ಮಂಡ್ಯ ವಿಶ್ವವಿದ್ಯಾಲಯದ ಪದವಿ ತರಗತಿಗಳಲ್ಲಿ ಕೇವಲ 5 ಗಂಟೆ ಕನ್ನಡ ವಿಷಯ ಬೋಧಿಸುತ್ತಿದ್ದು, ಇದರ ಅವಧಿಯನ್ನು ಹೆಚ್ಚಳ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡರ ಬಣ) ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ ಒತ್ತಾಯಿಸಿದ್ದಾರೆ.
ರಾಜ್ಯದ ಬೇರೆ ವಿಶ್ವವಿದ್ಯಾಲಯಗಳಾದ ತುಮಕೂರು, ಮಂಗಳೂರು, ಬೆಂಗಳೂರು ವಿಶ್ವವಿದ್ಯಾಲಯಗಳು 6 ಗಂಟೆ ಕನ್ನಡ ವಿಷಯ ಬೋಧಿಸುತ್ತಿವೆ. ಆದರೆ ಮಂಡ್ಯದಲ್ಲಿ ಬೋಧನಾ ಅವಧಿಯನ್ನು 5 ಗಂಟೆಗೆ ಸೀಮಿತಗೊಳಿಸಿರುವುದು ಸರಿಯಲ್ಲ ಎಂದರು.
ಮಂಡ್ಯ ವಿವಿಯಲ್ಲಿ ಬೋಧನಾ ಸಮಯವನ್ನು 5 ಗಂಟೆಯಿಂದ 7 ಗಂಟೆ ಗೆ ಹೆಚ್ಚಿಸಬೇಕೆಂದು ಆಗ್ರಹಿಸಿ ಕುಲಪತಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ, ಗೌರವಾಧ್ಯಕ್ಷ ಶಿವರಾಮೇಗೌಡ ಮತ್ತು ಯುವ ನಾಯಕರಾದ ಮಂಚಶೆಟ್ಟಿ, ಮನು, ಮಹೇಂದ್ರ ಉಪಸ್ಥಿತರಿದ್ದರು.




