ಭಾಷೆ ಬೆಳವಣಿಗೆಗೆ ಬೇರೆ ಭಾಷೆ ಬೇಕು, ಹಲವು ಭಾಷೆಗಳ ಬೆಳವಣಿಗೆಯಿಂದ ಇಂಗ್ಲಿಷ್ ಭಾಷೆ ಬೆಳೆದಿದೆ ಎಂದು ಲೇಖಕಿಯರ ಸಂಘದ ಮಂಡ್ಯ ಜಿಲ್ಲಾಧ್ಯಕ್ಷೆ ಡಾ.ಮೀರಾಶಿವಲಿಂಗಯ್ಯ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಮಂಡ್ಯದ ಜ್ಞಾನಸಾಗರ ಕ್ಯಾಂಪಸ್ ನ ಎಸ್’ಟಿಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕವಿ- ಕಾವ್ಯಾವಲೋಕನ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂಗ್ಲಿಷ್ ಹಾಗೂ ಕನ್ನಡ ಸಮ್ಮಿಶ್ರಣ ಮಾತನಾಡುವುದು ಭಾಷಾ ಬೆಳವಣಿಗೆಗೆ ಸೂಕ್ತವಲ್ಲ ಎಂದು ನುಡಿದರು.
ಪ್ರಪಂಚದಲ್ಲಿ ಸುಮಾರು ಆರು ಸಾವಿರ ಭಾಷೆಗಳಿದ್ದು, ಕರ್ನಾಟಕ ರಾಜ್ಯದಲ್ಲಿ ಸುಮಾರು 172 ಕ್ಕಿಂತ ಹೆಚ್ಚು ಬೇರೆ ಬೇರೆ ಮಾತೃ ಭಾಷೆಗಳನ್ನು ಮಾತನಾಡುತ್ತಿದ್ದಾರೆ.ನಾಡು ನುಡಿ ಮೇಲೆ ಅನೇಕ ಆಕ್ರಮಣಗಳು ನಡೆದಿದೆ, ಆಕ್ರಮಣವನ್ನು ತಡೆಯಲು ಕನ್ನಡ ಚಳುವಳಿಗಳು ಭಾಷೆ ಆಧಾರದ ಮೇಲೆ ನೆಡೆದು ಕನ್ನಡ ನಾಡು ಏಕೀಕರಣ ಆಗಿದೆ. ಕನ್ನಡವನ್ನು ಬೆಳೆಸಬೇಕು ಎಂದು ಅನೇಕ ಕವಿಗಳು ಹೋರಾಟ ನಡೆಸಿ ಭಾಷೆ ಉಳಿವಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಶಿಕ್ಷಕ ಕೊತ್ತತ್ತಿ ರಾಜು ಅವರು ಕಡಿಕೋಳ ಮಡಿವಾಳಪ್ಪ ಮತ್ತು ಸಂತ ಶಿಶುನಾಳ ಶರೀಫರ ತತ್ವಪದ ಹಾಗೂ ಇಂದೂಮತಿ ಲಮಾಣಿಯವರ ‘ನನ್ನಾಸೆ ‘ಎಂಬ ಕವನ ವಿಷಯ ಕುರಿತು ವಿಷಯ ಮಂಡನೆ ಮಾಡಿದರು.
ವೇದಿಕೆಯಲ್ಲಿ ಗೀತಾಂಜಲಿ ಅಂತರ ರಾಷ್ಟ್ರೀಯ ಶಾಲೆಯ ಪ್ರಾಂಶುಪಾಲೆ ಹೆಚ್.ಸರೋಜ, ಲೇಖಕಿಯರ ಸಂಘದ ನಿರ್ದೇಶಕರಾದ ಎ.ಎನ್. ಶರ್ಮಿಳಾ, ಡಿ. ಶಿಲ್ಪ, ಆಶಾ ಇತರರು ಹಾಜರಿದ್ದರು.




