ಆರನೇ ಹಂತದ ಚುನಾವಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ದೇಶದ ವಿವಿಧ ಸರ್ವೆ ಏಜೆನ್ಸಿಗಳು ನಡೆಸಿರುವ ಸರ್ವೆಗಳ ಪ್ರಕಾರ ಎನ್ಡಿಎ ಒಕ್ಕೂಟ ಸರಳ ಬಹುಮತ ಪಡೆದು ಸರ್ಕಾರ ರಚಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಬರಲಿದ್ದು ಸರಿ ಸುಮಾರು 250 ರಿಂದ 260 ಸೀಟುಗಳನ್ನು ಗೆಲ್ಲುವ ಸಾಧ್ಯತೆಗಳಿವೆ, ಅದೇ ರೀತಿ ಬಿಜೆಪಿಯ ಮಿತ್ರ ಪಕ್ಷಗಳು 35 ರಿಂದ 40 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎಂದು ವಿವಿಧ ಸರ್ವೆಗಳು ಮಾಹಿತಿ ನೀಡುತ್ತಿವೆ.
ಹಾಗಾಗಿ ಸುಲಭವಾಗಿ ಎನ್ಡಿಎ ಮೈತ್ರಿಕೂಟ ಸರಳ ಬಹುಮತಕ್ಕೆ ಬೇಕಾದ 273 ಸೀಟುಗಳನ್ನು ಪಡೆದು ಸರ್ಕಾರ ರಚಿಸುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂಬುದು ಖಾಸಗಿ ಸರ್ವೆ ಏಜೆನ್ಸಿಗಳ ಮಾಹಿತಿ ಕುತೂಹಲ ಮೂಡಿಸಿದೆ.