Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಲಾಳನಕೆರೆ ನಾಲ್ಕು ಹಸುಗಳು ಸಾವು

ಮಂಡ್ಯ ತಾಲ್ಲೂಕಿನ ತಾಲೂಕಿನ ಲಾಳನಕೆರೆ ಗ್ರಾಮದಲ್ಲಿ ರೈತರೊಬ್ಬರಿಗೆ ಸೇರಿದ 4 ಹಸುಗಳು ಇಂದು ಮುಂಜಾನೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಗ್ರಾಮದ ಸೋಮಶೇಖರ್ ಎಂಬುವರಿಗೆ ಸೇರಿದ ನಾಲ್ಕು ಹಸುಗಳು ಸಾವಿಗೀಡಾಗಿವೆ,

ಸೋಮಶೇಖರ್ ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿದ್ದು, 15ಕ್ಕೂ ಹೆಚ್ಚು ಹಾಲು ಕರೆಯುವ ಹಸುಗಳನ್ನು ಸಾಕಾಣಿಕೆ ಮಾಡಿದ್ದರು, ಪ್ರತಿನಿತ್ಯ ಡೈರಿಗೆ 150 ಲೀಟರ್ ಹಾಲು ಹಾಕುತ್ತಿದ್ದರು. ಆದರೆ ಬುಧವಾರ ಮುಂಜಾನೆ ಹಾಲು ಕರೆಯುವ ಮುನ್ನ ಎಲ್ಲಾ ಹಸುಗಳಿಗೆ ಮೇವು ಮತ್ತು ತಿಂಡಿ ನೀಡಿದ್ದರು, ಪಶು ಆಹಾರ ಬೂಸದ ಜೊತೆ ಇನ್ನಿತರ ಆಹಾರ ನೀಡಿದ್ದರು, ತಿಂಡಿ ತಿಂದ ಕೆಲ ಹೊತ್ತಿನಲ್ಲೇ ನಾಲ್ಕು ಹಸುಗಳಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿತು. ಇದರಿಂದ ಎಚ್ಚೆತ್ತ ಮನೆಯವರು ತಕ್ಷಣ ಪಶುವೈದ್ಯಾಧಿಕಾರಿಗಳಿಗೆ ಕರೆ ಮಾಡಿದ್ದು, ವೈದ್ಯರು ಬಂದು ಚಿಕಿತ್ಸೆ ನೀಡಿದರೂ ಹಸುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಪಶು ಆಹಾರದ ಜೊತೆ ಕೃಷಿಗೆ ಬಳಸುವ ರಸಗೊಬ್ಬರವಾದ ಯೂರಿಯಾವನ್ನು ನಿದ್ದೆಗಣ್ಣಿನಲ್ಲಿ ತಿಂಡಿಯ ಜೊತೆ ಸೇರಿಸಿದ್ದರಿಂದ ಈ ಅನಾಹುತ ನಡೆದಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ರೈತ ಸೋಮಶೇಖರ್ ಅವರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ