KRS ಡ್ಯಾಂ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ಹೆಚ್.ಎನ್.ರವೀಂದ್ರ, ಟ್ರಯಲ್ ಬ್ಲಾಸ್ಟ್ ನಲ್ಲೇ ಡ್ಯಾಂ ಒಡೆದು ಹೋದ್ರೆ ಏನು ಮಾಡೋದು? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ ಅಭಿವೃದ್ದಿ ರಾಜಕಾರಣಕ್ಕಾಗಿ ಪ್ರಗತಿಪರ ಸಂಘಟನೆಗಳ ಸಭೆ ಕರೆದು ಮಾತನಾಡಿದ ಅವರು,
ಟ್ರಯಲ್ ಬ್ಲಾಸ್ಟ್ ಗೆ ನಮ್ಮ ಅಸಮಾಧಾನ ಇದೆ. KRS ಡ್ಯಾಂ ನ 20 ಕಿ.ಮೀ ವ್ಯಾಪ್ತಿ ಗಣಿಗಾರಿಕೆ ಮಾಡಬಾರದು ಎಂಬುದು ಜಿಲ್ಲೆಯ ಜನರ ಅಭಿಪ್ರಾಯ. ಟ್ರಯಲ್ ಬ್ಲಾಸ್ಟ್ ಮಾಡುವ ಅವಶ್ಯಕತೆಯೂ ಇಲ್ಲ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದರು.
ಟ್ರಯಲ್ ಬ್ಲಾಸ್ಟ್ ಬೇಕು ಎಂಬುದು ನ್ಯೂಕ್ಲಿಯರ್ ಬಾಂಬ್ ಟೆಸ್ಟ್ ಮಾಡಲು ಬಗ್ಗೆ ಬಾಂಬೆ ಮೇಲೆ ಹಾಕಿ ನೋಡೋಣ ಅನ್ನೋ ತರ ಆಯ್ತು ಎಂದು ಕಿಡಿಕಾರಿದರು. ಬಾಂಬ್ ನ ತೀವ್ರತೆ ಬಗ್ಗೆ ಗೊತ್ತಿದೆ, ಆದರೂ ಸಹ ಟ್ರಯಲ್ ಬ್ಲಾಸ್ಟ್ ಎಂಬುದು ಸರಿಯಲ್ಲ, ಬೇರೆ ಕಡೆ ಬೇಕಾದರೆ ಪ್ರಯೋಗ ಮಾಡಲಿ. ಟ್ರಯಲ್ ಬ್ಲಾಸ್ಟ್ ಮಾಡುವುದು ಸೂಕ್ತ ಅಲ್ಲ, ಒಂದು ವೇಳೆ ಟ್ರಯಲ್ ಬ್ಲಾಸ್ಟ್ ಮಾಡಿದರೆ ನಾವು ಪ್ರತಿಭಟನೆ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.
ಕೈಗುಳಿ ಕೆಲಸ ಮಾಡಲು ಬಿಟ್ಟಿದ್ರೆ ಇವಾಗ ಎಲ್ಲ ನೆಟ್ಟಗಿರೋದು, ಕೈಗುಳಿಯವರನ್ನ ಹಿಡಿಸಿ ಇವಾಗ ಅಭಿವೃದ್ಧಿಗೆ ಗಣಿಗಾರಿಕೆ ಬೇಕು ಅಂತಿದ್ದಾರೆ, ಟ್ರಯಲ್ ಬ್ಲಾಸ್ಟ್ ಸರಿಯಲ್ಲ. ಆಗೊಂದು ವೇಳೆ ಮಾಡಿದರೆ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಂಬಲ ಕೊಡ್ತೇನೆ. ಟ್ರಯಲ್ ಬ್ಲಾಸ್ಟ್ ಗೆ ನೂರಕ್ಕೆ ನೂರರಷ್ಟು ವಿರೋಧ ಮಾಡ್ತೇನೆ. ಈ ವಿಷಯವನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೂ ತರುತ್ತೇನೆಂದು ಹೇಳಿದರು.
ಅಭಿವೃದ್ಧಿ ಯೋಜನೆ ಪಟ್ಟಿ ಸಿದ್ದ
ನಾಳಿನ ಜನತಾ ದರ್ಶನಕ್ಕೆ ಹೆಚ್.ಡಿ. ಕುಮಾರಸ್ವಾಮಿ ಬರ್ತಿದ್ದಾರೆ. ಅವರಿಗೆ ಕೆಲವು ಅಭಿವೃದ್ಧಿ ಯೋಜನೆ ಪಟ್ಟಿ ಸಿದ್ದಪಡಿಸಲಾಗಿದೆ. ಕೃಷಿ ಆಧಾರಿತ ಕೈಗಾರಿಕೆ ತರುವ ಬಗ್ಗೆ, ಉದ್ಯೋಗ ಸೃಷ್ಟಿ ಬಗ್ಗೆ ಸಚಿವರ ಗಮನ ಸೆಳೆಯಲಾಗುವುದು ಎಂದರು.
ಅಧಿಕಾರದ ರಾಜಕಾರಣ ಮಾಡಿಕೊಂಡು ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ನಾಲೆ ಕಾಮಗಾರಿ ಹೆಸರಲ್ಲಿ ನೀರು ಬಿಟ್ಟಿಲ್ಲ. ಹೆಚ್ಚುವರಿಯಾಗಿ 4 ಗಂಟೆ ಕರೆಂಟ್ ಕೊಡಬೇಕು. ಇದನ್ನ ಬಿಟ್ಟು ಏರ್ ಪೋರ್ಟ್ ಬಗ್ಗೆ ಚರ್ಚೆ ಮಾಡ್ತಾರೆ. ಈ ಬಗ್ಗೆ ಕುಮಾರಸ್ವಾಮಿ ಗಮನಕ್ಕೆ ಕಾರ್ಯಕ್ರಮ ತರುತ್ತೇವೆ. ಜಿಲ್ಲೆಯ ಜನರಿಗೆ ಉದ್ಯೋಗ ಸೃಷ್ಟಿ ಮಾಡಬೇಕು. ಭಾರಿ ಕೈಗಾರಿಕೆ, ಇಎಸ್ಐ ಆಸ್ಪತ್ರೆ ತರಬೇಕು. ಫ್ಯಾಕ್ಟರಿ ತರಬೇಕು ಈ ಬಗ್ಗೆವಿಶೇಷ ಕಾಳಜಿ ಕುಮಾರಣ್ಣನಿಗೆ ಇದೆ. ವಿಶೇಷವಾಗಿ ಅಭಿವೃದ್ಧಿ ಮಾಡ್ತಾರೆ. ಜಿಲ್ಲೆಯ ಮೇಲಿನ ಪ್ರೀತಿ ಇದೆ, ಜಿಲ್ಲೆಗೆ ದೊಡ್ಡ ಕೊಡುಗೆ ನೀಡ್ತಾರೆ ಅನ್ನೊ ವಿಶ್ವಾಸ ಇದೆ ಎಂದರು.




