Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ |ಮನ್ಮುಲ್‌ ಸದಸ್ಯರಾಗಿ ವಿಶ್ವಾಸ್ ನಾಮನಿರ್ದೇಶನ

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಅಧಿಕಾರೇತರ ಸದಸ್ಯರನ್ನಾಗಿ ತಾಲೂಕಿನ ರಾಗಿ ಬೊಮ್ಮನಹಳ್ಳಿ ಆರ್.ಎನ್ ವಿಶ್ವಾಸ್ ಅವರನ್ನು ನಾಮ ನಿರ್ದೇಶನ ಮಾಡಿ ಸಹಕಾರ ಇಲಾಖೆಯ ಕಾರ್ಯದರ್ಶಿ ಜಿ.ರಂಗನಾಥ ಆದೇಶ ಹೊರಡಿಸಿದ್ದಾರೆ.

ಮದ್ದೂರು ತಾಲೂಕಿನ ಕದಲೂರು ರಾಮಕೃಷ್ಣರ ನಾಮನಿರ್ದೇಶನ ರದ್ದುಪಡಿಸಿ ಅವರ ಜಾಗಕ್ಕೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮತ್ತು ಲಿಂಗಾಯಿತ ಸಮುದಾಯ ಪ್ರಭಾವಿ ಮುಖಂಡ ಆರ್ ಎನ್ ವಿಶ್ವಾಸ್ ಅವರನ್ನು ನೇಮಿಸಲಾಗಿದೆ.

ಈ ಸಂದರ್ಭದಲ್ಲಿ ವಿಶ್ವಾಸ್ ಮಾತನಾಡಿ, ಪಿ ಎಂ.ನರೇಂದ್ರಸ್ವಾಮಿ ಮಾರ್ಗದರ್ಶನದಲ್ಲಿ ರೈತರ ಹಿತ ಕಾಯುವ ಕೆಲಸದ ಜೊತೆಯಲ್ಲಿ ಸರ್ಕಾರದಿಂದ ಬರುವ ಸಾರ್ವಜನಿಕ ಸವಲತ್ತುಗಳನ್ನು ಹಾಲು ಉತ್ಪಾದಕರಿಗೆ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ