Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಾಮಗಾರಿಗೆ ಗುದ್ದಲಿಪೂಜೆ ; ನಿರ್ಮಲಾನಂದನಾಥಶ್ರೀಗೆ ಶಾಸಕರ ಆಹ್ವಾನ

ಮಂಡ್ಯ ತಾಲ್ಲೂಕಿನ ಕೊಮ್ಮೆರಹಳ್ಳಿ – ಉಮ್ಮಡಹಳ್ಳಿ – ಆದಿಚುಂಚನಗಿರಿ ಶಾಖಾ ಮಠ – ಕಂಬದ ನರಸಿಂಹಸ್ವಾಮಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 6ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ಕಾಮಗಾರಿಯ ಗುದ್ದಲಿ ಪೂಜೆಗೆ ಆಗಮಿಸುವಂತೆ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಇಂದು ಆಹ್ವಾನ ನೀಡಿದರು.

ಶಾಸಕರ ಆಹ್ವಾನಕ್ಕೆ ಒಪ್ಪಿಗೆ ಸೂಚಿಸಿದ ಶ್ರೀಗಳು ಡಿ.2ರಂದು ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದರು. ಅಲ್ಲದೇ ರಸ್ತೆ ಅಭಿವೃದ್ಧಿ ವಿಚಾರ ತಿಳಿದು ಸಂತಸಗೊಂಡು ಶಾಸಕರ ಕಾರ್ಯವೈಖರಿ ಯನ್ಮೆನು ಮೆಚ್ಚಿ ಅಭಿನಂದಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ