Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಕೊನೆಭಾಗದ ಕೆರೆಗಳಿಗೆ ನೀರು ಹರಿಸಲು ಶಾಸಕರ ಸೂಚನೆ

ಕೆ.ಆರ್.ಎಸ್. ಜಲಾಶಯದಿಂದ ನೀರು ಹರಿಯುತ್ತಿದ್ದು, ಮಳವಳ್ಳಿ ತಾಲ್ಲೂಕಿನ ಕೊನೆಯ ಭಾಗಗಳಲ್ಲಿನ ರೈತರ ಕೃಷಿ ಜಮೀನುಗಳಿಗೆ ಸರಿಯಾಗಿ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಇಂದು ಭಾನುವಾರ ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿವಿಧೆಡೆ ಪರಿಶೀಲನೆ ನಡೆಸಿ, ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಕರೆಸಿ, ಹೆಬ್ಬಕವಾಡಿ ಸಮೀಪದ ಸುತ್ತುಕಟ್ಟೆ  ಮುಖ್ಯ ನಾಲೆಯ ಮೂಲಕ ಹೆಬ್ಬಕವಾಡಿ ನಾಲೆಗೆ 450 ಕ್ಯೂಸೆಕ್, ತುರಗನೂರು ನಾಲೆಗೆ 420 ಕ್ಯೂಸೆಕ್ ಹಾಗೂ ಮಾರ್ಕಾಲು ಮತ್ತಿತ್ತರ ಗ್ರಾಮಗಳ ಕೆರೆಗಳಿಗೆ ತಲಾ 150 ಕ್ಯೂಸೆಕ್ ನೀರು ಹರಿಸಲು ಆದೇಶಿಸಿದರು.

ಕೊನೆಯ ಭಾಗಕ್ಕೆ ಹರಿಯಬೇಕಾಗಿದ್ದ ನೀರನ್ನು ಕೆಲವರು ಅಕ್ರಮವಾಗಿ ಉಪಯೋಗಿಸಿಕೊಂಡಿದ್ದು, ಶಾಸಕರ ಗಮನಕ್ಕೆ ಬಂದ ‌ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರನ್ನು ಸ್ಥಳಕ್ಕೆ ಕರೆಸಿ, ಅಕ್ರಮ ನೀರು ಬಳಕೆಯನ್ನು ತಡೆಯಬೇಕು ಹಾಗೂ ನಮ್ಮ ರೈತರಿಗೆ ಸಿಗಬೇಕಾದ ನಿಗದಿತ ನೀರನ್ನು ಇಂದು ಮಧ್ಯರಾತ್ರಿ ಬಿಡಬೇಕೆಂದು ತಾಕೀತು ಮಾಡಿದರು.

ರೈತರ ಹಾಗೂ ಜನ ಜಾನುವಾರುಗಳ ಕರೆಗೆ ಓಗೊಟ್ಟು, ಸ್ಥಳದಲ್ಲೇ ನಿಂತು ನೀರಿನ ಸಮಸ್ಯೆಯನ್ನು ಪರಿಹರಿಸಿದ ಶಾಸಕರ ಕ್ರಮಕ್ಕೆ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ