡೆಸಿದ ಕಾರ್ಯಕರ್ತರು, ಸತತ ಮೂರು ವರ್ಷಗಳಿಂದಲೂ ಕೆಲವು ಜನಸಾಮಾನ್ಯರನ್ನು ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ