ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗವು 18ನೇ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ನೆನ್ನೆಯಿಂದಲೇ ಜಿಲ್ಲೆಯ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿದೆ. ಮಂಡ್ಯ ಜಿಲ್ಲೆಯು ಸಾಮಾನ್ಯ ಕ್ಷೇತ್ರವಾಗಿದ್ದು, ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಾದ ಮಳವಳ್ಳಿ, ಮದ್ದೂರು, ಮಂಡ್ಯ, ಮೇಲುಕೋಟೆ, ನಾಗಮಂಗಲ, ಕೆ ಆರ್ ಪೇಟೆ, ಶ್ರೀರಂಗಪಟ್ಟಣ , ಕೆ ಆರ್ ನಗರ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ಬರುತ್ತವೆ ಎಂದು ತಿಳಿಸಿದರು.
ಮಾರ್ಚ್ 28 ರಂದು ಅಧಿಸೂಚನೆ
ಭಾರತೀಯ ಚುನಾವಣಾ ಆಯೋಗ ಹೊರಡಿಸಿರುವ ಆದೇಶದ ಪ್ರಕಾರ ಮಾರ್ಚ್ 28 ರಂದು ಅಧಿಸೂಚನೆಯನ್ನು ಪ್ರಕಟಿಸಲಾಗುವುದು. ಮಾರ್ಚ್ 28 ರಿಂದ ಏಪ್ರಿಲ್ 04 ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಏಪ್ರಿಲ್ 05 ರಂದು ನಾಮಪತ್ರಗಳ ಪರಿಶೀಲಿಲನೆ ನಡೆಯಲಿದ್ದು, ಏಪ್ರಿಲ್ 08 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ. ತೆಗೆದುಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ಏಪ್ರಿಲ್ 26 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು, ಜೂನ್ 04 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.
ಸಹಾಯಕ ಚುನಾವಣಾಧಿಕಾರಿಗಳ ನೇಮಕ
ಅಪರ ಜಿಲ್ಲಾಧಿಕಾರಿಗಳನ್ನೊಳಗೊಡಂತೆ 8 ವಿಧಾನಸಭಾ ಕ್ಷೇತ್ರಗಳಿಗೆ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಳವಳ್ಳಿ- ರಾಷ್ಟೀಯ ಹೆದ್ದಾರಿ – 209 ವಿಶೇಷ ಭೂಸ್ವಾಧೀನಾಧಿಕಾರಿ ನಹೀಧಾ ಜಮ್ ಜಮ್, ಮದ್ದೂರು- ಮಂಡ್ಯ ನಾಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಆರ್ ಲೋಕನಾಥ್, ಮೇಲುಕೋಟೆ- ಪಾಂಡವಪುರ ಉಪವಿಭಾಗಾಧಿಕಾರಿ ಜೆ. ಬಿ. ಮಾರುತಿ, ಮಂಡ್ಯ- ಮಂಡ್ಯ ಉಪವಿಭಾಗಾಧಿಕಾರಿ ಬಿ. ಆರ್. ಮಹೇಶ್, ಶ್ರೀರಂಗಪಟ್ಟಣ- ಮಂಡ್ಯ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೆ. ಆನಂದ್ ಕುಮಾರ್, ನಾಗಮಂಗಲ- ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಎಂ. ಪಿ ಕೃಷ್ಣಕುಮಾರ್, ಕೆ ಆರ್ ಪೇಟೆ – ಮಂಡ್ಯ ವಿಶ್ವವಿದ್ಯಾಲಯ ರಿಜಿಸ್ಟಾರ್ ಆರ್. ಚಂದ್ರಯ್ಯ, ಕೆ ಆರ್ ನಗರ- ಮೈಸೂರು ಕಬಿನಿ ನೀರಾವರಿ ಜಲಾಶಯ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಸುಪ್ರಿಯಾ ಬಾಣಗಾರ್. ಬಿ ಅವರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರಸಲದಲಿ 1759175 ಮತದಾರರು
ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಪ್ತಿಗೆ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ಹಾಗೂ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರಗಳಿದ್ದು, ಜನವರಿ 22 ರಂದು ಪ್ರಕಟವಾಗಿರುವ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 17,59,175 ಮತದಾರರಿದ್ದಾರೆ ಎಂದರು
ಮಳವಳ್ಳಿಯಲ್ಲಿ ಗಂಡು-124922, ಹೆಣ್ಣು-125939, ತೃತೀಯ ಲಿಂಗಿಗಳು-25, ಒಟ್ಟು 250886 ಮತದಾರರಿದ್ದಾರೆ.
ಮದ್ದೂರಿನಲ್ಲಿ ಗಂಡು-103170, ಹೆಣ್ಣು-109993, ತೃತೀಯ ಲಿಂಗಿಗಳು-24, ಒಟ್ಟು 213187 ಮತದಾರರಿದ್ದಾರೆ.
ಮೇಲುಕೋಟೆಯಲ್ಲಿ ಗಂಡು-99402, ಹೆಣ್ಣು-101662, ತೃತೀಯ ಲಿಂಗಿಗಳು-7, ಒಟ್ಟು 201071 ಮತದಾರರಿದ್ದಾರೆ.
ಮಂಡ್ಯದಲ್ಲಿ ಗಂಡು-110059, ಹೆಣ್ಣು-115311, ತೃತೀಯ ಲಿಂಗಿಗಳು- 33, ಒಟ್ಟು 225403 ಮತದಾರರಿದ್ದಾರೆ.
ಶ್ರೀರಂಗಪಟ್ಟಣ ಗಂಡು-105136, ಹೆಣ್ಣು-110034, ತೃತೀಯ ಲಿಂಗಿಗಳು- 45, ಒಟ್ಟು 215215 ಮತದಾರರಿದ್ದಾರೆ.
ನಾಗಮಂಗಲದಲ್ಲಿ ಗಂಡು-106965, ಹೆಣ್ಣು-107714, ತೃತೀಯ ಲಿಂಗಿಗಳು- 11, ಒಟ್ಟು 214690 ಮತದಾರರಿದ್ದಾರೆ.
ಕೃಷ್ಣರಾಜಪೇಟೆಯಲ್ಲಿ ಗಂಡು-110594, ಹೆಣ್ಣು-110799, ತೃತೀಯ ಲಿಂಗಿಗಳು- 11, ಒಟ್ಟು 221404 ಮತದಾರರಿದ್ದಾರೆ.
ಕೆ. ಆರ್ ನಗರದಲ್ಲಿ ಗಂಡು-107404, ಹೆಣ್ಣು-109903, ತೃತೀಯ ಲಿಂಗಿಗಳು- 12, ಒಟ್ಟು 217319 ಮತದಾರರಿದ್ದಾರೆ.
35140 ಯುವ ಮತದಾರರು
ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗಂಡು-2162, ಹೆಣ್ಣು-1796, ತೃತೀಯ ಲಿಂಗಿಗಳು-1, ಒಟ್ಟು 3959 ಯುವ ಮತದಾರರಿದ್ದಾರೆ.
ಮದ್ದೂರಿನಲ್ಲಿ ಗಂಡು-2403, ಹೆಣ್ಣು-2136, ತೃತೀಯ ಲಿಂಗಿಗಳು-1, ಒಟ್ಟು 4540 ಯುವ ಮತದಾರರಿದ್ದಾರೆ.
ಮೇಲುಕೋಟೆಯಲ್ಲಿ ಗಂಡು-2564, ಹೆಣ್ಣು-2158, ತೃತೀಯ ಲಿಂಗಿಗಳು-0, ಒಟ್ಟು 4722 ಯುವ ಮತದಾರರಿದ್ದಾರೆ.
ಮಂಡ್ಯದಲ್ಲಿ ಗಂಡು-2208, ಹೆಣ್ಣು-2034, ತೃತೀಯ ಲಿಂಗಿಗಳು- 2, ಒಟ್ಟು 4244 ಯುವ ಮತದಾರರಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಗಂಡು-2413, ಹೆಣ್ಣು-2091, ತೃತೀಯ ಲಿಂಗಿಗಳು-2, ಒಟ್ಟು 4506 ಯುವ ಮತದಾರರಿದ್ದಾರೆ.
ನಾಗಮಂಗಲದಲ್ಲಿ ಗಂಡು-2301, ಹೆಣ್ಣು-2059, ತೃತೀಯ ಲಿಂಗಿಗಳು-0, ಒಟ್ಟು 4360 ಯುವ ಮತದಾರರಿದ್ದಾರೆ.
ಕೃಷ್ಣರಾಜಪೇಟೆಯಲ್ಲಿ ಗಂಡು-2165, ಹೆಣ್ಣು-1684, ತೃತೀಯ ಲಿಂಗಿಗಳು-3, ಒಟ್ಟು 3852 ಯುವ ಮತದಾರರಿದ್ದಾರೆ.
ಕೆ. ಆರ್ ನಗರದಲ್ಲಿ ಗಂಡು-2788, ಹೆಣ್ಣು-2169, ತೃತೀಯ ಲಿಂಗಿಗಳು-0, ಒಟ್ಟು 4957 ಯುವ ಮತದಾರರಿದ್ದಾರೆ ಎಂದರು.
901 ಸೇವಾ ಮತದಾರರಿದ್ದಾರೆ
ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಗಂಡು-75, ಹೆಣ್ಣು-5, ಒಟ್ಟು 80 ಸೇವಾ ಮತದಾರರಿದ್ದಾರೆ.
ಮದ್ದೂರು ಗಂಡು-143, ಹೆಣ್ಣು-2, ಒಟ್ಟು 145 ಸೇವಾ ಮತದಾರರಿದ್ದಾರೆ.
ಮೇಲುಕೋಟೆಯಲ್ಲಿ ಗಂಡು-59, ಹೆಣ್ಣು-0, ಒಟ್ಟು 59 ಸೇವಾ ಮತದಾರರಿದ್ದಾರೆ.
ಮಂಡ್ಯದಲ್ಲಿ ಗಂಡು-126, ಹೆಣ್ಣು-5,ಒಟ್ಟು 131 ಸೇವಾ ಮತದಾರರಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಗಂಡು-54, ಹೆಣ್ಣು-2, ಒಟ್ಟು 56 ಸೇವಾ ಮತದಾರರಿದ್ದಾರೆ.
ನಾಗಮಂಗಲದಲ್ಲಿ ಗಂಡು-61, ಹೆಣ್ಣು-6,ಒಟ್ಟು 67 ಸೇವಾ ಮತದಾರರಿದ್ದಾರೆ.
ಕೃಷ್ಣರಾಜಪೇಟೆಯಲ್ಲಿ ಗಂಡು-92, ಹೆಣ್ಣು-3, ಒಟ್ಟು 95 ಸೇವಾ ಮತದಾರರಿದ್ದಾರೆ.
ಕೆ. ಆರ್ ನಗರದಲ್ಲಿ ಗಂಡು-261, ಹೆಣ್ಣು-7, ಒಟ್ಟು 268 ಸೇವಾ ಮತದಾರರಿದ್ದಾರೆ.
23044 ಮತದಾರರು 85 ವರ್ಷ ಮೇಲ್ಪಟ್ಟವರು
ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟವರು-1772, 90 ವರ್ಷ ಮೇಲ್ಪಟ್ಟವರು-1520, 100 ವರ್ಷ ಮೇಲ್ಪಟ್ಟವರು-180, ಒಟ್ಟು 3472 ಮತದಾರರಿದ್ದಾರೆ.
ಮದ್ದೂರಿನಲ್ಲಿ 85 ವರ್ಷ ಮೇಲ್ಪಟ್ಟವರು-1250, 90 ವರ್ಷ ಮೇಲ್ಪಟ್ಟವರು-1110, 100 ವರ್ಷ ಮೇಲ್ಪಟ್ಟವರು-63, ಒಟ್ಟು 2423 ಮತದಾರರಿದ್ದಾರೆ.
ಮೇಲುಕೋಟೆಯಲ್ಲಿ 85 ವರ್ಷ ಮೇಲ್ಪಟ್ಟವರು-1300, 90 ವರ್ಷ ಮೇಲ್ಪಟ್ಟವರು-998, 100 ವರ್ಷ ಮೇಲ್ಪಟ್ಟವರು-70, ಒಟ್ಟು 2368 ಮತದಾರರಿದ್ದಾರೆ.
ಮಂಡ್ಯದಲ್ಲಿ 85 ವರ್ಷ ಮೇಲ್ಪಟ್ಟವರು-1285, 90 ವರ್ಷ ಮೇಲ್ಪಟ್ಟವರು-723, 100 ವರ್ಷ ಮೇಲ್ಪಟ್ಟವರು-43, ಒಟ್ಟು 2051 ಮತದಾರರಿದ್ದಾರೆ.
ಶ್ರೀರಂಗಪಟ್ಟಣದಲ್ಲಿ 85 ವರ್ಷ ಮೇಲ್ಪಟ್ಟವರು-1237, 90 ವರ್ಷ ಮೇಲ್ಪಟ್ಟವರು-1045, 100 ವರ್ಷ ಮೇಲ್ಪಟ್ಟವರು-99, ಒಟ್ಟು 2381 ಮತದಾರರಿದ್ದಾರೆ.
ನಾಗಮಂಗಲದಲ್ಲಿ 85 ವರ್ಷ ಮೇಲ್ಪಟ್ಟವರು-1530, 90 ವರ್ಷ ಮೇಲ್ಪಟ್ಟವರು-1164, 100 ವರ್ಷ ಮೇಲ್ಪಟ್ಟವರು-92, ಒಟ್ಟು 2786 ಮತದಾರರಿದ್ದಾರೆ.
ಕೃಷ್ಣರಾಜಪೇಟೆಯಲ್ಲಿ 85 ವರ್ಷ ಮೇಲ್ಪಟ್ಟವರು-1962, 90 ವರ್ಷ ಮೇಲ್ಪಟ್ಟವರು-1865, 100 ವರ್ಷ ಮೇಲ್ಪಟ್ಟವರು-27, ಒಟ್ಟು 3854 ಮತದಾರರಿದ್ದಾರೆ.
ಕೆ ಆರ್ ನಗರದಲ್ಲಿ 85 ವರ್ಷ ಮೇಲ್ಪಟ್ಟವರು-1917, 90 ವರ್ಷ ಮೇಲ್ಪಟ್ಟವರು-1635, 100 ವರ್ಷ ಮೇಲ್ಪಟ್ಟವರು-157, ಒಟ್ಟು 23044 ಮತದಾರರಿದ್ದಾರೆ.
ಇವರಿಗೆ ಮನೆಯಲ್ಲೇ ಪೋಸ್ಡಲ್ ಬ್ಯಾಲೆಟ್ ಮುಖಾಂತರ ಮತದಾನ ಮಾಡಲು ಅವಕಾಶವಿದ್ದು, ಇವರಿಗೆ 12ಡಿ ಫಾರಂ ವಿತರಿಸಿ ಒಪ್ಪಿಗೆ ಪಡೆಯಲಾಗುವುದು ಎಂದರು.
2074 ಮತಗಟ್ಟೆಗಳು
ಮತದಾನಕ್ಕಾಗಿ 2074 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಮಳವಳ್ಳಿ- 272, ಮದ್ದೂರು-254, ಮೇಲುಕೋಟೆ-264, ಮಂಡ್ಯ-262, ಶ್ರೀರಂಗಪಟ್ಟಣ-249, ನಾಗಮಂಗಲ-260, ಕೃಷ್ಣರಾಜಪೇಟೆ-261, ಕೆ. ಆರ್ ನಗರ-252 ಮತಗಟ್ಟೆಗಳಿವೆ ಎಂದರು.
ಚುನಾವಣಾ ಪ್ರಚಾರದಲ್ಲಿ ಮಕ್ಕಳು, ಪ್ರಾಣಿ ಸೈನಿಕರು ಹಾಗೂ ಸೈನಿಕರ ಭಾವಚಿತ್ರ ಬಳಸುವಂತಿಲ್ಲ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂ, ಎಂ.ಸಿ.ಎಂ.ಸಿ ಸಮಿತಿ, ಅಕೌಂಟಿಂಗ್ ಟೀಂ ಕಾರ್ಯನಿರ್ವಹಿಸಲಿದೆ ಎಂದರು.
ಸಿ.ವಿಜಿಲ್ ಆ್ಯಪ್: ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಸಿ ವಿಜಿಲ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದು. ನೇರವಾಗಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಭಾವ ಚಿತ್ರ ಹಾಗೂ ವಿಡಿಯೋ ಅಪ್ಲೋಡ್ ಮಾಡಿದರೆ 100 ನಿಮಿಷದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸುವಿಧಾ ಆ್ಯಪ್ : ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣಾ ಪ್ರಚಾರಗಳಿಗೆ ಸಂಬಂಧಿಸಿದಂತೆ ಅನುಮತಿ ಪಡೆಯಲು ಸುವಿಧಾ ಆ್ಯಪ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅವುಗಳನ್ನು ಆದ್ಯತೆ ಮೇಲೆ ವಿಲೇವಾರಿ ಮಾಡಲಾಗುವುದು ಎಂದರು.
ಲೋಕಸಭಾ ಚುನಾವಣೆ ಸೂಸುತ್ರವಾಗಿ ನಡೆಯಲು ಮಳವಳ್ಳಿ – 18, ಮದ್ದೂರು – 18, ಮೇಲುಕೋಟೆ – 17, ಮಂಡ್ಯ – 20, ಶ್ರೀರಂಗಪಟ್ಟಣ – 17, ನಾಗಮಂಗಲ – 19, ಕೃಷ್ಣರಾಜಪೇಟೆ – 18, ಕೆ ಆರ್ ನಗರ – 24, ಒಟ್ಟು 151 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಮಳವಳ್ಳಿ – 5, ಮದ್ದೂರು – 4, ಶ್ರೀರಂಗಪಟ್ಟಣ – 5, ನಾಗಮಂಗಲ – 4, ಕೃಷ್ಣರಾಜಪೇಟೆ – 3, ಕೆ ಆರ್ ನಗರ – 4 ಒಟ್ಟು 25 ಚೆಕ್ ಪೋಸ್ಟ್ ಗಳನ್ನು ಸ್ಥಾಪನೆ ಮಾಡಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲುಸ್ತುವಾರಿ ಸಮಿತಿ
ಮಂಡ್ಯ ಜಿಲ್ಲೆಯಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತು ಹಾಗೂ ಸುದ್ದಿಗಳ ಬಗ್ಗೆ ನಿಗಾ ವಹಿಸಲು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲುಸ್ತುವರಿ ಸಮಿತಿ ರಚನೆಯಾಗಿರುತ್ತದೆ.
ಯಾವುದೇ ರಾಜಕೀಯ ಜಾಹೀರಾತು ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಸಾರ ಮಾಡುವ ಮೊದಲು ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ ಸಮಿತಿಗೆ ನಿಗಧಿತ ನಮೂನೆಯಲ್ಲಿ ಅರ್ಜಿ, ಜಾಹೀರಾತು ವಿಷಯಗಳ ಎರಡು ಸಿ.ಡಿ, ಸಹಿ ಮಾಡಿದ ಟ್ರೈನ್ಸ್ ಸ್ಕ್ರಿಪ್ಟ್ ಸಲ್ಲಿಸಿ ಪೂರ್ವಾನುಮತಿ ಪಡೆದ ನಂತರ ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿ ನಿಗಧಿಪಡಿಸುವ ದಿನಾಂಕ ಹಾಗೂ ಸಮಯದವರೆಗೆ ಮಾತ್ರ ಪ್ರಸಾರ ಮಾಡಬೇಕು.
ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿಯ ಅವಶ್ಯಕತೆ ಇರುವುದಿಲ್ಲ, ಆದರೆ ಮಾದರಿ ನೀತಿ ಸಂಹಿತೆಯನ್ನು ಪಾಲಿಸಬೇಕು. ಮತದಾನ ಹಾಗೂ ಮತದಾನದ ಹಿಂದಿನ ದಿನ ಪ್ರಕಟವಾಗುವ ರಾಜಕೀಯ ಜಾಹೀರಾತುಗಳಿಗೂ ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಲು ಎಂ.ಸಿಎಂ.ಸಿ ಸಮಿತಿಯಿಂದ ಪೂರ್ವಾನುಮತಿ ಕಡ್ಡಾಯವಾಗಿರುತ್ತದೆ.
ಮತದಾನ ಮುಕ್ತಾಯವಾಗುವ 48 ಗಂಟೆಗಳ ಮೊದಲು ಯಾವುದೇ ರೀತಿಯ ರಾಜಕೀಯ ಜಾಹೀರಾತು ಹಾಗೂ ರಾಜಕೀಯ ವಿಷಯಗಳನ್ನು ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಸಾರ, ಮಾಡಲು ಅವಕಾಶವಿರುವುದಿಲ್ಲ.
ಕರಪತ್ರ, ಭಿತ್ತಿಪತ್ರ, ಪ್ಲೆಕ್ಸ್, ಬ್ಯಾನರ್ ಮುದ್ರಣಕ್ಕೆ ಪೂರ್ವಾನುಮತಿಯ ಅಗತ್ಯ ಇರುವುದಿಲ್ಲ ಆದರೆ ಅಪೆಂಡಿಕ್ಸ್-ಎ ಮತ್ತು ಅಪೆಂಡಿಕ್ಸ್-ಬಿ ಭರ್ತಿ ಮಾಡಿ ಕರಪತ್ರ ಅಥವಾ ಮುದ್ರಣ ಮಾಡಿರುವ ವಿಷಯದ ಒಂದು ಪ್ರತಿ ಹಾಗೂ ಬಿಲ್ ನ ಒಂದು ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್. ಯತೀಶ್ ಅವರು ಮಾತನಾಡಿ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಕಳೆದ 1 ವಾರದಿಂದ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಭಯದ ವಾತಾವರಣ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು. 1 ಸಿ.ಆರ್ ಪಿ ಎಫ್ ತುಕಡಿ ಜಿಲ್ಲೆಗೆ ಆಗಮಿಸಿ ಪಥಸಂಚಲನ ನಡೆಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್. ನಾಗರಾಜು, ಚುನಾವಣಾ ತಹಶೀಲ್ದಾರ್ ವೆಂಕಟಾಚಲಪತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್. ಎಸ್ ನಿರ್ಮಲಾ ಅವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




