ರಾಜ್ಯದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಏಕೀಕರಣ ಸಮಿತಿಯಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನಕ್ಕೆ ರಾಜ್ಯದ ಎಲ್ಲ 21 ರೈತಸಂಘಗಳು ಒಗ್ಗೂಡಿ ಡಿಸೆಂಬರ್ ಡಿ.16ರಂದು ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಏಕೀಕರಣ ಸಮಿತಿ ಅಧ್ಯಕ್ಷ ಪಚ್ಚೆ ನಂಜುಂಡಸ್ವಾಮಿ ತಿಳಿಸಿದರು.
ಮಂಡ್ಯ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಏಕೀಕರಣ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರಿಗೆ ಆಗುತ್ತಿರುವ ಅನ್ಯಾಯ, ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ಹಲವು ಬೇಡಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಜಿಲ್ಲೆಯಿಂದ ಹೆಚ್ಚು ರೈತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಇತ್ತೀಚಿನ ವರ್ಷಗಳಲ್ಲಿ ತಾತ್ವಿಕ ಭಿನ್ನಾಪ್ರಾಯದಿಂದ ಹಲವು ಬಣಗಳಾಗಿದ್ದು, ಸಂಘಟನೆಯ ಬಲ ಕುಸಿದಿದೆ. ರೈತ ಸಂಘದ ಏಕೀಕರಣದ ಮೂಲಕ ಎಲ್ಲಾ ಬಣಗಳನ್ನು ಒಂದೇ ವೇದಿಕೆಯಲ್ಲಿ ಕರೆತಂದು ಸಂಘಟಿಸಲಾಗುವುದು. ಇದು ಮಹತ್ತರ ಬೆಳವಣಿಗೆ ಯಾಗಲಿದೆ ಎಂದು ಹೇಳಿದರು.
ರೈತ ಸಂಘಟನೆಗಳ ಏಕೀಕರಣದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಪ್ರಧಾನ ಪಾತ್ರ ವಹಿಸಲಿದ್ದಾರೆ.ಮಹಿಮಾ ಪಟೇಲ್ ಅವರು ರೈತ ಸಂಘದ ಬೆಂಬಲಕ್ಕೆ ಇದ್ದಾರೆ,ಎಂ.ಡಿ.ಸುಂದರೇಶ್ ಕುಟುಂಬ,ಬಾಬಾಗೌಡ ಪಾಟೀಲ್ ಕುಟುಂಬ ರೈತ ಸಂಘಟನೆಗಳ ಏಕೀಕರಣಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಹಂತ ಹಂತವಾಗಿ ರೈತ ಸಂಘ ಏಕೀಕರಣವಾಗಲಿದ್ದು, ಇಲ್ಲಿ ನಾವು ಯಾವುದೇ ಗುಂಪುಗಾರಿಕೆ ಮಾಡುತ್ತಿಲ್ಲ.ರೈತ ಸಂಘದಲ್ಲಿ ಬಣದ ಪರ್ವ ಮುಗಿದಿದ್ದು ಏಕೀಕರಣದ ಪರ್ವ ಆರಂಭ ವಾಗಿದೆ.ಈ ಮೂಲಕ ಸಾಮಾಜಿಕ ಬದಲಾವಣೆ, ರೈತ ಕ್ರಾಂತಿ, ರಾಜಕೀಯ ಕ್ರಾಂತಿ ಆರಂಭಿಸಲಾಗುವುದು.ಈ ಮೂಲಕ ರೈತ ಸಂಘಟನೆಗಳನ್ನು ಏಕೀಕರಣ ಮಾಡುವ ಸದುದ್ದೇಶ ಇಟ್ಟುಕೊಂಡು ಶ್ರಮಿಸುವುದಾಗಿ ಹೇಳಿದರು.
ರಾಜ್ಯ ಸರ್ಕಾರ ನಬಾರ್ಡ್ ಮೂಲಕ ಐದೂವರೆ ಸಾವಿರ ಕೋಟಿ ಸಾಲ ಕೇಳಿತ್ತು, ಕೇಂದ್ರ ಸರ್ಕಾರ ಎರಡೂವರೆ ಸಾವಿರ ಕೋಟಿ ಮಾತ್ರ ಕೊಟ್ಟಿದೆ ಅದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಲಾಗುವುದು ಹೇಳಿದರು.
ರೈತರು ಜಾತ್ಯತೀತವಾದಿಗಳು, ಎಲ್ಲಾ ಧರ್ಮಗಳಲ್ಲೂ ರೈತರು ಇದ್ದಾರೆ ಯಾವುದೇ ಧಾರ್ಮಿಕ ಸಂಸ್ಥೆ ಭೂ ಮಾಫಿಯಾ ಕೆಲಸ ಮಾಡಿದರೆ ಅದನ್ನು ರದ್ದು ಮಾಡಬೇಕು. ವಕ್ಪ್ ವಿವಾದಕ್ಕೆ ಸಂಬಂಧಿಸಿದಂತೆ ಕಾಯ್ದೆ ತಿದ್ದುಪಡಿ ಅಲ್ಲದೇ ಗೆಜೆಟ್ ಅಧಿಸೂಚನೆಯನ್ನೂ ಹೊರಡಿಸಬೇಕು. ನೂರಾರು ವರ್ಷಗಳಿಂದಲೂ ಅರಣ್ಯ ಹಾಗೂ ಗೋಮಾಳದ ಕೃಷಿ ಚಟುವಟಿಕೆಗಳಲ್ಲಿ ರೈತರು ತೊಡಗಿದ್ದು ಅವರಿಗೂ ಕೂಡ
ಆರ್ ಟಿಸಿ ಕೊಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ 15 ಲಕ್ಷದಷ್ಟು ರೇಷನ್ ಕಾರ್ಡ್ ರದ್ದಾಗಿದ್ದು, ಐದುವರೆ ಕೋಟಿ ಅಷ್ಟು ರೇಷನ್ ಕಾರ್ಡ್ ರದ್ದಾಗಿದ್ದು, ಬಡತನ ಎನ್ನುವುದು ಐಟಿ ಕಟ್ಟುವುದು ಅಲ್ಲ ಸಾಲ ತೆಗೆದುಕೊಳ್ಳಲು ಸಹ ನಾವು ಐಟಿ ತೋರಿಸಬೇಕಾಗುತ್ತದೆ ಇದ್ದೇ ಇರುತ್ತದೆ. ಐಟಿ ಕಟ್ಟುವವರೆಲ್ಲ ಶ್ರೀಮಂತರಲ್ಲ ಈ ನಿಟ್ಟಿನಲ್ಲಿ ರೇಷನ್ ಕಾರ್ಡ್ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ರೈತ ಮುಖಂಡರಾದ ಮನು ಸೋಮಯ್ಯ,ವಿದ್ಯಾಪ್ರಸಾದ್, ರಾಮಕೃಷ್ಣಯ್ಯ,ಮಂಜೇಶ್ ಗೌಡ, ಅಣ್ಣೂರು ಮಹೇಂದ್ರ, ಶಂಭುನಹಳ್ಳಿ ಸುರೇಶ,ಇಂಡುವಾಳು ಚಂದ್ರಶೇಖರ್,ಬನ್ನೂರು ನಾರಾಯಣ್,




