NEET UG -2024ರ ಪರೀಕ್ಷಾ ಅಕ್ರಮ ಪ್ರಕರಣವು ಸುಪ್ರೀಂ ಕೋರ್ಟಿನಲ್ಲಿ ಇಂದು ವಿಚಾರಣೆ ನಡೆದು, ಪರೀಕ್ಷಾ ಫಲಿತಾಂಶದಲ್ಲಿ 1,563 ಅಭ್ಯರ್ಥಿಗಳು ಪಡೆದ ಗ್ರೇಸ್ ಅಂಕಗಳನ್ನು ಸರ್ವೋಚ್ಚ ನ್ಯಾಯಾಲಯವು ಅಮಾನ್ಯ (ರದ್ದು)ಗೊಳಿಸಿದೆ. ಅಲ್ಲದೇ ಗ್ರೇಸ್ ಅಂಕಗಳನ್ನು ಪಡೆದ 1,563 ಅಭ್ಯರ್ಥಿಗಳಿಗೆ ಜೂನ್ 23 ರಂದು ಮರು ಪರೀಕ್ಷೆ ನಡೆಯಲಿದ್ದು, ಜೂನ್ 30 ರೊಳಗೆ ಫಲಿತಾಂಶ ಪ್ರಕಟಿಸಲಾಗುವುದೆಂದು ರಾಷ್ಟೀಯ ಪರೀಕ್ಷಾ ಸಂಸ್ಥೆ (NTA) ಯು ನ್ಯಾಯಾಲಯಕ್ಕೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ರಜಾಕಾಲದ ಪೀಠವು ಜೂನ್ 1 ರಂದು ಶಿವಂಗಿ ಮಿಶ್ರಾ ಮತ್ತು ಇತರ ಒಂಬತ್ತು ಮಂದಿ ಸಲ್ಲಿಸಿದ ಮೊದಲ ಅರ್ಜಿಯನ್ನು ವಿಚಾರಣೆ ನಡೆಸಿತು
ಜುಲೈನಲ್ಲಿ ಪ್ರಾರಂಭವಾಗಲಿರುವ ಕೌನ್ಸೆಲಿಂಗ್ಗೆ ಯಾವುದೇ ತೊಂದರೆಯಾಗದಂತೆ ಫಲಿತಾಂಶಗಳನ್ನು ಮುಂಚಿತವಾಗಿ ಘೋಷಿಸಲಾಗುತ್ತದೆ. ಮರು ಪರೀಕ್ಷೆಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳ ಫಲಿತಾಂಶಗಳು ಮೇ 5 ರಂದು ನಡೆದ ಪರೀಕ್ಷೆಯ ಫಲಿತಾಂಶದಂತೆ ಅಂಕಗಳು (ಗ್ರೇಸ್ ಅಂಕಗಳನ್ನು ಬಿಟ್ಟು) ಉಳಿಯಲಿವೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಎಂಬಿಬಿಎಸ್, ಬಿಡಿಎಸ್ ಮತ್ತು ಇತರ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ವಿವಾದಿತ ವೈದ್ಯಕೀಯ ಪ್ರವೇಶ ಪರೀಕ್ಷೆ NEET-UG, 2024 ಕುರಿತು ಮೂರು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಆರಂಭಿಸಿದೆ. 1,500 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಯಾದೃಚ್ಛಿಕವಾಗಿ ಗ್ರೇಸ್ ಅಂಕಗಳನ್ನು ನೀಡುವುದರ ವಿರುದ್ಧ ಎಡ್ಟೆಕ್ ಸಂಸ್ಥೆಯ ‘ಫಿಸಿಕ್ಸ್ ವಲ್ಲಾ’ ಮುಖ್ಯ ಕಾರ್ಯನಿರ್ವಾಹಕ ಅಲಖ್ ಪಾಂಡೆ ಅವರು ಅರ್ಜಿಯನ್ನು ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ, ಅಲಖ್ ಪಾಂಡೆ ಅವರು ಸುಪ್ರೀಂ ಕೋರ್ಟ್ ಅನ್ನು “ನೀಟ್ ಪರೀಕ್ಷಾ ಪ್ರಕ್ರಿಯೆ ಮತ್ತು ಫಲಿತಾಂಶಗಳ ಬಗ್ಗೆ ವಿಚಾರಣೆ ಮಾಡಲು” ಅದರ ಮೇಲ್ವಿಚಾರಣೆಯಲ್ಲಿ ಪರಿಣಿತ ಸಮಿತಿಯನ್ನು ಸ್ಥಾಪಿಸಲು ಒತ್ತಾಯಿಸಿದರು. ಈ ವರ್ಷ, ಒಟ್ಟು 67 ವಿದ್ಯಾರ್ಥಿಗಳು ಪರಿಪೂರ್ಣ 720 ಅಂಕಗಳನ್ನು ಗಳಿಸಿದ್ದಾರೆ. ಹರಿಯಾಣದ ಫರಿದಾಬಾದ್ ಅಕ್ರಮಗಳ ಬಗ್ಗೆ ಬೊಟ್ಟು ಮಾಡಿದ್ದರು. ಒಂದೇ ಕೇಂದ್ರದಿಂದ ಆರು ಅಭ್ಯರ್ಥಿಗಳು ಗರಿಷ್ಠ 720 ಅಂಕಗಳನ್ನು ಪಡೆದ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದನ್ನು ಪ್ರಶ್ನಿಸಿದರು.




