Friday, November 20, 2026

ಪ್ರಾಯೋಗಿಕ ಆವೃತ್ತಿ

ಜನರ ನಡುವೆ ವ್ಯಕ್ತಿತ್ವ ರೂಪಿಸಿಕೊಳ್ಳುವುದು ದೊಡ್ಡ ಸಾಧನೆ: ಪ್ರೊ.ಜಯಪ್ರಕಾಶಗೌಡ

ಜನಾನೂರಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಇದೆಯಲ್ಲ ಅದು ದೊಡ್ಡ ಗುಣ, ಯುವ ಪಡೆಯನ್ನು ಕಟ್ಟಿಕೊಂಡು ತಾನೂ ಬೆಳೆದು ತನ್ನವರನ್ನೂ ಬೆಳೆಸುವ ಔದಾರ್ಯ ಎಲ್ಲರನ್ನೂ ಸೆಳೆಯುತ್ತದೆ, ಜನರ ನಡುವೆ ವ್ಯಕ್ತಿತ್ವ ರೂಪಿಸಿಕೊಳ್ಳುವುದು ದೊಡ್ಡ ಸಾಧನೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ತಿಳಿಸಿದರು.

ಮಂಡ್ಯ ನಗರದ ಕರ್ನಾಟಕ ಸಂಘದ ಕೆವಿಎಸ್‌ಎಸ್ ಭವನದಲ್ಲಿ ತಗ್ಗಹಳ್ಳಿ ವೆಂಕಟೇಶ್ ಅಭಿಮಾನಿ ಹಾಗೂ ಹಿತೈಷಿಗಳು ಆಯೋಜಿಸಿದ್ದ ಜಿ.ಪಂ. ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಅವರ 56ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮನುಷ್ಯನೊಬ್ಬ ತುಂಬ ಎಚ್ಚರಿಕೆಯಿಂದ ಜನಪರವಾಗಿದ್ದರೆ ಪ್ರೀತಿಸುವ ಮನಸ್ಸುಗಳು ಹೆಚ್ಚಾಗುತ್ತವೆ, ಕರ್ನಾಟಕ ಸಂಘದ ಉಪಾಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ನನ್ನ ಶಿಷ್ಯ, ಆತನಿಗೂ ನನಗೂ 25 ವರ್ಷಗಳ ಅಂತರವಿದೆ, ಗುರುಭಾವನೆಯಿಂದ ಗೌರಿಸಿ ಎಲ್ಲಾ ಕಾರ್ಯಗಳಿಗೂ ನಿಲ್ಲುತ್ತಾನೆ ಎಂದು ಹೇಳಿದರು.

ಇಂದು ಕರ್ನಾಟಕ ಸಂಘಕ್ಕೆ ಮಾಜಿ ಶಾಸಕರಾದ ಎಂ.ಶ್ರೀನಿವಾಸ್ ಮತ್ತು ರಾಮಕೃಷ್ಣ ಅವರು ಬಂದಿದ್ದಾರೆ, ಇಂತಹವರ ಕೊಡುಗೆಯನ್ನು ಎಂದೂ ಮರೆಯಲಾಗದು ಎಂದು ತಿಳಿಸಿದರು.

ತಗ್ಗಹಳ್ಳಿ ವೆಂಕಟೇಶ್ ಮಾತನಾಡಿ, ಸಮಾಜಮುಖಿಯಾಗಿ ಸೇವೆ ಮಾಡುವ ಸದುದ್ದೇಶವೇ ನಮ್ಮ ಧ್ಯೇಯ, ಪ್ರತಿವರ್ಷ ಹೇಳುತೇನೆ, ನಮ್ಮ ಹಿತೈಷಿಗಳು ಕೇಳುವುದೇ ಇಲ್ಲ, ಹುಟ್ಟುಹಬ್ಬ, ಅಭಿನಂದನೆ ಬೇಡ, ಜನಪರವಾಗಿ ನಿಲ್ಲೋಣ ಎಂದೆ, ಆದರೂ ಅಚ್ಚುಕಟ್ಟಾದ ಸುಂದರ ಕಾರ್ಯಕ್ರಮ ಆಯೋಜಸಿ, ಗುರು-ಹಿರಿಯರನ್ನು ಕರೆದು ಆಶೀರ್ವಾದ ಮಾಡಿಸುತ್ತಿದ್ದೀರಿ ಎಂದು ಸ್ಮರಿಸಿದರು.

ಮುಂದಿನ ತಿಂಗಳು 3 ದಿನಗಳ ಕಾಲ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ರೈತ ಜೀವನಾಡಿ ಕಾವೇರಿ ಉತ್ಸವ, ನಾಲ್ವಡಿ ನೆನೆಪು, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮನ್ನು ಆಯೋಜಿಸಿಲು 2-3 ಬಾರಿ ಸಭೆ ನಡೆಸಿದ್ದೇವೆ, ಸಕಲ ಸಿದ್ದತೆಯೊಂದಿಗೆ ವೇದಿಕೆ ನಿರ್ಮಾಣವಾಗಿ, ಅನ್ನದಾತ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಿಕೊಳ್ಳೋಣ ಎಂದರು.

ಇದೇ ಸಂದರ್ಭದಲ್ಲಿ ವೈರಮುಡಿ ಮತ್ತು ಶೇಖರ್ ತಂಡದಿಂದ ಜಾನಪದ, ಭಾವಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ರಾಮಕೃಷ್ಣ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬೇಲೂರು ಸೋಮಶೇಖರ್, ಕಾಂಗ್ರೆಸ್ ಕಾಯಾಧ್ಯಕ್ಷ ಎಂ.ಎಸ್.ಚಿದಂಬರ್, ನಿವೃತ್ತ ಅಭಿಯಂತರ ಶಿವರಾಜ್, ಮುಖಂಡ ರಮೇಶ್‌ಮಿತ್ರ, ನೆಲದನಿ ಬಳಗ ಅಧ್ಯಕ್ಷ ಮಂಗಲ ಲಂಕೇಶ್, ಜಗದೀಶ್, ಚೀರನಹಳ್ಳಿ ಗ್ರಾ.ಪಂ.ಸದಸ್ಯ ಉಮೇಶ್, ಮಂಜೇಶ್, ಕಾರಸವಾಡಿ ಮಹದೇವು, ತಗ್ಗಹಳ್ಳಿ ಮಂಜು, ಯರಹಳ್ಳಿ ನವೀನ್, ಮಂಗಲ ಕುಮಾರ್‌ಗೌಡ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ