Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬಿ.ಹೊಸಹಳ್ಳಿ ಡೇರಿ ಅಧ್ಯಕ್ಷರಾಗಿ ಕೃಷ್ಣ ಆಯ್ಕೆ

ಮಂಡ್ಯ ತಾಲ್ಲೂಕಿನ ಬಿ.ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಕೃಷ್ಣ, ಉಪಾಧ್ಯಕ್ಷರಾಗ ಚಿಕ್ಕತಾಮಮ್ಮ ಅವಿರೋಧ ಆಯ್ಕೆಯಾದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಕೃಷ್ಣ ಮಾತನಾಡಿ, ನನ್ನನ್ನು ಆಯ್ಕೆ ಮಾಡಿದ ಎಲ್ಲ ನಿರ್ದೇಶಕರು, ಮುಖಂಡರನ್ನು ಅಭಿನಂದಿಸುತ್ತೇವೆ, ಎಲ್ಲರ ಸಹಕಾರದೊಂದಿಗೆ ಸಂಘದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ನಿರ್ದೇಶಕರಾದ ಗೋವಿಂದೇಗೌಡ, ಹೆಚ್.ಟಿ.ಶಿವಣ್ಣ, ಸತೀಶ್, ಲಿಂಗರಾಜು, ಸರೋಜಮ್ಮ, ನಿಂಗಮ್ಮ, ನಾಗಮ್ಮ, ಪ್ರೇಮ, ಹೆಚ್.ಎನ್.ಬಸವರಾಜು, ಮುಖಂಡರಾದ ಹೆಚ್.ಡಿ.ರಾಜಣ್ಣ, ಎಂ.ನಿಂಗರಾಜು, ಬಿ.ಕೃಷ್ಣ ಪ್ರಕಾಶ್, ಹೆಚ್.ಎಸ್.ಅಯ್ಯಪ್ಪ ಹಾಗೂ ಎಂ.ಬಿ.ಕೃಷ್ಣೇಗೌಡ ಅವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ