ಮಂಡ್ಯನಗರದ ಮಾಂಡವ್ಯ ಇಂಟಿಗ್ರೇಟೆಡ್ ಪದವಿಪೂರ್ವ ಕಾಲೇಜು ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ, 2023- 24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಗಳಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಬಿ ಶಿವಲಿಂಗಯ್ಯ ಮತ್ತು ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಸನ್ಮಾನಿಸಿದರು.
ಶಾಲೆಯ ಮೊದಲಿಗನಾಗಿ ಯಶ್ವಂತ್ ಎಸ್ 607 ಅಂಕಗಳಿಸಿದ್ದು, ಕನ್ನಡದಲ್ಲಿ 125 ಕ್ಕೆ 125 ಮತ್ತು ಇಂಗ್ಲೀಷ್ ,ಹಿಂದಿ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳಿಸಿ ಮಂಡ್ಯ ನಗರದಲ್ಲಿನ ಪ್ರೌಢಶಾಲೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
12 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ, 31 ವಿದ್ಯಾರ್ಥಿಗಳು ಪ್ರಥಮ ದರ್ಜೆ, 24 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡದಲ್ಲಿ ಯಶ್ವಂತ್.ಎಸ್, ಸ್ನೇಹ ಎಂ.ಎಸ್, ನಾಗಲಕ್ಷ್ಮಿ ಅಮೃತ ಕೆ ಎಸ್ ವಿದ್ಯಾರ್ಥಿಗಳು 125ಕ್ಕೆ 125 ಅಂಕಗಳನ್ನು ಗಳಿಸಿದ್ದಾರೆ.

ಸಂಸ್ಥೆಯ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ ಪ್ರಸ್ತುತ ವಿದ್ಯಾರ್ಥಿಗಳು ತೆಗೆದುಕೊಂಡಿರುವ ಫಲಿತಾಂಶ ಸಂಸ್ಥೆಗೆ ಕೀರ್ತಿ ತಂದಿದ್ದು ಇದಕ್ಕೆ ಸಹಕರಿಸಿದ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅಭಿನಂದನೆಗಳನ್ನು ತಿಳಿಸಿದರು. ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ನಮ್ಮ ಸಂಸ್ಥೆಯಲ್ಲೇ ಮುಂದುವರಿಸಿ ವಿಶೇಷ ಸ್ಕಾಲರ್ಶಿಪ್ ಅನ್ನು ಅವರಿಗೆ ನೀಡಲು ಸಮ್ಮತಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ಬಿ ಶಿವಲಿಂಗಯ್ಯ ಮಾತನಾಡಿ, ಪ್ರಸ್ತುತ ಎಸ್ ಎಸ್ ಎಲ್ ಸಿ ಪರೀಕ್ಷೆಯು ತುಂಬಾ ಕಠಿಣವಾಗಿ ನಡೆದಿದ್ದು ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ನೀಡಿದ್ದು ಸಂಸ್ಥೆಯಾ ಗೌರವನ್ನು ಹೆಚ್ಚಿಸಿದೆ ಎಂದರು.
ಮುಖ್ಯ ಶಿಕ್ಷಕರಾದ ಮಹಾದೇವಯ್ಯ, ಮಂಡಳಿಯ ಇಂಟಿಗ್ರೇಟೆಡ್ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಪಾಲುದಾರಮತ್ತು ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಅವಿನಾಶ್ ಎಂ ಮಾರಗೌಡನಹಳ್ಳಿ ಮಾತನಾಡಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ಚಂದ್ರಶೇಖರ್, ಮುಖ್ಯೋಪಾಧ್ಯಾಯ ಮಹಾದೇವಯ್ಯ, ಡಾ.ಮೋಹನ್ ಎಂ ಪಿ, ರಾಘವೇಂದ್ರ ಡಿಎಸ್, ಚನ್ನೇಶ ಮತ್ತು ರಂಗಸ್ವಾಮಿ ಹಾಜರಿದ್ದರು.




