Saturday, November 21, 2026

ಪ್ರಾಯೋಗಿಕ ಆವೃತ್ತಿ

ಮೇಕೆದಾಟು| ಸಮ್ಮತಿ ಕೊಡಿಸಿದರೆ, ಯೋಜನೆ ಜಾರಿಗೆ ಸಿದ್ದ : ಡಿ.ಸಿ ತಮ್ಮಣ್ಣ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮೇಕೆದಾಟು ಯೋಜನೆ ಮಾಡಲು ಸಿದ್ದರಿದ್ದಾರೆ. ರಾಜ್ಯ ಸರ್ಕಾರ ಇಂಡಿಯಾ ಒಕ್ಕೂಟದ ಅಂಗ ಪಕ್ಷವಾದ ತಮಿಳುನಾಡಿನ ಅಣ್ಣ ಡಿಎಂಕೆಯಿಂದ ಅನುಮತಿ ಪತ್ರ ಕೊಡಿಸಿದರೆ, ಹೆಚ್.ಡಿ.ಕೆ ಕುಮಾರಸ್ವಾಮಿ ಅವರು ಯೋಜನೆ ಜಾರಿಗೆ ಸಿದ್ದವಿದ್ದಾರೆಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಾಯಕರು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮೇಕೆದಾಟು ಯೋಜನೆಯನ್ನು ಮಾಡಿತೋರಿಸಲಿ ಎಂದು ಸವಾಲು ಹಾಕುತ್ತಿದ್ದಾರೆ. ಆ ಸವಾಲಿಗೆ ನಾವು ಸಿದ್ದರಿದ್ದೇವೆ. ಅವರು ಅಣ್ಣ ಡಿಎಂಕೆಯಿಂದ ಅನುಮತಿ ಪತ್ರ ಕೊಡಿಸಿದರೆ 15 ದಿನಗಳಲ್ಲಿ ಯೋಜನೆ ಆರಂಭವಾಗಲಿದೆ. ಇದು ಕಾಂಗ್ರೆಸ್ ಪಕ್ಷದವರಿಂದ ಸಾಧ್ಯವೇ ಎಂದು ಸವಾಲು ಹಾಕಿದರು.

ಪ್ರಾದೇಶಿಕ ಪಕ್ಷವನ್ನು ಕಟ್ಟಿಬೆಳೆಸುವುದು ಅಷ್ಟು ಸುಲಭವಲ್ಲ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯದಲ್ಲಿ ಸದೃಢವಾಗಿ ಜೆಡಿಎಸ್ ಪಕ್ಷವನ್ನು ಬೆಳೆಸಿದ್ದಾರೆ. ಎಷ್ಟೋನಾಯಕರು ಪ್ರಾದೇಶಿಕ ಪಕ್ಷವನ್ನು ಕಟ್ಟಲು ಹೋಗಿ ವಿಫಲವಾಗಿರುವುದು ರಾಜ್ಯದ ಜನರಿಗೆ ಗೊತ್ತಿದೆ ಎಂದರು.

ಹೆಚ್.ಡಿ.ದೇವೇಗೌಡರಾಗಲಿ, ಹೆಚ್.ಡಿ.ಕುಮಾರಸ್ವಾಮಿ ಅವರಾಗಲಿ ಕಾಂಗ್ರೆಸ್ಸಿನವರ ಮನೆಯ ಬಾಗಿಲಿಗೆ ಎಂದೂ ಹೋಗಿಲ್ಲ, ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರು ತಮ್ಮ ಅಧಿಕಾರದ ದಾಹಕ್ಕಾಗಿ 2 ಭಾರಿ ಹೆಚ್.ಡಿ.ದೇವೇಗೌಡರ ಮನೆಯ ಬಾಗಿಲಿಗೆ ಬಂದು ಸಹಾಯ ಪಡೆದು ಅಧಿಕಾರ ನಡೆಸಿದ್ದಾರೆ. ಪ್ರಾದೇಶಿಕ ಪಕ್ಷದ ಬಗ್ಗೆ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸಿತೋರಿಸಲಿ ಎಂದರು.

ಜೆಡಿಎಸ್ ಪಕ್ಷ ಒಂದು ಕಾರ್ಖಾನೆ ಇದ್ದಂತೆ. ಎಷ್ಟೋ ರಾಜಕಾರಣಿಗಳನ್ನು ಹುಟ್ಟುಹಾಕಿದೆ. ಇದೇ ಜೆಡಿಎಸ್ ಪ್ರಾದೇಶಿಕ ಪಕ್ಷದಲ್ಲಿ ಬೆಳೆದು ಇಂದು ಅನ್ಯ ಪಕ್ಷಗಳಿಗೆ ಹೋಗಿ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿರುವುದನ್ನು ಮರೆಯದೆ ನೆನಪಿಸಿಕೊಳ್ಳಬೇಕೆಂದು ಗುಡುಗಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ