ಮಂಡ್ಯದಲ್ಲಿ ಇಂದು ಮಧ್ಯಾಹ್ನ 2:20ರ ಸುಮಾರಿಗೆ ಭಾರೀ ಸ್ಫೋಟದ ಶಬ್ದ ಕೇಳಿ ಬಂದಿದ್ದು, ಒಂದು ಕ್ಷಣ ಜನರು ಭಯ, ಆತಂಕಗೊಂಡ ಘಟನೆ ನಡೆದಿದೆ.
ಇಂದು ಮಧ್ಯಾಹ್ನ ಕೇಳಿ ಬಂದ ಈ ನಿಗೂಢ ಭಾರೀ ಸ್ಫೋಟದ ಸದ್ದಿಗೆ ಮನೆಯಲ್ಲಿದ್ದ ವಸ್ತುಗಳು ಅಲ್ಲಾಡಿದ ಬಗ್ಗೆ ಸಾಕಷ್ಟು ಜನರು ಹೇಳಿದ್ದಾರೆ.
ಈ ಭಾರೀ ಸ್ಪೋಟದ ಸದ್ದಿಗೆ ನಿಜವಾದ ಕಾರಣ ಏನೆಂಬುದು ಗೊತ್ತಾಗಿಲ್ಲ. ಒಂದು ಕ್ಷಣ ಮನೆಯಲ್ಲಿದ್ದ ಪಾತ್ರೆ, ಪಗಡಗಳು,ಇತರೆ ವಸ್ತುಗಳು ಅಲ್ಲಾಡಿದ ಹಾಗೆ ಆಯಿತು.ಏನಿದು ಈ ಸ್ಫೋಟ ಎಂದು ಜನರು ಮನೆಯಿಂದ ಹೊರಬಂದು ಆತಂಕ ವ್ಯಕ್ತಪಡಿಸಿದರು.
ಈ ಹಿಂದೆಯೂ ಮಂಡ್ಯದಲ್ಲಿ ಈ ರೀತಿ ಒಂದೆರಡು ಬಾರಿ ನಿಗೂಡವಾಗಿ ಸ್ಪೋಟದ ಸದ್ದು ಕೇಳಿತ್ತು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ನಡೆಸುವ ಭಾರೀ ಸ್ಪೋಟವೇ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಮತ್ತೆ ಇಂದು ಭಾರೀ ಸ್ಪೋಟದ ಸದ್ದು ಕೇಳಿ ಬಂದಿದ್ದು,ಸಂಬಂಧಿಸಿದವರು ಇದಕ್ಕೆ ಉತ್ತರ ನೀಡಬೇಕಿದೆ.