ಕನ್ನಡ ಸಿನಿಮಾ ರಂಗದ ಮೇರು ನಟ ಡಾ.ರಾಜ್‌ಕುಮಾರ್ ಅವರ ಚಲನಚಿತ್ರಗಳು ಮತ್ತು ಸಾಹಿತ್ಯ ಪ್ರತಿಯೊಬ್ಬರಿಗೂ ಮಾರ್ಗದರ್ಶನ ನೀಡುವಂತೆ ಇವೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ಇವೆ ಎಂದು ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಮೆಲಕು ಹಾಕಿದರು.
ಮಂಡ್ಯ ನಗರದ ಗಾಂಧಿಭವನದಲ್ಲಿ ಸಂಸ್ಕೃತಿ ಸೌರಭ ಟ್ರಸ್ಟ್ ರಾಮನಗರ ಆಯೋಜಿಸಿದ್ದ ‘ಅಂದಿನ ಚಲನಚಿತ್ರ ಸಾಹಿತ್ಯ-ಸಂಗೀತ ವೈಭವ-ಹಾಡು ಹಳೆಯದಾದರೇನು.. ಜನಪ್ರಿಯ ಕನ್ನಡ ಹಳೆಯ ಚಿತ್ರಗೀತೆಗಳ ಗಾಯನ ಹಾಗೂ ಡಾ.ರಾಜ್‌ಕುಮಾರ್ ಅವರ ಮೇರು ಅಭಿಮಾನಿ ಎಂ.ಜೆ.ನಾಗರಾಜುಗೆ “ಅಭಿಮಾನಿ ರತ್ನ” ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿಯಿಂದ ಬೆಳೆದು ಮೇರುನಾಯಕ ನಟರಾದ ಡಾ.ರಾಜ್‌ಕುಮಾರ್ ಅವರು ಎಷ್ಟು ವಿನಯ, ವಿನಮ್ರತೆಯಿಂದ ನಡೆದುಕೊಳ್ಳುತಿದ್ದರು, ಆದರೆ ಈ ಕಾಲದ ಚಲನಚಿತ್ರ ನಾಯಕ ನಟರು ದುರಾಂಹಕಾರಲ್ಲೇ ನಡೆದುಕೊಳ್ಳುತ್ತಿದ್ದಾರೆ, ಇದು ಸರಿಯಾದ ನಡೆಯಲ್ಲ ಎಂದರು.
ರಾಜ್ಯ ಶ್ರೀಗಂಧ, ರಕ್ತಚಂದನ ಬೆಳೆಗಾರರ ಮಂಡಳಿ ನಿರ್ದೇಶಕ ಕನ್ನಡ ಕುಮಾರ್ ಮಾತನಾಡಿ, ಇಂದಿನ ಯುವ ಪೀಳಿಗೆ ಶ್ರೀಗಂಧ, ರಕ್ತಚಂದನ ಮರಗಳನ್ನು ಬೆಳೆಸಿ, ಅಧಿಕ ಆದಾಯ ಬರುವಂತ ಬೆಳೆಗಳನ್ನು ಬೆಳೆಯಿರಿ ಎಂದು ಸಲಹೆ ನೀಡಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ.ಸಿ.ಲಂಕೇಶ್, ಇಂತಹ ಅಪರೂಪದ ಗೀತ ಗಾಯನ ಕಾರ್ಯಕ್ರಮವು ಮುಂದಿನ ಪೀಳಿಕೆಯ ಮಕ್ಕಳಿಗೆ ಉಪಯುಕ್ತ, ಸಂಗೀತ-ಸಾಹಿತ್ಯ ಆಲಿಸುವುದು ಅರೋಗ್ಯಕ್ಕೆ ಉತ್ತಮ ಎಂದರು.
ಕನ್ನಡ ಸಾಹಿತ್ಯ ಬೆಳೆವಣಿಗೆಗೆ ಗಾಯಕರ ಧ್ವನಿಯೂ ಕಾರಣ, ಸಾಹಿತ್ಯ ಬರೆದರೆ ಸಾಲದು, ಅದು ಸಂಗೀತ, ಗಾಯನರೂಪದಲ್ಲಿ ಜನರಿಗೆ ತಲುಪಬೇಕು, ಶಿಶಿನಾಳ ಸರೀಫರ ಸಾಹಿತ್ಯ ಎಷ್ಟೋ ಜನರಿಗೆ ಗೊತ್ತಾಗಿದ್ದೇ ಗಾಯನದ ಮೂಲಕ ಎಂದು ಸ್ಮರಿಸಿದರು.
ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಗಾಯಕರಾದ ಮೈಸೂರು ಕೃಷ್ಣಮೂರ್ತಿ, ರಾಘವೇಂದ್ರ, ಎಸ್.ರಘುನಾಥ್, ಡಾ.ರಾ.ಬಿ. ನಾಗರಾಜ್, ಹೇಮಾ ಇವರು ಹಳೆಯ ಗೀತೆಗಳನ್ನು ಹಾಡಿ ರಂಜಿಸಿದರು. ಅಭಿನಂದನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜೈ ಕರ್ನಾಟಕ ಪರಿಷತ್ ವಿವಿ.ನಗರ ಅಧ್ಯಕ್ಷೆ ಲಲಿತಾ, ಸಂಸ್ಕೃತಿ ಸೌರಭ ಟ್ರಸ್ಟ್ ರಾಮನಗರ ಅಧ್ಯಕ್ಷ ಡಾ.ರಾ.ಬಿ.ನಾಗರಾಜ್, ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಶ್ಯಾಮ್‌ಸುಂದರ್ ಮತ್ತಿತರರಿದ್ದರು.




