Thursday, November 19, 2026

ಪ್ರಾಯೋಗಿಕ ಆವೃತ್ತಿ

ಗಾಂಧೀ ಚಿಂತನೆ ಅರ್ಥ ಮಾಡಿಸುವುದು ಇಂದಿನ ತುರ್ತು: ಬಿ.ಸಿ.ಬಸವರಾಜು

ದೇಶದ ಯುವ ಜನರಿಗೆ ಮಹಾತ್ಮ ಗಾಂಧಿಯವರ ಚಿಂತನೆಯನ್ನು ಅರ್ಥ ಮಾಡಿಸುವುದು ಎಂದಿಗಿಂತ ಇಂದಿನ ತುರ್ತು ಆದ್ಯತೆಯಾಗಬೇಕೆಂದು ಈ ದಿನ.ಕಾಂ ವಿಭಾಗ ಮುಖ್ಯಸ್ಥ ಡಾ.ಬಿ.ಸಿ. ಬಸವರಾಜು ತಿಳಿಸಿದರು.

ಮಂಡ್ಯನಗರದ ಗಾಂಧಿಭವನದಲ್ಲಿ ಚಿತ್ರಕೂಟದ ವತಿಯಿಂದ ಭಾನುವಾರ ಸಂಜೆ ನಡೆದ ಹಾಡು, ಹಸೆ, ಕವಿತೆಗಳ ಜತೆ ಮಾತುಕತೆ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ‘ಗಾಂಧಿ ಮತ್ತು ಮಾಧ್ಯಮ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಇಂದಿನ ಜನರಲ್ಲಿ ಗಾಂಧಿ ಚಿಂತನೆಯನ್ನು ಅರ್ಥ ಮಾಡಿಸುವ ಮನಸ್ಥಿತಿ ಕಡಿಮೆಯಾಗಿದೆ. ಒಂದು ವೇಳೆ ನಾವು ಗಾಂಧಿಯನ್ನು ಅರ್ಥ ಮಾಡಿಕೊಳ್ಳಲು ವಿಫಲವಾದರೆ, ಈ ದೇಶವನ್ನು ಅವರ ಆಶಯದ ಭಾರತವನ್ನಾಗಿ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶ ವಿಭಜನೆಯ ಕಾರಣಕ್ಕಾಗಿ ಗಾಂಧಿಯನ್ನು ಕೊಲ್ಲಲಾಯಿತು ಎಂಬುದು ಸುಳ್ಳು. ನಿಜವಾಗಲೂ ಆಗಿನ ಸಂದರ್ಭದಲ್ಲಿ ಗಾಂಧಿಯವರ ವೈಚಾರಿಕ ಸಿದ್ದಾಂತಕ್ಕೆ ವಿರುದ್ದವಾದ ವರ್ಣಾಶ್ರಮ, ಮನುವಾದವನ್ನು ಪ್ರತಿಪಾದಿಸುತ್ತಿದ್ದ ಸಂಘ ಪರಿವಾರದ ಗುಂಪು ಅವರನ್ನು ಹತ್ಯೆ ಮಾಡಿತು. ಏಕೆಂದರೆ ಗಾಂಧಿಜೀಯವರು ಮನುವಾದಿಗಳ ಸಿದ್ದಾಂತಕ್ಕೆ ವಿರುದ್ದವಾಗಿದ್ದರು ಎಂದು ತಿಳಿಸಿದರು.

ಪತ್ರಿಕೋದ್ಯಮವು ಸಮಾಜಸೇವೆಯಾಗಬೇಕೆಂದು ಗಾಂಧೀಜಿಯವರು ಬಯಸಿದ್ದರು. ಆದರೆ ಈ ದೇಶದಲ್ಲಿ ಮಾಧ್ಯಮಗಳ ಸ್ಥಿತಿ ಏನಾಗಿದೆ ಎಂಬುದನ್ನು ಗಮನಿಸಿದರೆ, ಅವರು ಬಂಡವಾಳ ಶಾಹಿಗಳು ಹಾಗೂ ಉದ್ಯಮಿಗಳ ಕೈಯಲ್ಲಿ ಸಿಲುಕಿ, ಪತ್ರಕರ್ತರು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿವೆ, ಇದು ಅಪಾಯಕಾರಿ ಬೆಳವಣಿಗೆ ಎಂದರು.

ಸಹ ಪ್ರಾಧ್ಯಾಪಕರಾದ ಡಾ. ಶಿಲ್ಪಶ್ರೀ ಹರವು ‘ಗಾಂಧೀ ಮತ್ತು ಗ್ರಾಮ’ ವಿಚಾರ ಕುರಿತು ಮಾತನಾಡಿ, ಗಾಂಧೀಜಿಯವರ ಸರ್ವೋದಯವೆಂದರೆ ಒಬ್ಬ ವ್ಯಕ್ತಿಯ ಹಿತ ಎಲ್ಲರ ಹಿತದಲ್ಲಿದೆ ಎಂಬುದಾಗಿತ್ತು. ಅವರ ಸರ್ವೋದಯ ತತ್ವವು ಒಂದು ದೇಶಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಇಡೀ ವಿಶ್ವಕ್ಕೆ ಸಂಬಂಧಿಸಿದ್ದಾಗಿತ್ತು ಎಂದರು.

ಶಿಕ್ಷಣ ತಜ್ಞ ವೋಡೇ ಪಿ.ಕೃಷ್ಣ ಸಮಾರಂಭ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರಂಗಾಯಣ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ, ಲಂಕೇಶ್ ಪತ್ರಿಕೆ ಅಂಕಣಕಾರ ಬಿ. ಚಂದ್ರೇಗೌಡ, ನಾಟಕ ಅಕಾಡೆಮಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಮಹಾಮನೆ ಭಾಗವಹಿದ್ದರು. ಹರವು ದೇವೇಗೌಡರು ಕಾರ್ಯಕ್ರಮದ ನಿರೂಪಣೆ ಮಾಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ