Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಭತ್ತದ ಕುಯ್ಲುಗೆ ಮಾರಕವಾದ ಫೆಂಗಲ್ ಚಂಡಮಾರುತ

ಫೆಂಗಲ್‌ ಚಂಡಮಾರುತದಿಂದಾಗಿ ಮಂಡ್ಯ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು, ಇದು ಖುಷ್ಕಿ ಪ್ರದೇಶದ ಬೆಳೆಗಳಿಗೆ ಪೂರಕವಾಗಿದ್ದರೆ, ನೀರಾವರಿ ಪ್ರದೇಶದ ಭತ್ತದ ಬೆಳೆಗಳಿಗೆ ಮಾರಕವಾಗಿ ಪರಿಣಮಿಸಿದೆ.

ಮಂಡ್ಯ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ನಾಟಿ ಮಾಡಿದ ರೈತರ ಭತ್ತದ ಫಸಲುಗಳು ಕಟಾವಿಗೆ ಬಂದಿದ್ದು, ಬೆಲೆ ಕೈಸೇರುವ ಹಂತದಲ್ಲಿ, ‘ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ’ ಚಂಡ ಮಾರುತ ಮಳೆಯನ್ನು ಹೊತ್ತು ತಂದ ಪರಿಣಾಮ ಕುಯ್ಲು ಆಗಿರುವ ಭತ್ತವು ಜಲಾವೃತಗೊಂಡಿದ್ದು, ರೈತರು ಫಸಲು ನಷ್ಟ ಅನುಭವಿಸುವಂತಾಗಿದ್ದು, ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ನಿರಂತರ ಮಳೆಯಿಂದಾಗಿ ತರಕಾರಿ ಬೆಳೆಗಳೂ ನಾಶವಾಗುತ್ತಿವೆ. ಟಮೋಟೋ, ಹೂಕೋಸು, ಬೆಂಡೆ, ಹಿರೇಕಾಯಿ  ಹಾಗಲಕಾಯಿ, ಸೊರೇಕಾಯಿ, ಬದನೆಕಾಯಿ ಮತ್ತು ಹುರಳಿಕಾಯಿಗೆ ರೋಗ ತಗುಲುವ ಆತಂಕ ಎದುರಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಔಷಧ ಸಿಂಪಡಣೆಗೂ ಅಡ್ಡಿಯಾಗುತ್ತಿದೆ.

ಹೂವಿನ ತೋಟಗಳೂ ಸಂಪೂರ್ಣವಾಗಿ ಮಳೆಯಿಂದ ತೋಯುತ್ತಿವೆ. ಸೇವಂತಿ, ಚೆಂಡು ಮೊದಲಾದ ಹೂ ಬೆಳೆಗಳು ನಾಶವಾಗುತ್ತಿವೆ. ಹೂಗಳೂ ಉದುರುತ್ತಿದ್ದು, ನಷ್ಟ ಉಂಟಾಗುವ ಪರಿಸ್ಥಿತಿ ಎದುರಗಿದೆ.

ಭಾರತೀಯ ಹವಾಮಾನ ಇಲಾಖೆ ಇನ್ನೂ ಎರಡು ಮೂರು ದಿನ ಮಳೆ ಮುಂದುವರೆಯುವ ಮುನ್ಸೂಚನೆ ನೀಡಿದ್ದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಮಳೆ ಹಿನ್ನೆಲೆಯಲ್ಲಿ ಡಿ.3ರಂದು ಮಂಡ್ಯ ಜಿಲ್ಲೆಯ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ