Thursday, November 19, 2026

ಪ್ರಾಯೋಗಿಕ ಆವೃತ್ತಿ

ಪೂರ್ಣ ಭರ್ತಿಯಾಗಿ ಕಂಗೊಳಿಸುತ್ತಿರುವ KRS : ಜು.29ಕ್ಕೆ ಸಿಎಂ ಸಿದ್ದರಾಮಯ್ಯ ಬಾಗಿನ

ಹನಿಯಂಬಾಡಿ ಜಗದೀಶ್

ಅಂತೂ ಇಂತೂ ಹಳೇ ಮೈಸೂರು ಭಾಗದ ಜನರ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆ ತನ್ನ ಗರಿಷ್ಟ ಮಟ್ಟ 124.80 ಅಡಿಗಳನ್ನು ಮುಟ್ಟುವ ಮೂಲಕ ಈ ಭಾಗದ ಜನರಲ್ಲಿ ನೆಮ್ಮದಿಯ ಭಾವ ಮೂಡಿಸಿದೆ.

ಕಳೆದ ವರ್ಷ ಬರದಿಂದ ಕಂಗೆಟ್ಟಿದ ರೈತರು, ಈ ಬಾರಿ ನಾಲೆಗಳಿಗೆ ನೀರು ಹರಿಸಿರುವುದರಿಂದ ಕೃಷಿ ಚಟುವಟಿಕೆಯಲ್ಲಿ ಬಾಗಿಯಾಗಿದ್ಧಾರೆ. ಇದರ ನಡುವೆ ಅಣೆಕಟ್ಟೆಯು ತನ್ನ ಗರಿಷ್ಟ ಮಟ್ಟವನ್ನು ತಲುಪಿರುವುದು ರೈತರ ಖುಷಿಯನ್ನು ಇಮ್ಮಡಿಗೊಳಿಸಿದೆ.

ಜು.24 ರಾತ್ರಿ 8 ಗಂಟೆಯ ವೇಳೆಗೆ ಕೆ.ಆರ್.ಎಸ್ ಜಲಾಶಯವು ಗರಿಷ್ಟ ಮಟ್ಟ ವನ್ನು ಮುಟ್ಟಿದೆ. ಅದೇ ವೇಳೆಯಲ್ಲಿ ಗರಿಷ್ಠ ಸಾಮರ್ಥ್ಯದ ನೀರನ್ನು ಸಂಗ್ರಹ ಮಾಡಲಾಗಿದೆ, ಇಂದಿನ ನೀರಿನ ಸಂಗ್ರಹವು ಗರಿಷ್ಠ   49.452 ಟಿ.ಎಂ.ಸಿ ಯನ್ನು ತಲುಪಿದೆ. ಅಣೆಕಟ್ಟೆಗೆ 41,099 ಕ್ಯೂಸೆಕ್ ಒಳಹರಿವು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ಕೆ.ಆರ್.ಎಸ್ ನೀರಿನ ಮಟ್ಟ

  • ಗರಿಷ್ಟ ಮಟ್ಟ : 124.80 ಅಡಿ (ಜು.24ರ ರಾತ್ರಿ 8 ಗಂಟೆಯ ವೇಳೆಗೆ)
  • ಇಂದಿನ ನೀರಿನ ಮಟ್ಟ : 124.80 ಅಡಿ 
  • ಗರಿಷ್ಟ ನೀರಿನ ಸಂಗ್ರಹ : 49.452 ಟಿ.ಎಂ.ಸಿ
  • ಇಂದಿನ ನೀರಿನ ಸಂಗ್ರಹ: 49.452 ಟಿ.ಎಂ.ಸಿ 
  • ಒಳಹರಿವು : 41,099 ಕ್ಯೂಸೆಕ್ 
  • ಹೊರಹರಿವು : 41,099 ಕ್ಯೂಸೆಕ್

ಸೋಮವಾರ ಸಿಎಂ ಬಾಗಿನ

ಅಣೆಕಟ್ಟೆಯು ಪೂರ್ಣ ಭರ್ತಿಯಾಗಿರುವುದರಿಂದ ಸಿಎಂ ಸಿದ್ದರಾಮಯ್ಯ ಅವರು ಜು.29ರಂದು ಸೋಮವಾರ ಕೆ.ಆರ್.ಎಸ್ ಬಾಗಿನ ಅರ್ಪಿಸಲಿದ್ದಾರೆಂದು ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಅಣೆಕಟ್ಟೆಯಲ್ಲಿ ಗರಿಷ್ಟ ಪ್ರಮಾಣದ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ನಿರ್ಧರಿಸಿದ್ದು, ಎಷ್ಟು ಪ್ರಮಾಣದ ಒಳಹರಿವಿದೆಯೋ ಅಷ್ಟೇ ಪ್ರಮಾಣ ನೀರನ್ನು ಹೊರಕ್ಕೆ ಹರಿಸುವ ನಿರ್ಧಾರಕ್ಕೆ ಬಂದಿದ್ದಾರೆಂದು ತಿಳಿದು ಬಂದಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ