Saturday, November 21, 2026

ಪ್ರಾಯೋಗಿಕ ಆವೃತ್ತಿ

ಹತ್ತು ವರ್ಷಗಳ ರಂಗಭೂಮಿಯ ಬದುಕು ನನ್ನನ್ನು ಹೀರೋ ಆಗಿ ರೂಪಿಸಿತು | ರಾಕೇಶ್ ದಳವಾಯಿ


ಮತ್ತೊಂದು ‘ಕಾಟೇರ’ವಾಗುತ್ತಾ ಧೀರ ಭಗತ್‌ ರಾಯ್ 

ಕನ್ನಡ ಚಿತ್ರರಂಗದ ಹೊಸ ಭರವಸೆ ಹುಟ್ಟಿಸಿದ ನಾಯಕ ನಟ ರಾಕೇಶ್ ದಳವಾಯಿ

ಮಲೆಗಳಲ್ಲಿ ಮಧುಮಗಳ ‘ನಾಯಿಗುತ್ತಿ’, ಈಗ ‘ಧೀರ ಭಗತ್ ರಾಯ್’ 


ರೈತ ಹೋರಾಟದ ಕಥಾ ಹಂದರವುಳ್ಳ ಧೀರ ಭಗತ್ ರಾಯ್ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಹುಟ್ಟು ಹಾಕಿದೆ. ಈ ಚಿತ್ರವು ಮತ್ತೊಂದು ಕಾಟೇರ ವಾಗುತ್ತಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಧೀರ ಭಗತ್ ರಾಯ್ ಚಿತ್ರವು ನಾಳೆ ಅಂದರೆ ಡಿ.6ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದ್ದು, ಈ ಸಂದರ್ಭದಲ್ಲಿ ರಾಕೇಶ್ ನಮ್ಮ ರಂಗಭೂಮಿ ಬದುಕಿನ ಒಡನಾಟ, ಸಿನಿಮಾ ಕ್ಷೇತ್ರದ ಆಕರ್ಷಣೆ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ನಾಯಕ ನಟ ರಾಕೇಶ್ ದಳವಾಯಿ ಹೇಳಿದ್ಧೇನು ?

ಹತ್ತು ವರ್ಷದ ರಂಗಭೂಮಿ ನಟನೆಯ ಬದುಕು ನನ್ನನ್ನು ಹೀರೋ ಆಗಿ ರೂಪಿಸಿದೆ, ಇದು ಧೀರ ಭಗತ್ ರಾಯ್ ಚಿತ್ರದ ನಾಯಕ ನಟ ರಾಕೇಶ್ ದಳವಾಯಿಯವರ ಮಾತು.

ಕುವೆಂಪು ಅವರು ಒಂದು ವಿಶ್ವವಿದ್ಯಾನಿಲಯವಿದಂತೆ ಅವರ ಸಾಹಿತ್ಯದ ಬಗ್ಗೆ ಒಂದಷ್ಟು ಓದಿಕೊಂಡಿದ್ದೇನೆ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಎಲ್ಲ ಜನರ ಬದುಕಿಗೆ ಅನುಕೂಲ ಮಾಡಿಕೊಟ್ಟಿದೆ. ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್ ಜಾರಿ ಮಾಡದ ಕಾರಣ ಕೇಂದ್ರ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದರು. ಅವರ ದೇವರ ದೃಷ್ಠಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕಾಗಿಲ್ಲ, ಕಾನೂನಿನ ದೃಷ್ಠಿಯಲ್ಲಿ ಎಲ್ಲರೂ ಸಮಾನರಾಗಬೇಕೆಂದು ಪ್ರತಿಪಾದಿಸಿದ್ದರು. ಅದನ್ನೇ ನಮ್ಮ ಚಿತ್ರವು ಸಾರಿ ಹೇಳುತ್ತದೆ ಎಂದರು.

ನನ್ನದು ಬಳ್ಳಾರಿಯಿಂದ ವಿಭಜನೆಯಾಗಿರುವ ವಿಜಯನಗರ ಜಿಲ್ಲೆಯ ಒಂದು ಪುಟ್ಟಗ್ರಾಮ. ಎಂ.ಎಸ್.ಡಬ್ಲ್ಯೂ ನಲ್ಲಿ ಎಂ.ಎ ಮಾಡಿದ್ದೇನೆ. ನಮ್ಮ ತಾತ ಮತ್ತು ತಂದೆಗೆ ರಂಗಾಯಣ ಕಲಾವಿದರು ರಂಗಭೂಮಿಯೊಂದಿಗೆ ಒಡನಾಟವಿದೆ. ಅವರನ್ನೇ ನೋಡುತ್ತ ಬೆಳೆದ ನನಗೆ ಸಹಜವಾಗಿಯೇ ಅದರ ಬಗ್ಗೆ ಆಕರ್ಷಣೆ ಬೆಳೆಯಿತು. ಅದು ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎಂದು ಚಿತ್ರದ ನಾಯಕ ರಾಕೇಶ್ ನುಡಿಯುತ್ತಾರೆ.

ಬ್ಯೂಟಿಫುಲ್ ಮನಸ್ಸುಗಳು ಚಿತ್ರದಲ್ಲಿ ಮೊದಲ ಬಾರಿಗೆ ಕಲಾವಿದನಾಗಿ ಬಣ್ಣ ಹಚ್ಚಿದೆ, ಮಲೆಗಳಲ್ಲಿ ಮಧುಮಗಳು ಸತತ 9 ಗಂಟೆಗೆಯ ಧೀರ್ಘಾವದಿಯ ನಾಟಕ. ಈ ನಾಟಕದ ನಾಯಕ ನಾಯಿಗುತ್ತಿಯಾಗಿ ಸುಮಾರು 400 ಡೈಲಾಗ್ ಗಳನ್ನು ಹೇಳಬೇಕಾಗಿತ್ತು. ಇಡೀ ರಾತ್ರಿ ನಡೆಯುತ್ತಿದ್ದ ಆ ನಾಟಕ ನನಗೆ ಹೊಸ ಅನುಭವವನ್ನು ನೀಡಿತ್ತು ಎಂದು ರಾಕೇಶ್ ನುಡಿಯುತ್ತಾರೆ.

ಇಷ್ಟೇ ಅಲ್ಲದೇ ಭಾರತ ಭಾಗ್ಯವಿದಾತ, ದೇವರಾಜ ಆರಸು, ಕರಿಮಾಯಿ, ಲಕ್ಷ್ಮಿಪತಿ ರಾಜನ ಕತೆಯಂತಹ ನಾಟಕಗಳು ನನ್ನ ಒಬ್ಬ ಕಲಾವಿದನಾಗಿ ರೂಪಿಸಿವೆ ಎಂದು ರಾಕೇಶ್ ಹೇಳುತ್ಥಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ