ಎಲ್ ಟಿ ವಿದ್ಯುತ್ ಕೇಬಲ್ ನ್ನು ಬದಲಾಯಿಸಿ ಎಲ್ ಟಿ, ಎಬಿ ವಿದ್ಯುತ್ ಕೇಬಲ್ ಅಳವಡಿಸುವ ಸುಮಾರು 5 ಕೋಟಿ ರೂ ವೆಚ್ಚದ ಕಾಮಗಾರಿಗೆ ಶಾಸಕ ಪಿಎಂ ನರೇಂದ್ರಸ್ವಾಮಿ ಚಾಲನೆ ನೀಡಿದರು.
ಮಳವಳ್ಳಿ ಪಟ್ಟಣದ ಸಿದ್ದಾರ್ಥ ನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯುತ್ ಉಳಿತಾಯದ ಜೊತೆಗೆ ಅವಘಡಗಳನ್ನು ತಡೆಯಲು ಪಟ್ಟಣದ್ಯಾಂತ ಎಲ್ ಟಿ, ಎ ಬಿ ವಿದ್ಯುತ್ ಕೇಬಲ್ ಅಳವಡಿಸಲಾಗುತಿದೆ ಜೊತೆಗೆ ವಿದ್ಯುತ್ ಅಡಚಣೆ ಸೋರಿಕೆ ಮತ್ತು ಅಪಘಾತ ನಿಯಂತ್ರಿಸದೆ ಇದರಿಂದ ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಚೆಸ್ಕಾಂ ಎ ಇ ಇ ಪ್ರೇಮ್ ಕುಮಾರ್ ಮಾತನಾಡಿ, ಕೇಬಲ್ ಅಳವಡಿಸುವಿಕೆ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರು 5 ಕೋಟಿ ರೂ ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಅವಶ್ಯಕತೆ ಇರುವ ಹಣವನ್ನು ಬಿಡುಗಡೆ ಮಾಡಿವ ಮೂಲಕ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪಟ್ಟಣದ ಎಲ್ಲಾ ವಾರ್ಡ್ ಗಳಿಗೂ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಚಿಕ್ಕಲಿಂಗಯ್ಯ, ಮನ್ಮುಲ್ ನಿರ್ದೇಶಕ ವಿಶ್ವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿಪಿ ರಾಜು, ದೊಡ್ಡಯ್ಯ, ಪುರಸಭೆ ಸದಸ್ಯರಾದ ಶಿವಸ್ವಾಮಿ ಸಂತೋಷ್, ಆನಂದ್ ಮುಖಂಡರಾದ ದೇವರಾಜು, ಅಂಬರೀಶ್, ಕಿರಣ್, ಶಂಕರ್, ರವಿ, ಚೇತನ್ ನಾಯಕ್ ಸೇರಿದಂತೆ ಇತರರು ಇದ್ದರು.




