Friday, September 27, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಹೆಚ್ಚಿನ ಬಡ್ಡಿ ; ನಿಯಂತ್ರಿಸಲು ಜಿಲ್ಲಾಧಿಕಾರಿಗೆ ಮನವಿ

ಮೈಕ್ರೋ ಪೈನಾನ್ಸ್ ಕಂಪನಿಗಳು ಸಾಲ ಪಡೆದ ಗ್ರಾಹಕರಿಗೆ ಒಂದು ದಿನ ಸಾಲಕಟ್ಟುವುದು ತಡವಾದಲ್ಲಿ ಅದಕ್ಕೆ ಒಂದು ದಿನದ ಬಡ್ಡಿಯಂತೆ ಓಡಿಯನ್ನು ಹೆಚ್ಚಿನ ಪ್ರಮಾಣದ ರೀತಿಯಲ್ಲಿ ಬಡ್ಡಿಯನ್ನು ಹಾಕುತ್ತಿರುತ್ತಾರೆ. ಇದರಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದ್ದು, ಜಿಲ್ಲಾಡಳಿತ ಈ ದಂಧೆಯನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿ ರೈತಸಂಘದ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.

ಮಂಡ್ಯ ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬಿಗೆ 16 ರಿಂದ 18 ತಿಂಗಳು ತುಂಬಿದ್ದರೂ ಸಂಬಂಧಿಸಿದ ಕಾರ್ಖಾನೆಯಯವರು ಕಟಾವು ಮಾಡಿಲ್ಲ, ಕಾರಣ ಕೇಳಿದರೆ ಲೇಬರ್ ಪ್ರಾಬ್ಲಮ್ ಮತ್ತು ಯಂತ್ರೋಪರಕಣಗಳ ರೀಪೇರಿ ಎಂದು ಇಲ್ಲಸಲ್ಲದ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಆದ್ದರಿಂದ ಬೇರೆ ಸಕ್ಕರೆ ಕಾರ್ಖಾನೆಗಳಿಗೆ(ಪ್ಯಾಕ್ಷರಿ) ಕಬ್ಬನ್ನು ಸರಬರಾಜು ಮಾಡುವುದಕ್ಕೆ ಅನುವುಮಾಡಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಿವಳ್ಳಿ ಚಂದ್ರು, ಹಲ್ಲೇಗೆರೆ ಹರೀಶ್, ಶಿವರಾಮು, ಮಂಜೇಶ್, ಸಿದ್ದೇಗೌಡ, ಚಲುವರಾಜು ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!