Tuesday, November 24, 2026

ಪ್ರಾಯೋಗಿಕ ಆವೃತ್ತಿ

ಬಿಜೆಪಿಯ ಶ್ರೀರಾಮನಿಗೆ ಕಾಂಗ್ರೆಸ್ಸಿನ ಈಶ್ವರ !!

ಪ್ರಾಚೀನ ಹಿಂದೂ ಪುರಾಣ ಪುಣ್ಯ ಕಥೆಗಳಿಂದ ಹಿಡಿದು, ಮಧ್ಯಕಾಲೀನ ರಾಮನುಜಾಚಾರ್ಯ, ಶಂಕರಾ ಚಾರ್ಯರ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸಿದ್ದಾಂತಗಳ ಮೂಲಕ ವಿಷ್ಣು ಮತ್ತು ಈಶ್ವರ ಪಂಥದ ಸಾಧಕರು ಮತ್ತು ಅನುಯಾಯಿಗಳ ಪರಸ್ಪರ ಚರ್ಚೆ,ವಾದ ವಿವಾದ ಹೋರಾಟ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

ಆದರೆ ಪ್ರಸ್ತುತ ರಾಜಕೀಯದಲ್ಲಿಯೂ ಸಹ ವಿಷ್ಣು ಮತ್ತು ಈಶ್ವರರ ಬಳಕೆ ಪ್ರಾರಂಭವಾಗಿದೆಯೇ ಎಂಬ ಬಗ್ಗೆ ರಾಜಕೀಯ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.

ಬಿಜೆಪಿ ವಿಷ್ಣುವಿನ ಅವತಾರವಾದ ಶ್ರೀರಾಮನ ಮೂಲಕ ದೇಶದಲ್ಲಿ ತನ್ನ ಸಂಘಟನೆಯನ್ನು ಸದೃಢೀಕರಿಸಿಕೊಂಡಂತೆ, ಕಾಂಗ್ರೆಸ್ ಸಹ ಈಶ್ವರನ ಮೂಲಕ ತನ್ನ ಸಂಘಟನೆಯನ್ನು ಪ್ರಬಲಗೊಳಿಸಿಕೊಳ್ಳಲು ಹೊರಟಿದೆಯೇ ಎಂಬುದರ ಬಗ್ಗೆ ಹಲವರು ಚರ್ಚಿಸುತ್ತಿದ್ದಾರೆ.

ರಾಹುಲ್ ಗಾಂಧಿ ಲೋಕಸಭೆಯಲ್ಲಿ ಇತ್ತಿಚೇಗೆ ಮಾತನಾಡಿ, ಈಶ್ವರನ ಪೋಟೋ ತೋರಿಸಿ, ಈಶ್ವರ ತ್ರಿಶೂಲವನ್ನು ಮುಂದೆ ಇಟ್ಟುಕೊಂಡಿಲ್ಲ, ಅದನ್ನು ಹಿಂದೆ ಇಟ್ಟುಕೊಂಡಿದ್ದು, ಇದರ ಅರ್ಥ ಆಯುಧ ಆಕ್ರಮಣಕ್ಕೆ ಅಲ್ಲ,‌ ರಕ್ಷಣೆಗೆ ಎನ್ನುವಂತೆ ಮಾತನಾಡಿದ್ದರು.

ಅಲ್ಲದೇ ಈಶ್ವರ ಅಭಯ ಹಸ್ತವೇ ನಮ್ಮ ಕಾಂಗ್ರೆಸ್ ಪಕ್ಷದ ಚಿಹ್ನೆಯಾಗಿದೆ ಎಂದಿದ್ದರು. ರಾಹುಲ್ ಗಾಂಧಿ ಅವರ ಈ ಹೇಳಿಕೆಯನ್ನು ಶಂಕರ ಪೀಠದ ಶಂಕರಾಚಾರ್ಯರು ಖುದ್ದು ಸಮರ್ಥನೆ ಮಾಡಿ‌ ಮಾತನಾಡುತ್ತಿರುವುದು ಮುಂದಿನ ದಿನಗಳಲ್ಲಿ ದೇಶದ ರಾಜಕೀಯ ಪರಿಭಾಷೆ ವಿಷ್ಣು ಮತ್ತು ಈಶ್ವರರ ನಡುವಿನ ನರೆಟೀವ್ ಆಗಿ ಬದಲಾಗಬಹುದಾದ ಸಾಧ್ಯತೆಗಳನ್ನು ಹುಟ್ಟುಹಾಕಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ