ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್. ಎಂ ರಾಜು ಉಪಾಧ್ಯಕ್ಷರಾಗಿ ಕೆ.ಸಿದ್ದಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ಕಚೇರಿಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ಎಚ್ ಎಂ ರಾಜು ಮತ್ತು ಉಪಾಧ್ಯಕ್ಷರಾಗಿ ಕೆ ಸಿದ್ದಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದು ಚುನಾವಣೆ ಅಧಿಕಾರಿ ರಾಮಕೃಷ್ಣ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ನಂತರ ಮಾತನಾಡಿದ ಹೆಚ್ ಎಂ ರಾಜು, ನನ್ನನ್ನು ಆಯ್ಕೆ ಮಾಡಿದ ಸದಸ್ಯರುಗಳಿಗೆ ಅಭಿನಂದಿಸುತ್ತಿದ್ದೇನೆ ಹಾಗೂ ಸದಸ್ಯರುಗಳ ಮಾತನ್ನು ಗಣನೆಗೆ ತೆಗೆದುಕೊಂಡು ಸೊಸೈಟಿಯನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತೇವೆ. ಸೊಸೈಟಿಯಿಂದ ಕಾರ್ಯಕ್ರಮಗಳನ್ನು ರೂಪಿಸಿ ರೈತರಿಗೆ ಅನುಕೂಲ ವಾಗುವಂತೆ ಮಾಡುತ್ತೇನೆ ಎಂದು ತಿಳಿಸಿದರು.
ಇದೇ ವೇಳೆಯಲ್ಲಿ ಸದಸ್ಯರಾದ ಸಿದ್ದರಾಜು, ವೀರೇಗೌಡ, ಶೋಭ, ಭಾನುಮತಿ, ರಾಮೇಗೌಡ, ಸಿದ್ದರಾಜು. ಇಂದ್ರ, ಮುಖಂಡರಾದ ನಾಗರಾಜು, ರಾಮಣ್ಣ, ಮರಿಸ್ವಾಮಿ, ಮಹಾದೇವಯ್ಯ, ಸೋಮಾಪ್ಪ, ಹನುಮಂತೇಗೌಡ, ಮುದ್ದೆಗೌಡ, ಕಾಂತರಾಜು, ಮಹೇಶ್, ಸಿಇಓ ಕೆ ಜಯರಾಮ್ ಸೇರಿದಂತೆ ಇತರರು ಇದ್ದರು.




