Monday, November 23, 2026

ಪ್ರಾಯೋಗಿಕ ಆವೃತ್ತಿ

ಹಿಂದಿ ಹೇರಿಕೆ v/s ಕನ್ನಡ ಅಸ್ಮಿತೆ ; ಮಂಡ್ಯದ ಹೊಂಬಾಳೆ ಮತ್ತು ತಮಿಳು ಸಿನಿಮಾ

ಎಂ.ಬಿ. ನಾಗಣ್ಣಗೌಡ, ಚಿತ್ರಕೂಟ

ನುಡಿ ಅಸಮಾನತೆಯ ವಿಷಯವನ್ನು ಸಿನಿಮಾದಂತ ಜನಪ್ರಿಯ ಮಾದರಿಯಲ್ಲಿ ನಿರೂಪಿಸುವುದು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಗುವುದು ದುಸ್ತರವೆ ಸರಿ. ಅದಕ್ಕೆ ಕನ್ನಡ ಚಿತ್ರರಂಗ ವಾಸ್ತವದಿಂದ ದೂರ.

ಆದರೆ ತಮಿಳು ಚಿತ್ರರಂಗದಲ್ಲಿ ಹಿಂದಿ ಹೇರಿಕೆಯ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ಅದರ ಸುತ್ತ ಉಳಿದೆಲ್ಲ ಸಿನಿ ಅಂಶಗಳೊಂದಿಗೆ ರಘು ತಾತಾ ಸಿನಿಮಾ ನಿರ್ಮಿಸಿದ್ದಾರೆ.

ವಿಜಯ್ ಕಿರಗಂದೂರು

ಕೀರ್ತಿ ಸುರೇಶ್ ಪ್ರಧಾನ ಭೂಮಿಕೆಯ ಈ ಚಿತ್ರದಲ್ಲಿ ನಟಿಯದೆ ಪ್ರಧಾನ ಪಾತ್ರ. ನಟೀ ತನ್ನ ತಾತನ ಬೆಂಬಲದೊಂದಿಗೆ ವೂರಿನಲ್ಲಿ ಹಿಂದಿ ಸಭಾ ಸ್ಥಾಪನೆಯಾಗದಂತೆ ತಡೆಯುತ್ತಾಳೆ. ಕಡೆಗೆ ಅನಿವಾರ್ಯವಾಗಿ ತನಗೆ ವಲ್ಲದ ಮದುವೆ ತಪ್ಪಿಸಿಕೊಳ್ಳಲು ಹಿಂದಿ ಪಂಡಿತ ಪರೀಕ್ಷೆ ಕಟ್ಟುತ್ತಾಳೆ. ಇದನ್ನೆ ನೆಪವಾಗಿ ಆಕೆಯ ಚಾರಿತ್ರ್ಯ ಕೆಡಿಸುವ ಕೆಲಸವೂ ನಡೀಯುತ್ತದೆ. ಕತೆ ಒಂದೆಡೆ ಇರಲಿ. ಬಹಳ ಸರಾಗವಾಗಿ ಸಾಗುವ ಚಿತ್ರಕಥೆ ನೋಡಿಸಿಕೊಂಡು ಹೋಗುತ್ತದೆ. ಇದು ಜೀ ೫ ನಲ್ಲಿದೆ.

೮೦ರ ದಶಕದಲ್ಲಿ ತಮಿಳಿನ ಭಾಗ್ಯರಾಜ್ ಇಂಡ್ರುಂ ಪೋ ನಾಳೈ ವಾ ಸಿನಿಮಾದಲ್ಲಿ ಹಿಂದಿ ಮೇಷ್ಟುವೊಬ್ಬರ ಮಗಳನ್ನು ಪ್ರೇಮಿಸಲು ನಾಲ್ವರು ಯುವಕರು ಪ್ರಯತ್ನ ಶುರು ಮಾಡುತ್ತಾರೆ. ಗಡಿಬಿಡಿ ಗಂಡ ಸಿನಿಮಾದಲ್ಲಿ ರವಿಚಂದ್ರನ್ ರೋಜಾ ಮನೆಯಲ್ಲಿ ಸಂಗೀತ ಕಲಿಯಲು ಹೋದಂತೆ!

ಭಾಗ್ಯರಾಜ್ ಸಿನಿಮಾದಲ್ಲೂ ಸಹ ಒಬ್ಬಾತ ಹಿಂದಿ ಕಲಿಯಲು ತೀವ್ರ ಪ್ರಯತ್ನ ನಡೆಸುತ್ತಾನೆ. ಏಕೀ ಗಾಂವ್ ಮೇ ಏಕೀ ಜವಾನ್ ರೆಹತಾತಾ ಅನ್ನೋ ವಾಕ್ಯದ ಪೈಕಿ ರೆಹತಾತ ಎಂಬುದನ್ನು ರಘುತಾತ ಎಂದೇ ಉಚ್ಚರಿಸುತ್ತಾನೆ. ದಕ್ಷಿಣದವರಿಗೆ ಹಿಂದಿ ಹೇರುವುದು ಥರವಲ್ಲ ಅಂತಾ ವ್ಯಂಗ್ಯವಾಗಿ ಹೇಳುವುದಕ್ಕೆ ಈ ಸಿನಿಮಾಕ್ಕು ರಘುತಾತ ಎಂದೆ ಹೆಸರಿಸಲಾಗಿದೆ.

ಈ ಸಿನಿಮಾವನ್ನು ನಮ್ಮ ಮಂಡ್ಯದ ವಿಜಯ್ ಕಿರಗಂದೂರು ತಮ್ಮ ಹೊಂಬಾಳೆ ಫಿಲಂಸ್ ಅಡಿ ನಿರ್ಮಿಸಿದ್ದಾರೆ ಅನ್ನುವುದೊಂದು ಹೆಮ್ಮೆ. ಇನ್ನು ಬೆಂಗಳೂರು ಮೂಲದ ಚಿತ್ರ ನಿರ್ದೇಶಕ ಸುಮನ್ ಹುಟ್ಟಿದ್ದು ತಮಿಳುನಾಡಾದರೂ ಬೆಳೆದದ್ದೆಲ್ಲಾ ಆಂಧ್ರ ಪ್ರದೇಶದಲ್ಲಿ ಸದ್ಯ ದಕ್ಷಿಣ ಭಾರತದ ಭರವಸೆಯ ಡೈರೆಕ್ಟರ್. ರಘು ತಾತಾ ಈತನ ಮಹತ್ವದ ಚಿತ್ರಗಳಲ್ಲೊಂದು.

ಒಳ್ಳೆಯ ಸಿನಿಮಾ ತಪ್ಪದೆ ನೋಡಿ..

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ