Wednesday, November 18, 2026

ಪ್ರಾಯೋಗಿಕ ಆವೃತ್ತಿ

ಚುನಾವಣಾ ಠೇವಣಿ ಕಳೆದುಕೊಳ್ಳವುದು ಎಂದರೇನು ?

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ರಾಷ್ಟ್ರೀಯ ಪಕ್ಷಗಳಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ 7,193 (86.17%) ಅಭ್ಯರ್ಥಿಗಳು ತಮ್ಮ ಭದ್ರತಾ ಠೇವಣಿ ಕಳೆದುಕೊಂಡಿದ್ದಾರೆ.

488 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಎಸ್‌ಪಿ 97.5% ಠೇವಣಿ ಕಳೆದುಕೊಂಡಿದೆ. ಇದರ ನಂತರ 57.69% CPIM, 33.33% NPP, 10.41% ತೃಣಮೂಲ ಕಾಂಗ್ರೆಸ್, 7.9% ಕಾಂಗ್ರೆಸ್ ಮತ್ತು 6.12% ಬಿಜೆಪಿ ಅಭ್ಯರ್ಥಿಗಳಿದ್ದಾರೆ.

PRS ಲೆಜಿಸ್ಲೇಟಿವ್ ರಿಸರ್ಚ್‌ನ ವರದಿಯ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ 8,000 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ, ಅದರಲ್ಲಿ 16% ರಾಷ್ಟ್ರೀಯ ಪಕ್ಷಗಳು, 6% ರಾಜ್ಯ ಪಕ್ಷಗಳು ಮತ್ತು 47% ಅಭ್ಯರ್ಥಿಗಳು ಸ್ವತಂತ್ರರು.

ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವುದರ ಅರ್ಥವೇನು?

ಜನತಾ ಪ್ರಾತಿನಿಧ್ಯ ಕಾಯಿದೆ,1951ರ ಪ್ರಕಾರ, ಸಂಸದೀಯ ಅಥವಾ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯು ನಿರ್ದಿಷ್ಟ ಭದ್ರತಾ ಮೊತ್ತವನ್ನು ಠೇವಣಿ ಇಡಬೇಕು.

ಸಂಸದೀಯ ಚುನಾವಣೆಗೆ ಸ್ಪರ್ಧಿಸಲು 25,000 ರೂ. ಮತ್ತು ವಿಧಾನಸಭೆ ಚುನಾವಣೆಗೆ 10,000 ರೂ. ಈ ಮೊತ್ತವನ್ನು ಚುನಾವಣಾ ಆಯೋಗಕ್ಕೆ ಠೇವಣಿ ಇಡಲಾಗುತ್ತದೆ ಮತ್ತು ಇದನ್ನು ಭದ್ರತಾ ಠೇವಣಿ ಎಂದು ಕರೆಯಲಾಗುತ್ತದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ಗಂಭೀರ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಲು ಠೇವಣಿ ಮೊತ್ತವನ್ನು ಕಡ್ಡಾಯಗೊಳಿಸಲಾಗಿದೆ. ದೇಶದಲ್ಲಿ ಸಂಸದೀಯ ಮತ್ತು ವಿಧಾನಸಭೆ ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗವು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಭದ್ರತಾ ಮೊತ್ತವನ್ನು ಠೇವಣಿ ಮಾಡುವುದು ಅಂತಹ ಒಂದು ಕ್ರಮವಾಗಿದೆ.

ಅಭ್ಯರ್ಥಿಯು ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮಾನ್ಯ ಮತಗಳ ಆರನೇ ಒಂದು ಭಾಗಕ್ಕಿಂತ ಕಡಿಮೆ ಪಡೆದರೆ, ಅವನ/ಅವಳ ಭದ್ರತಾ ಠೇವಣಿಯನ್ನು ಕಳೆದುಕೊಳ್ಳತ್ತಾರೆ.

ಅಂದರೆ 25,000 ಅಥವಾ 10,000 ರೂಪಾಯಿ ಅಥವಾ ಇನ್ನಾವುದೇ ಮೊತ್ತವನ್ನು ಠೇವಣಿ ಇಟ್ಟಿರುವ ಅಭ್ಯರ್ಥಿಗೆ ಭಾರತೀಯ ಚುನಾವಣಾ ಆಯೋಗವು ಮರುಪಾವತಿ ಮಾಡುವುದಿಲ್ಲ.

ಉದಾಹರಣೆಗೆ, ಒಂದು ಅಸೆಂಬ್ಲಿ ಸ್ಥಾನದಲ್ಲಿ 200,000 ಮತಗಳನ್ನು ಚಲಾವಣೆ ಮಾಡಿದ್ದರೆ, ಭದ್ರತಾ ಠೇವಣಿ ಉಳಿಸಲು, ಪ್ರತಿ ಅಭ್ಯರ್ಥಿಯು ಚಲಾವಣೆಯಾದ ಒಟ್ಟು ಮಾನ್ಯವಾದ ಮತಗಳ ಆರನೇ ಒಂದು ಭಾಗವನ್ನು ಪಡೆದುಕೊಳ್ಳಬೇಕಾಗುತ್ತದೆ. ಇದರರ್ಥ ಪ್ರತಿ ಅಭ್ಯರ್ಥಿಯು 33,332 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಬೇಕು.

1951-52ರ ಮೊದಲ ಲೋಕಸಭಾ ಚುನಾವಣೆಯಲ್ಲಿ, ಬಿಸಿನೆಸ್ ಸ್ಟ್ಯಾಂಡರ್ಡ್ ಪ್ರಕಾರ, ಒಟ್ಟು ಅಭ್ಯರ್ಥಿಗಳಲ್ಲಿ ಸುಮಾರು 40% ರಷ್ಟು ಠೇವಣಿ ಕಳೆದುಕೊಂಡರು.

2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸುಮಾರು 86% ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ ಎಂದು ಚುನಾವಣಾ ಆಯೋಗವು ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ