ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಜಿಂದಾಬಾದ್ ಹೇಳುವವರು ಅಪ್ಪನಿಗೆ ಹುಟ್ಟಿದವರಲ್ಲ ಎಂದು ಹೇಳಿಕೆ ನೀಡಿರುವ ಪ್ರೊ ಮಹೇಶ್ ಚಂದ್ರ ಗುರು ವಿರುದ್ಧ ಭಾರತೀಯ ಜನತಾ ಪಕ್ಷ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರಿಗೆ ದೂರು ನೀಡಿದೆ.
ಮಂಡ್ಯನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿನ ಪ್ರೊ.ಮಹೇಶ್ ಚಂದ್ರ ಗುರು ಅವರು ಮೋದಿಯನ್ನು ಟೀಕಿಸುವ ಭರದಲ್ಲಿ ಈ ಮಾತನಾಡಿದರು. ಬಿ ಜೆ ಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಒಂದು ಪಕ್ಷದ ಪರಿಚಾರಕರ ರೀತಿ ಮಾತನಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ದೂರಿದೆ.
ಇದು ಒಬ್ಬ ದೇಶದ ಪ್ರಧಾನಿ ಹಾಗೂ ಅವರಿಗೆ ಮತ ನೀಡಿರುವ ಕೋಟ್ಯಂತರ ಮತದಾರರಿಗೆ ಮಾಡಿರುವ ಅಪಮಾನವಾಗಿದೆ. ಹಾಗಾಗಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಸಿ.ಟಿ ಮಂಜುನಾಥ್, ನಾಗಾನಂದ, ನಿತ್ಯಾನಂದ, ಪ್ರಸನ್ನ ಕುಮಾರ್, ಎಂ. ಕೃಷ್ಣ ಇತರರಿದ್ದರು.




