Thursday, November 19, 2026

ಪ್ರಾಯೋಗಿಕ ಆವೃತ್ತಿ

ತಪ್ಪಾದ ಸುಮಲತಾ ಅಂಬರೀಶ್ ಲೆಕ್ಕಾಚಾರ

ಮಂಡ್ಯದ ಮಾಜಿ ಲೋಕಸಭಾ ಸದಸ್ಯರಾದ ಸುಮಲತಾ ಅವರ ರಾಜಕೀಯ ಲೆಕ್ಕಾಚಾರ ತಪ್ಪಾಗಿದೆ ಎಂದು ಅಂಬರೀಶ್ ಅಭಿಮಾನಿಗಳೇ ಮಾತನಾಡಿಕೊಳ್ಳುತ್ತಿದ್ದಾರೆ.

ಸುಮಲತಾ ಅವರು ತಮ್ಮ‌ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಗಿಯಾದ ಪಟ್ಟನ್ನು ಹಿಡಿಯಬೇಕಿತ್ತು. ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಬಾರದಿತ್ತು. ಒಂದು ವೇಳೆ ಬಿಜೆಪಿಯಿಂದ ಅಭ್ಯರ್ಥಿ ಆಗುವುದು ಸಾಧ್ಯವೇ ಇಲ್ಲವೆಂದಾದರೆ ಕಾಂಗ್ರೆಸ್ ಅವಕಾಶವನ್ನು ಅಥವಾ ಬೇರೆ ಯಾವುದೇ ಆಯ್ಕೆಗಳನ್ನು ಪರಿಶೀಲಿಸಬೇಕಿತ್ತು ಎನ್ನುವ ಮಾತುಗಳು ಅಂಬರೀಶ್ ಅಭಿಮಾನಿಗಳಿಂದಲೇ ಕೇಳಿ ಬರುತ್ತಿವೆ.

ಒಬ್ಬ ಸಂಸದರಾಗಿ ತಮ್ಮ ಹಿಂಬಾಲಕರು ಮತ್ತು ಅನುಯಾಯಿಗಳ ಭವಿಷ್ಯದ ಬಗ್ಗೆ ಯೋಚಿಸಬೇಕಾದ ಸುಮಲತಾ ಅವರು, ಅದರ ಬದಲು ಮೋದಿಜೀಯ ಕುರುಡು ಅಭಿಮಾನಿಯಾಗಿ ಅವರ ಮಾತಿಗೆ ಮರುಳಾಗಿ ಕ್ಷೇತ್ರ ತ್ಯಾಗ ಮಾಡಿ ಈಗ ರಾಜಕೀಯದಿಂದಲೇ ದೂರವಾಗುತ್ತಿದ್ದಾರೆ ಎಂದು ಅವರ ಹಿಂಬಾಲಕರೇ ಮಾತನಾಡುವಂತಾಗಿದೆ.

ಈಗ ಕೇಂದ್ರದಲ್ಲಿ ಮೈತ್ರಿ ಪಕ್ಷಗಳ ಮರ್ಜಿಯಲ್ಲಿ ಸರ್ಕಾರ ನಡೆಸಬೇಕಾದ ಅನಿವಾರ್ಯತೆಯಲ್ಲಿರುವ ಕಾರಣ ಮೋದಿಜೀ ಅವರು ಮೈತ್ರಿ ಪಕ್ಷದ ಕುಮಾರಸ್ವಾಮಿ ಅವರನ್ನು ಎದುರು ಹಾಕಿಕೊಂಡು ಸುಮಲತಾ ಅವರಿಗೆ ಯಾವ ದೊಡ್ಡ ಹುದ್ದೆಗಳನ್ನು ಕೊಡುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಅಂಬರೀಶ್ ಅಭಿಮಾನಿಗಳೇ ವ್ಯಕ್ತಪಡಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ಸುಮಲತಾ ಅಂಬರೀಶ್ ಅವರಿಗೆ ಬಿಜೆಪಿ ಅವಕಾಶ ನೀಡಲಿದೆ ಎಂಬ ಮಾತು ದಟ್ಟವಾಗಿ ಕೇಳಿ ಬಂದಿತ್ತು. ಅಂತಿಮ ಪಟ್ಟಿಯಲ್ಲೂ ಅವರ ಹೆಸರಿತ್ತು.ಆದರೆ ಕೊನೆ ಗಳಿಗೆಯಲ್ಲಿ ಸುಮಲತಾ ಅವರಿಗೆ ತಪ್ಪಿ ಆ ಸ್ಥಾನ ಸಿ.ಟಿ.ರವಿ ಪಾಲಾಗಿ ಅಲ್ಲೂ ಅನ್ಯಾಯವಾಗಿದ್ದು, ಅಂಬರೀಶ್ ಅಭಿಮಾನಿಗಳ ಕೋಪ ನೆತ್ತಿಗೇರಲು ಕಾರಣವಾಗಿದೆ.

ಸುಮಲತಾ ಅವರು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ ಅಂಬರೀಷ್ ಕಟ್ಟಿದ್ದ ಅಂಬರೀಷ್ ಅಭಿಮಾನಿಗಳ ಪಡೆ ಕಾಲಕ್ರಮೇಣ ಕರಗಿಹೋಗಿ ಬಿಡಬಹುದು ಎಂದು ಹೆಸರು ಹೇಳಲು ಇಚ್ಚಿಸದ ಅಂಬರೀಶ್ ಅಭಿಮಾನಿಯೊಬ್ಬರು ಬೇಸರದಿಂದ ನುಡಿದಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ