-ಶಿವಸುಂದರ್
” ಇಂದು ನಾವು ವೈರುಧ್ಯಗಳ ಯುಗವನ್ನು ಪ್ರವೇಶಿಸುತ್ತಿದ್ದೇವೆ “...
“..ಇಂದಿನಿಂದ ನಾವೆಲ್ಲರೂ ರಾಜಕೀಯವಾಗಿ ಸಮಾನರಾಗಿದ್ದರೂ, ಸಾಮಾಜಿಕ ಅಸಮಾನತೆ (ಜಾತಿ ವ್ಯವಸ್ಥೆ), ಆರ್ಥಿಕ ಅಸಮಾನತೆ (ಬಂಡವಾಳ ಶಾಹಿ) ಯ ಸಂಸ್ಥೆಗಳ ಕಾರಣದಿಂದ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಅಸಮಾನರಾಗಿಯೇ ಮುಂದುವರೆಯುತ್ತಿರುತ್ತೇವೆ ” ..
“… ಆದಷ್ಟು ಬೇಗ ಈ ಅಸಮಾನತೆಗಳನ್ನು ನಿವಾರಿಸಿಕೊಳ್ಳದಿದ್ದಲ್ಲಿ, ಯಾರ ಹೆಸರಿನಲ್ಲಿ ಈ ಪ್ರಜಾಪ್ರಭುತ್ವ ದ ಸೌಧವನ್ನು ಕಟ್ಟಿದ್ದೇವೆಯೋ, ಅವರೇ ಈ ಸೌಧವನ್ನು ಸ್ಪೋಟಿಸುತ್ತಾರೆ..”
- ಡಾ.ಬಿ.ಆರ್. ಅಂಬೇಡ್ಕರ್,
ನವಂಬರ್ 26, 1949….
ಇಂದು…
ಬಂಡವಾಳ ಶಾಹಿ ಮತ್ತು ಬ್ರಾಹ್ಮಣಶಾಹಿಗಳು ನವ ಉದಾರವಾದಿ ಹಿಂದೂತ್ವವಾಗಿ ಬೆಳೆದಿವೆ..
ಪ್ರಜಾತಂತ್ರವನ್ನೂ ಒಳಗಿಂದಲೇ ಕೊಂದು, ಹೊರಗೆ ಅದಕ್ಕೆ ಭವ್ಯ ಸ್ಮಾರಕ ಕಟ್ಟಿವೆ…
ರಾಜಕೀಯ ಪ್ರಜಾತಂತ್ರವನ್ನು ಕೂಡ ಬಲಿ ತೆಗೆದುಕೊಳ್ಳುತ್ತಿವೆ ….
ಹೀಗಾಗಿ..
ಈ ದಿನ
ಅಂಬೇಡ್ಕರ್ ಕೊಟ್ಟ ಎಚ್ಚರಿಕೆಯನ್ನು ಅರಗಿಸಿಕೊಂಡು….
… ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಪ್ರಜತಂತ್ರವನ್ನು ಗಳಿಸಿಕೊಳ್ಳುವುದು ಹೇಗೆ ಎಂದು….
.. ಚಿಂತಿಸುವ, ಬದಲಾವಣೆ ಗಾಗಿ ಬೀದಿಗಿಳಿಯುವ ದಿನವೂ ಆಗಬೇಕು …
ಅಲ್ಲವೇ…




