ಕೇಂದ್ರ ಚುನಾವಣಾ ಆಯೋಗವು ವಿವಿಧ ರಾಜಕೀಯ ಪಕ್ಷಗಳಿಗೆ ನೀಡಿದ ಎಸ್ಬಿಐನ ಚುನಾವಣಾ ಬಾಂಡ್ ಗಳ ಅಂಕಿಅಂಶವನ್ನು ತನ್ನ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ.
ಭಾರತೀಯ ಚುನಾವಣಾ ಆಯೋಗವು (ಇಸಿಐ) ಗುರುವಾರ ಸುಪ್ರೀಂ ಕೋರ್ಟ್ ಆದೇಶವನ್ನು ಅನುಸರಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹಂಚಿಕೊಂಡಿರುವ ಚುನಾವಣಾ ಬಾಂಡ್ಗಳ ಡೇಟಾವನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಗಮನಾರ್ಹವಾಗಿ, ಉನ್ನತ ನ್ಯಾಯಾಲಯದ ಗಡುವಿನ ಒಂದು ದಿನದ ಮೊದಲು ಡೇಟಾವನ್ನು ಪ್ರಕಟಿಸಲಾಗಿದೆ.
ಚುನಾವಣಾ ಬಾಂಡ್ ಮೂಲಕ ಸಾವಿರಾರು ಕೋಟಿ ರೂ.ಗಳನ್ನು ಹಲವು ಕಾರ್ಪೋರೇಟ್ ಕಂಪನಿಗಳು ದೇಣಿಗೆ ನೀಡಿರುವ ಮಾಹಿತಿಯನ್ನು ಭಾರತ ಚುನಾವಣಾ ಆಯೋಗವು 337 ಪುಟಗಳ ಪಟ್ಟಿಯಲ್ಲಿ ಪ್ರಕಟಿಸಿದೆ. ಆದರೆ ಅಷ್ಟೊಂದು ಬೃಹತ್ ಪ್ರಮಾಣದ ಹಣ ಯಾವ ಯಾವ ಪಕ್ಷಗಳಿಗೆ ಹರಿದು ಹೋಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಭಾರತ ಚುನಾವಣಾ ಆಯೋಗ ಪ್ರಕಟಿಸಿರುವ ಚುನಾವಣಾ ಬಾಂಡ್ ನ ಸಂಪೂರ್ಣ ಮಾಹಿತಿ ಪಡೆಯಲು : ಇಲ್ಲಿ ಕ್ಲಿಕ್ ಮಾಡಿ




