ಅತಿ ಹೆಚ್ಚು ಕನ್ನಡ ಮಾತನಾಡುವವರ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಡ್ಯ ಜಿಲ್ಲೆಯ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಕರ್ನಾಟಕದ ಇನ್ನಿತರೆ ವಿಶ್ವವಿದ್ಯಾಲಯಕ್ಕಿಂತ ಹೆಚ್ಚು ಸಮಯ ಕನ್ನಡ ವಿಷಯವನ್ನ ಬೋಧಿಸುವ ಮೂಲಕ ಕನ್ನಡತನವನ್ನ ಮತ್ತಷ್ಟು ಗಟ್ಟಿಗೊಳಿಸಬೇಕು ಮತ್ತು ಕನ್ನಡತನದ ವಿಚಾರದಲ್ಲಿ ಮಂಡ್ಯ ಜಿಲ್ಲೆಯ ಹಿರಿಮೆಯನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸಿ ನಾವು ದ್ರಾವಿಡ ಕನ್ನಡಿಗರು ಚಳವಳಿಯ ಅಭಿಗೌಡ ಹನಕೆರೆ ನೇತೃತ್ವದಲ್ಲಿ ಮನವಿ ಮಾಡಲಾಯಿತು.
ಮಂಡ್ಯ ವಿ.ವಿ ಕುಲಪತಿ ಶಿವಚಿತ್ತಪ್ಪ ಅವರು ಮನವಿ ಸಲ್ಲಿಸಿದ ಅವರು, ತುಮಕೂರು, ಬೆಂಗಳೂರು, ಮಂಗಳೂರು, ರಾಣಿ ಚೆನ್ನಮ್ಮ ಮತ್ತಿತರ ವಿಶ್ವವಿದ್ಯಾಲಯಗಳಲ್ಲಿ 6 ಗಂಟೆಗಳ ಕಾಲ ಬೋಧಿಸುತ್ತಿದ್ದು ಮಂಡ್ಯ ವಿಶ್ವವಿದ್ಯಾಲಯದಲ್ಲಿ ಕೇವಲ 5 ಗಂಟೆ ಬೋಧಿಸುತ್ತಿರುವುದು ನಮಗೆ ಮಂಗಳೂರಿನ ಒಂದು ಕಾರ್ಯಕ್ರಮದಲ್ಲಿ ತಿಳಿಯಿತು. ತಕ್ಷಣವೇ ಕುಸಿದು ಪಾತಾಳಕ್ಕೆ ಬಿದ್ದಂತ ಅನುಭವ ಆಗಿದೆ, ಆದ್ದರಿಂದ ಕನ್ನಡ ಬೋಧನಾ ಅವಧಿಯನ್ನು 5 ಗಂಟೆಗಳಿಂದ 7ಗಂಟೆಗೆ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದ್ದಾರೆ.




