ಜಯ ಕರ್ನಾಟಕ ಸಂಘಟನೆಯ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಮಾಡಿ ಪ್ರಮಾಣ ಪತ್ರವನ್ನು ಜಿಲ್ಲಾಧ್ಯಕ್ಷ ಯೋಗಣ್ಣ ವಿತರಿಸಿದರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಉಪಾಧ್ಯಕ್ಷರಾಗಿ ರಮೇಶ್, ತಾಲೂಕು ಅಧ್ಯಕ್ಷರಾಗಿ ಹರ್ಷಿತ್, ಉಪಾಧ್ಯಕ್ಷರಾಗಿ ಅಭಿಷೇಕ್,ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಅವರನ್ನು ಆಯ್ಕೆ ಮಾಡಿ ಪ್ರಮಾಣ ಪತ್ರವನ್ನು ವಿತರಿಸಿದರು.
ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಯೋಗಣ್ಣ ಮಾತನಾಡಿ, ಕನ್ನಡದ ನಾಡು ನುಡಿಗೆ ಉಳಿಸಲು ಸದಾ ಸಕ್ರಿಯವಾಗಿ ಜಯ ಕರ್ನಾಟಕ ಸಂಘವು ಇದ್ದು ಸ್ವಲ್ಪ ದಿನ ಕಾಣಾಂತರದಿಂದ ಸಂಘಟನೆ ಸಕ್ರಿಯವಾಗಿ ಇರಲಿಲ್ಲ. ಈಗ ಜಯ ಕರ್ನಾಟಕ ಸಂಘಟನೆ ನಮ್ಮ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಸಂಘಟನೆಯು ಸಕ್ರಿಯವಾಗಿ ಕನ್ನಡದ ನಾಡು ನುಡಿಗಾಗಿ ಸಂಘಟನೆ ಪಾಲ್ಗೊಳ್ಳುತ್ತದೆ ಎಂದರು.
ನೂತನ ಜಿಲ್ಲಾ ಉಪಾಧ್ಯಕ್ಷ ರಮೇಶ್ ಮಾತನಾಡಿ, ಕನ್ನಡದ ನಾಡು ನುಡಿ ವಿಷಯ ಬಂದಾಗ ಜಯ ಕರ್ನಾಟಕ ಸಂಘಟನೆ ಮುಂಚೂಣಿಯಲ್ಲಿ ಇರುತ್ತದೆ. ಅಲ್ಲದೆ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ಯುವಕರು ಸಂಘಟನೆಗೆ ಸೇರುವ ಮೂಲಕ ಶಕ್ತಿ ತುಂಬಬೇಕಾಗಿದೆ ಎಂದರು.
ನೂತನ ಆಯ್ಕೆಯಾದ ತಾಲೂಕು ಅಧ್ಯಕ್ಷ ಹರ್ಷಿತ್ ಮಾತನಾಡಿ, ಜಿಲ್ಲಾಧ್ಯಕ್ಷರ ಸಲಹೆ ಮೇರೆಗೆ ತಾಲೂಕಿನಲ್ಲಿ ಜೈ ಕರ್ನಾಟಕ ಸಂಘಟನೆಯನ್ನು ಸಕ್ರಿಯವಾಗಿ ಮಾಡಿ ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಿ ಮಾಡುತ್ತೇನೆಂದು ತಿಳಿಸಿದರು.
ಇದೇ ವೇಳೆಯಲ್ಲಿ ಸುಭಾಷ್ ಚಂದ್ರ ಬೋಸ್ ಜಯಂತಿ ದಿನದಂದು ಹೆಚ್ಚಿನ ಜನಸಂಖ್ಯೆಯಲ್ಲಿ ಬಂದು ರಕ್ತದಾನ ಶಿಬಿರಕ್ಕೆ ಪಾಲ್ಗೊಳ್ಳಬೇಕೆಂದು ಜಿಲ್ಲಾಧ್ಯಕ್ಷ ಯೋಗಣ್ಣ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳು ಮತ್ತು ತಾಲೂಕು ಪದಾಧಿಕಾರಿಗಳು ಹಾಜರಿದ್ದರು




