Saturday, November 21, 2026

ಪ್ರಾಯೋಗಿಕ ಆವೃತ್ತಿ

ನುಡಿ ಹಬ್ಬ| ಸ್ಮರಣ ಸಂಚಿಕೆಗೆ 110 ವಿಷಯಗಳ ಕುರಿತು ಲೇಖನ ಬರೆಯಲು ಮನವಿ

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗೆ ಸುಮಾರು 110 ವಿಷಯಗಳನ್ನು ನೀಡಿ ಲೇಖನಗಳನ್ನು ಬರೆಯುವಂತೆ ಲೇಖಕರಿಗೆ ಮನವಿ ಸಲ್ಲಿಸಲಾಗಿತ್ತು, ಈಗಾಗಲೇ ಸುಮಾರು 40 ಲೇಖನಗಳು ಬಂದಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜ್ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸ್ಮರಣ ಸಂಚಿಕೆ ಸಭೆ ನಡೆಸಿ ಮಾತನಾಡಿದರು. ಮಂಡ್ಯ ಜಿಲ್ಲೆಯ ಭೌಗೋಳಿಕತೆ, ನೈಸರ್ಗಿಕತೆ, ಪ್ರಾದೇಶಿಕತೆ, ಮಂಡ್ಯ ಜಿಲ್ಲೆಯ ಪುರಾತತ್ವ ನೆಲೆಗಳು, ಮಂಡ್ಯ ಜಿಲ್ಲೆಯ ಜನಸಮುದಾಯಗಳು, ಮಂಡ್ಯದಲ್ಲಿ ರೈತ ಸಂಘಟನೆ ಸ್ವರೂಪ ಹೋರಾಟ ವ್ಯಾಪ್ತಿ ಸೇರಿದಂತೆ 110 ಕ್ಕೂ ಹೆಚ್ಚು ವಿಷಯಗಳನ್ನು ರಚಿಸಲಾಗಿದೆ ಎಂದರು.

ಸ್ಮರಣ ಸಂಚಿಕೆಯನ್ನು 5 ಭಾಗವಾಗಿ ವಿಂಗಡಿಸಿ ಸಂಚಿಕೆಯ ಆಯಾ ಭಾಗದ ಲೇಖನಗಳನ್ನು ಪಡೆದು ಚರ್ಚಿಸಿ ಅಂತಿಮಗೊಳಿಸುವ ಜವಾಬ್ದಾರಿ ಹೊಂದಿರುತ್ತಾರೆ. ಉತ್ತಮವಾಗಿ ಕೆಲಸ ನಿರ್ವಹಿಸಿ ಮೌಲ್ಯಯುತವಾಗಿ ಸ್ಮರಣ ಸಂಚಿಕೆ ಮೂಡಿ ಬರಲಿ ಎಂದರು.

ಛಾಯಚಿತ್ರ ಆಹ್ವಾನ

ಸ್ಮರಣ ಸಂಚಿಕೆಯಲ್ಲಿ ಮಂಡ್ಯ ಜಿಲ್ಲೆಗೆ ಮಹಾತ್ಮ ಗಾಂಧೀಜಿ, ಕುವೆಂಪು ಅವರ ಭೇಟಿ, ಕೆ.ಆರ್.ಎಸ್. ನಿರ್ಮಾಣ, ಶಿವಪುರ ಸತ್ಯಾಗ್ರಹದಲ್ಲಿ ಹೋರಾಟಗಾರರು ಸೇರಿದಂತೆ ಇನ್ನಿತರೆ ಅಪರೂಪದ ಛಾಯಾಚಿತ್ರಗಳನ್ನು ಸ್ಮರಣ ಸಂಚಿಕೆಗೆ ಕಳುಹಿಸಿಕೊಡಬಹುದು. ಸಮಿತಿಯು ಪರಿಶೀಲಿಸಿ ಛಾಯಾಚಿತ್ರಗಳನ್ನು ಆಯ್ಕೆ ಮಾಡಲಿದೆ. ಆಸಕ್ತರು ಜಿಲ್ಲಾ ಗ್ರಂಥಾಲಯದ ಸ್ಮರಣ ಸಂಚಿಕೆ ಕಚೇರಿಗೆ ಸಲ್ಲಿಸುವುದು ಎಂದರು.

ಶೀರ್ಷಿಕೆ ಆಹ್ವಾನ

ಸ್ಮರಣ ಸಂಚಿಕೆಗೆ ಸೂಕ್ತ ಶೀರ್ಷಿಕೆ ನೀಡಲು ಶೀರ್ಷಿಕೆಯನ್ನು ಆಹ್ವಾನಿಸಲಾಗಿದೆ. ಮುಚ್ಚಿದ ಲಕೋಟೆಯಲ್ಲಿ ಆಸಕ್ತರು ಶೀರ್ಷಿಕೆಯನ್ನು ನವೆಂಬರ್ 20 ರೊಳಗಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಡ್ಯ ಇಲ್ಲಿಗೆ ಸಲ್ಲಿಸುವುದು. ಆಯ್ಕೆಯಾದ ಶೀರ್ಷಿಕೆ ಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದರು‌.

ನೆನಪಿನ ಸಂಪುಟಕ್ಕೆ ಗಣ್ಯರು ಹಾಗೂ ಜನಪ್ರತಿನಿಧಿಗಳಿಂದ ಸಂದೇಶ ಪಡೆಯಲು ಪತ್ರ ಮೂಲಕ ಮನವಿ ಮಾಡುವ ಬಗ್ಗೆ, ಸಂಪುಟದ ಮುಖಪುಟ ವಿನ್ಯಾಸ ಮಾಡುವ ಬಗ್ಗೆ ಸಮಿತಿಯ ಸದಸ್ಯರಿಂದ ಅಭಿಪ್ರಾಯ ಪಡೆಯಲಾಯಿತು

ಮಧುರ ಮಂಡ್ಯ ಉಪಸಮಿತಿಗೆ- ದ‌ಕೋ ಹಳ್ಳಿ ಚಂದ್ರಶೇಖರ್, ಮಂಡ್ಯ- ಕರ್ನಾಟಕ ಭಾರತ ಉಪಸಮಿತಿಗೆ- ಡಾ.ಎಂ.ಬಿ ಸುರೇಶ್, ವಿಶ್ವ ಕರ್ನಾಟಕ ಉಪಸಮಿತಿ- ಪ್ರೊ ಹುಲ್ಕೆರೆ ಮಹದೇವು, ಅಭಿವೃದ್ಧಿ ಭಾರತ ಉಪಸಮಿತಿಗೆ- ಕೆ.ಪಿಮೃತ್ಯುಂಜಯ, ಚಿತ್ರಸಂಚಿಕೆ ಮಂಡ್ಯ ದರ್ಶನ ಉಪಸಮಿತಿಗೆ- ಡಾ.ಎಸ್.ಬಿ ಶಂಕರೇಗೌಡರನ್ನು ಉಪಸಮಿತಿಗಳಿಗೆ ಸಂಚಾಲಕರಾಗಿ ನೇಮಕ ಮಾಡಲು ಸಮಿತಿ ತೀರ್ಮಾನಿಸಿತು.

ಸಭೆಯಲ್ಲಿ ಸಭೆಯಲ್ಲಿ ಹಿರಿಯ ಸಾಹಿತಿ ತೈಲೂರು ವೆಂಕಟ ಕೃಷ್ಣ, ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾದ ಮೀರಾ ಶಿವಲಿಂಗಯ್ಯ, ಗ್ರಂಥಾಲಯ ಅಧಿಕಾರಿ ಕೃಷ್ಣಮೂರ್ತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಹೆಚ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಪತ್ರಕರ್ತ ದ.ಕೋ.ಹಳ್ಳಿ ಚಂದ್ರಶೇಖರ್, ಪುಸ್ತಕ ಸಮಿತಿ ಅಧ್ಯಕ್ಷ ಡಾ: ಮುದ್ದೇಗೌಡ, ಸ್ಮರಣ ಸಂಚಿಕೆ ಸಮಿತಿ ಸಂಚಾಲಕ ಡಾ. ಮ ರಾಮಕೃಷ್ಣ. ಸಮಿತಿ ಸದಸ್ಯರಾದ ಎಂ.ವಿ.ಧರಣೇಂದ್ರಯ್ಯ, ಹುಲ್ಲುಕೆರೆ ಮಹದೇವ, ಕೆ.ಪಿ‌.ಮೃತ್ಯುಂಜಯ, ಕನ್ನಡ ಸಾಹಿತ್ಯ ಸಮ್ಮೇಳನ ವಿಶೇಷಧಿಕಾರಿ ಡಾ.ಚಂದ್ರಶೇಖರ್ ಜಿ.ಆರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ