Sunday, November 22, 2026

ಪ್ರಾಯೋಗಿಕ ಆವೃತ್ತಿ

ರಾಜ್ಯದ ಏರ್​ಪೋರ್ಟ್​ಗಳಿಗೆ ಪ್ರಜ್ವಲ್ ರೇವಣ್ಣ ಬರುವುದಿಲ್ಲ!

ಲೈಂಗಿಕ ದೌರ್ಜನ್ಯದ ಆರೋಪಿ ಪ್ರಜ್ವಲ್ ರೇವಣ್ಣ ರಾಜ್ಯದ ಬೆಂಗಳೂರು ಸೇರಿದಂತೆ ಯಾವುದೇ ವಿಮಾನ ನಿಲ್ದಾಣಗಳಿಗೆ ಬರುವುದಿಲ್ಲವಂತೆ ಎಂಬ ಮಾಹಿತಿ ಪೋಲಿಸ್ ವಲಯಗಳಲ್ಲಿ ಚರ್ಚೆಯಾಗುತ್ತಿದೆ.

ಏಕೆಂದರೆ ರಾಜ್ಯದ ಏರ್​ಪೋರ್ಟ್​ಗಳಿಲ್ಲಿ ಪ್ರಜ್ವಲ್ ಇಳಿದ ತಕ್ಷಣ ಎಸ್ಐಟಿ ಅಧಿಕಾರಿಗಳು ತಕ್ಷಣ ಬಂಧಿಸುವುದರಿಂದ, ಅದು ಪ್ರಜ್ವಲ್ ಗೆ ಮುಜುಗರಕ್ಕೀಡು ಮಾಡುವ ವಿಚಾರವಾಗಿರುತ್ತದೆ. ಹಾಗಾಗಿ ಆತ ರಾಜ್ಯದ ಏರ್ಪೋರ್ಟ್ ಗಳಿಗೆ ಬರುವುದಿಲ್ಲ ಎಂಬ ಮಾತು ಪೋಲಿಸ್ ವಲಯದಲ್ಲಿ ಹರಿದಾಡುತ್ತಿದೆ‌.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಎಸ್ಐಟಿ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ‌ಎಷ್ಟೇ ಪತ್ರ ಬರೆದರೂ ಸಹ ಇನ್ನೂ ಪ್ರಜ್ವಲ್ ರೇವಣ್ಣ ಅವರ ಪಾಸ್ ಪೋರ್ಟ್ ರದ್ದಾಗಿಲ್ಲ. ಹಾಗಾಗಿ ಅವರಿಗೆ ದೇಶದ ಯಾವುದೇ ವಿಮಾನ‌ ನಿಲ್ದಾಣಗಳಿಗೆ ಬಂದು ಇಳಿಯಲು ಕಾನೂನಿನ ಯಾವುದೇ ತೊಡಕಿಲ್ಲ.

ಜರ್ಮನಿಯಿಂದ ದೇಶದ ಬೇರೆ ಬೇರೆ ನಗರಗಳಿಗೆ ನೇರ ವಿಮಾನ ಸಂಪರ್ಕವಿದ್ದು, ದೆಹಲಿ, ಮುಂಬೈ,‌ಚೆನ್ನೈ ನಗರಗಳಿಗೆ ಜರ್ಮನಿಯಿಂದ ನೇರ ವಿಮಾನವಿದ್ದು, ಬಹುಶಃ ಪ್ತಜ್ವಲ್ ರೇವಣ್ಣ ಚೆನ್ಮೈ ನಗರಕ್ಕೆ ಬಂದು ಅಲ್ಲಿಂದ ನೇರವಾಗಿ‌ ಕಾರಿನಲ್ಲಿ ಬೆಂಗಳೂರಿನ ಎಸ್ಐಟಿ ಕಚೇರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಎಸ್ಐಟಿ ಅಧಿಕಾರಿಗಳ ಮುಂದೆ ಶರಣಾದರೆ ಅದರ ಸಾಮಾಜಿಕ ‌ಪರಿಣಾಮ ಬೇರೆ ಇದ್ದು, ಪೋಲಿಸರೇ ಖುದ್ದು ಬಂಧಿಸಿದರೆ ಅದರ ಪರಿಣಾಮ ಕೂಡಾ ಬೇರೆ ಯಾಗಿದ್ದು,ಹೆಚ್ಚು ಮುಜುಗರ ತರುತ್ತದೆ. ಹಾಗಾಗಿ ರೇವಣ್ಣ ಅವರ ಕುಟುಂಬದವರು, ಸ್ನೇಹಿತರು ಪ್ರಜ್ವಲ್ ಅವರನ್ನು ಮಿಡಿಯಾಗಳ ಕಣ್ಣು ತಪ್ಪಿಸಿ ನೇರವಾಗಿ ಎಸ್ಐಟಿ ಕಚೇರಿಗೆ ಮುಂದೆ ಹಾಜರು ಮಾಡುವ ಪ್ಲ್ಯಾನ್ ಮಾಡಿದ್ದಾರೆ ಎಂದು ಪೋಲಿಸರ ವಲಯದಲ್ಲಿ ಚರ್ಚೆಯಾಗುತ್ತಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ