ಮಂಡ್ಯ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಲ್ಲಿ ಅನುದಾನ ರಹಿತ ಶಾಲೆಗಳ ಶಿಕ್ಷಕರು ಇಂದು ಕರಾಳ ಕನ್ನಡ ರಾಜ್ಯೋತ್ಸವವನ್ನು ಕಪ್ಪುಪಟ್ಟಿ ಧರಿಸಿ ಆಚರಿಸಿದರು.
ಇಂದು ಕನ್ನಡ ರಾಜ್ಯೋತ್ಸವ ಎಲ್ಲ ಕಡೆ ಆಚರಿಸಲಾಗುತ್ತಿದೆ ಆದರೆ ಕನ್ನಡ ಶಾಲೆಗಳಿಗೆ ಅನುದಾನ ನೀಡಲು ಕ್ರಮವನ್ನು ತೆಗೆದುಕೊಂಡಿಲ್ಲ. 1995 ರಿಂದ ಇಲ್ಲಿಯವರೆಗೆ ಕನ್ನಡ ಶಾಲೆಗಳಿಗೆ ಗಳಿಗೆ ಅನುದಾನವನ್ನು ನೀಡುತ್ತಿಲ್ಲ, ಇದರಿಂದ ರಾಜ್ಯದಾದ್ಯಂತ ನಡೆಯುತ್ತಿರುವ ಕನ್ನಡ ಶಾಲೆಗಗಳು ಮತ್ತು ಶಿಕ್ಷಕರು ತೊಂದರೆಗೆ ಒಳಗಾಗಿದ್ದಾರೆ ಎಂದು ದೂರಿದರು.
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಕನ್ನಡ ಶಾಲೆಗಳಿಗೆ ಅನುದಾನವನ್ನು ನೀಡಬೇಕು, ಈ ಬಗ್ಗೆ ಹಲವು ಹೋರಾಟವನ್ನು ಮಾಡಲಾಗುತ್ತಿದೆ, ಆದರೂ ಸರ್ಕಾರ ಯಾವುದೇ ಸಂದೇಶ ಇಲ್ಲ, ಮತ್ತೊಂದು ಕಡೆ ಸರ್ಕಾರವೇ ಕನ್ನಡ ಶಾಲೆಗಳಿಗೆ ಬದಲಾಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿದೆ, ಉಳಿದಿರುವ ಕನ್ನಡ ಶಾಲೆಗಳನ್ನು ಮುಚ್ಚಿವೆ ಕನ್ನಡ ಶಾಲೆಗಳು ಉಳಿಯದೆ ಕನ್ನಡ ಭಾಷೆ ಉಳಿಯಲು ಸಾಧ್ಯವಿಲ್ಲ ಎಂದ ಪ್ರತಿಭಟನಾಕಾರರು, ಸರ್ಕಾರ ಕೂಡಲೇ ಗಮನಹರಿಸಿ ಅನುದಾನ ರಹಿತ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕನ್ನಡ ಸೇನೆ ಅಧ್ಯಕ್ಷ ಮಂಜುನಾಥ್, ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ ಕಾಳೇಗೌಡ, ಅನುದಾನ ರಹಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ಪ ಹಾಗೂ ಶಿಕ್ಷಕರಾದ ಸುರೇಶ್, ಕೃಷ್ಣಪ್ಪ, ಶಿವಕುಮಾರ್, ವೀಣಾ, ಭಾರತಿ, ಸುಶೀಲಮ್ಮ, ರತ್ನಮ್ಮ, ರಮ್ಯಾ ಹಾಗೂ ಪ್ರಶಾಂತ್ ಸೇರಿದಂತೆ ಹಲವಾರು ಶಿಕ್ಷಕರು ಹಾಜರಿದ್ದರು.




