Tuesday, November 24, 2026

ಪ್ರಾಯೋಗಿಕ ಆವೃತ್ತಿ

‘ಹಳ್ಳಿಕಾರ್ ಒಡೆಯ’ ಪದದ ದುರ್ಬಳಕೆ ವಿರುದ್ದ ಕಾನೂನು ಹೋರಾಟ: ರವಿಕುಮಾರ್

ಅನಾಧಿ ಕಾಲದಿಂದಲೂ ಪಾರಂಪಾರಿಕವಾಗಿ ಹಳ್ಳಿಕಾರ್ ಗೋತಳಿಯನ್ನು ಪೋಷಿಸಿ, ಸಂರಕ್ಷಿಸಿಕೊಂಡು ಬರುತ್ತಿದ್ದು, ಬರುತ್ತಿರುವ ಲಕ್ಷಾಂತರ ಕುಟುಂಬಗಳು ಇವೆ. ಆದರೆ ವರ್ತೂರು ಸಂತೋಷ್ ಹಳ್ಳಿಕಾರ್ ಒಡೆಯ ಎಂದು ಹೇಳಿಕೊಳ್ಳುವ ಮೂಲಕ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದು, ಇದರ ವಿರುದ್ದ ಕಾನೂನು ಹೋರಾಟ ನಡೆಸಲಾಗುವುದು ಎಂದು ಮುಖಂಡ ಕಲ್ಲಹಳ್ಳಿಯ ರವಿಕುಮಾರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳಿಕಾರ್ ತಳಿಯು ರೈತಾಪಿ ಕೆಲಸಗಳಲ್ಲಿ ಬಲಾಡ್ಯವಾಗಿದ್ದು, ರೈತರಿಗೆ ಬೆನ್ನೆಲುಬಾಗಿ ಹಾಗೂ ಕುಟುಂಬಗಳಲ್ಲಿ ಒಂದಾಗಿ ನಮ್ಮೆಲರ ಬಹು ಪ್ರೀತಿ ಪಾತ್ರವಾಗಿದೆ. ಈ ತಳಿಯನ್ನು ವಿಜಯನಗರ ಅರಸರಾಗಿದ್ದ ಶ್ರೀಕೃಷ್ಣದೇವರಾಯರು ಪೋಷಿಸಿ,ಸಂರಕ್ಷಿಸಿದರು. ಬ್ರಿಟಿಷ್ ವೈಸ್‌ರಾಯ್ ರವರ ಮುಖಾಂತರ ಅಂದು ಮೈಸೂರು ಅರಸರಾಗಿದ್ದ ಚಿಕ್ಕದೇವರಾಜ ಒಡೆಯರ್‌ ಅವರ ಕಾಲದಲ್ಲಿ ಪೋಷಿಸಿ, ಸಂರಕ್ಷಿಸಿ ಇದಕ್ಕಾಗಿಯೇ ಹಳ್ಳಿಕಾರ್ ಕಾವಲ್ (ಗೋಮಾಳ)ಗಳನ್ನು ಮಾಡುವ ಮುಖಾಂತರ ತಳಿ ಅಭಿವೃದ್ಧಿ ಮಾಡಿದರು ಎಂದು ವಿವರಿಸಿದರು.

ಕೇವಲ 7-8 ವರ್ಷಗಳ ಹಿಂದೆಯಷ್ಟೇ ಬಂದಂತಹ ವರ್ತೂರು ಸಂತೋಷಕುಮಾ‌ರ್ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ, ಸಮೂಹಮಾಧ್ಯಮಗಳಲ್ಲಿ ‘ಹಳ್ಳಿಕಾರ್ ಒಡೆಯ’ ಎಂದು ತನ್ನನ್ನು ತಾನು ಬಿಂಬಿಸಿಕೊಂಡು ಸ್ವಾರ್ಥಕ್ಕಾಗಿ ಹಳ್ಳಿಕಾರ್ ಗೋತಳಿಯ ಹೆಸರನ್ನು ಈಗಲೂ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ತಮ್ಮ ಆಕ್ಷೇಪವಿದ್ದು, ಇದರ ವಿರುದ್ದ ಕಾನೂನು ಹೋರಾಟ ನಡೆಸುತ್ತಿದ್ದೇವೆ ಎಂದರು.

ವರ್ತೂರು ಸಂತೋಷ್ ಹಳ್ಳಿಕಾರ್ ಗೋತಳಿಯ ಇತಿಹಾಸವನ್ನೇ ತಿರುಚುವಂತಹ ಪ್ರಯತ್ನ ನಡೆಸುತ್ತಿದ್ದು, ಮುಂದಿನ ಪೀಳಿಗೆಯವರಿಗೆ ಸುಳ್ಳು/ತಪ್ಪು ಸಂದೇಶವನ್ನು ರವಾನಿಸುತ್ತಿರುವುದರ ವಿರುದ್ದ ಈಗಾಗಲೇ ಕಾನೂನು ತಿಳುವಳಿಕೆ ಪತ್ರ (ಲಿಗಲ್ ನೋಟಿಸ್)ವನ್ನು ನೊಂದಾಯಿತ ಅಂಚೆ (ಆರ್‌ಡಿಪಿಡಿ) ಮೂಲಕ ಆತನ ಮನೆ ವಿಳಾಸಕ್ಕೆ ರವಾನಿಸಲಾಗಿದೆ. ಮುಂದುವರೆದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು /ತಪ್ಪು ಮಾಹಿತಿಗಳನ್ನು ಬಿತ್ತರಿಸುತ್ತಿರುವ ಗೂಗಲ್ ಸಂಸ್ಥೆಗೂ ಸಮಜಾಯಿಸಿ ನೀಡುವಂತೆ ಪತ್ರ ಬರೆದು ನೊಂದಾಯಿತ ಅಂಚೆ ಮೂಲಕ ರವಾನಿಸಲಾಗಿದೆ. ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಇನ್ನೂ ಮುಂದೆಯೂ ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದರು.

ಗೋಷ್ಠಿಯಲ್ಲಿ ಕಿರಣ್ ಪಟೇಲ್, ಪ್ರಜ್ವಲ್, ಪ್ರಶಾಂತ್ ಹಾಗೂ ದೀಕ್ಷಿತ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ